
ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ...
ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ ಮನದ ಸತ್ಯವೇ ಬೆಲ್ಲ ಎಲ್ಲಿದ್ದರೂ ತಿಳಿ, ...














