ಮುಳ್ಳು ಮುರಿದು ಎಳ್ಳು ಸುರಿದು
ಬೆಳ್ಳಿ ಹೂವು ಮಿನುಗಲಿ

ಜಗದ ಭೇರಿ ನೊಗದಿ ಹೇರಿ
ಯುಗದ ದೇವಿ ಬಂದಳೊ
ಮುಗಿಲ ನಾರಿ ಹಸಿರು ತೂರಿ
ಹೂವು ತೇರು ತಂದಳೊ

ಹಸಿರಿನೆದೆಯ ಹೂವು ಅರಳಿ
ಕಲ್ಪವೃಕ್ಷ ಬೆಳಗಿತು
ಹಳದು ಹೋಗಿ ಹೊಸತು ತೀಡಿ
ಯುಗದ ಬಳ್ಳಿ ಬೆಳೆಯಿತು

ಬೇವು ಇರಲಿ ಮಾವು ಇರಲಿ
ಜೇನು ಗೂಡು ಕಟ್ಟಲಿ
ಸಾವು ಅರಳಿ ನೋವು ಹೊರಳಿ
ದೇವ ಪುಷ್ಪ ಸುರಿಯಲಿ