
ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ- ತಕ್ಕೊ! ಪದಗೊಳ್ ಬಾಣ! ೧ ಬಗವಂತ್ ಏನ ಬೂಮೀಗ್ ಇಳದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು- ಬಕ್ತನ್ ಮೇಲ್ ಔನ್ ಕಣ್ಣು! ೨ ‘...
ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ...
ಹಾರಿಬಂತೋಂದು ಹಕ್ಕಿ ಸಂಜೆಯಲಿ ಮೈದಪ್ಪಿ ಒಳಗೆ ಹಾರಿಬಂತೊಂದು ಹಕ್ಕಿ. ಹೊರ ಹೋಗಲರಿಯದೆ ತನ್ನವರ ಕಾಣದೆ ಬಂದ ಬಗಯರಿಯದೆ ಅತ್ತಿತ್ತ ನೋಡುತಿದೆ ಭಯದಿಂದ ನಡುಗುತಿದೆ. ಇವರಾರೊ ಹೊಸಬರು ತನ್ನನಿವರರಿಯರು ಮೊದಲಿವರು ಕಾಣರು ಬಂಧನದಿ ಬದುಕುವರು ತನ್ನ ಸೆ...
ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧|| ...
ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿ...
ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ? ಅರ್...
ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು ಸಂತೋಷದ ತಮಟೆ ಬಾರಿಸಲಿಲ್ಲ ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ ಖರ್‍ಚು ಜಾಸ್ತಿ ಎಂದು ನೊಂದರು ರ್‍ಯಾಂಕ್ ಪಡೆದಳೆಂದು ಬೀಗಿ ತಮಟೆ ಬಾರಿಸಲಿಲ್ಲ ಹೆಚ್ಚು ಓದಿದವನನ್ನು ಹುಡುಕಬೇಕಲ್ಲ ಬೆವರಿಳಿಸತೊಡಗ...













