ಹನಿ ಹನಿಸಿ ಹನಿಗವನ
ಮಳೆಯ ಪಾಲಾಯಿತು
ಸಿಹಿ ಜೇನ ಇನಿಗವನ
ಪ್ರಿಯಗೆ ಮುಡುಪಾಯಿತು
ಮಿಣಿ ಮಿಣಿಕಿ, ಮಿನಿ ಗವನ
ಮನದ ಕೋಣೆ ಸೇರಿತು
ಸ್ವರ ಭರದಿ ಧ್ವನಿಗವನ
ಮನದ ಕೋಣೆ ಸೇರಿತು
ಸ್ವರ ಭರದಿ ಧ್ವನಿಗವನ
ಕೊರಳಲ್ಲಿ ಉಳಿಯಿತು
ಇನ್ನು ಪ್ರಕಟಣೆಗೆ ಉಳಿದದ್ದು
ಎದೆಯ ಬಡಿತದ ಪುಡಿಗವನ
ಜೀವ ಭಾವದ ಕಿಡಿಗವನ
ನಿಮಗೆ ನೈವೇದ್ಯ, ಪ್ರೀತಿ ನಮನ

*****

 

Latest posts by ಪರಿಮಳ ರಾವ್ ಜಿ ಆರ್‍ (see all)