
ಹೃದಯದಲ್ಲಿ ಬೆಳಗಿನಾ ಬೆಳಕು ತಲೆಯಲ್ಲಿ `ಮಧ್ಯಾಹ್ನ ತೇಜ’ ಮುಖದಲ್ಲಿ `ಸಂಜೆಗೆಂಪು’ ಮುಚ್ಚಿದ ರೆಪ್ಪೆಯಲಿ `ರಾತ್ರಿ’ ಯಾದಾಗ ನಾನಾದೆ `ಒಂದು ದಿನ’ *****...
ತಲೆ ಏಕೆ? ತಲೆ ಬೇಕೆ? ವಿಶಾಲ ಎದೆಯೆ ಸಾಕು ಆಕಾಶಕೆ ತಲೆಯುಂಟೆ! ಮಿನುಗುವುದು ಚುಕ್ಕಿ ಎದೆಯ ತುಂಬ ಭೂಮಿಗೆ ತಲೆಯುಂಟೆ? ಪಚ್ಚೆಪೈರು ಒಡಲ ತುಂಬ ಮಹತ್ತಾದುದರ ಸಾಧನೆಗೆ ಮನಸ್ಸಿದ್ದರೆ ಸಾಕು ಮಾರ್ಗ ತಾನಾಗಿ ಮೂಡಬೇಕು **** ...














