ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ
ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ
ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು;
ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ
ಒಂದಿಷ್ಟು ಬರೀ ಕರಿಕಲ್ಲ ಗುಂಡು.
*****
ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ
ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ
ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು;
ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ
ಒಂದಿಷ್ಟು ಬರೀ ಕರಿಕಲ್ಲ ಗುಂಡು.
*****