ಯೋಗಿ ಯಾಗೈ ಯಾಗ ಹೂಡೈ
ವಿಶ್ವಶಾಂತಿಯ ಪೂಜೆಗೆ||

ವಿಷವ ನೀಡಲು ವಿಷವ ಪಡೆಯುವೆ
ವಿಷದ ಹೆಂಡವ ಕುಡಿಯುವೆ
ರಸವ ನೀಡಿ ರಸವ ಪಡೆಯುವೆ
ಸಿಹಿಯ ಸಕ್ಕರೆ ಮೆಲ್ಲುವೆ

ಬಿಚ್ಚು ಬಾಗಿಲ ಆತ್ಮ ಬಾಗಿಲ
ತೂರು ಶಾಂತಿಯ ಕಿರಣವ
ಪ್ರೀತಿ ದಾಂತಿ ಯೋಗ ಕಾಂತಿ
ಹರಡು ದೇವನ ಕರುಣೆಯ

ಗುಂಡು ಹಾರಿಸಿ ಗುಂಡು ಪಡೆದರೆ
ಮದ್ದು ರಕ್ತವ ಉಣ್ಣುವೆ
ಶಿವನ ಸತ್ಯದ ಚಂಡು ಚಿಮ್ಮಿ
ಮುತ್ತಿನಾಟವ ಆಡುವೆ