Home / Kannada

Browsing Tag: Kannada

ಸತ್ಯ ಬೇಕೆಂದು ಜಗವೆಲ್ಲಾ ಸುತ್ತಿದೆ ನಡುವೆ ಜನರಿಲ್ಲದೆ ಮನದಲ್ಲೇ ಸತ್ತಿದೆ ನ್ಯಾಯ ಬೇಕೆಂದು ಮನೆ ಮೆನಯ ತಟ್ಟಿದೆ ಹೊರ ಬರ ಬಿಡದ ಜನ ಬಾಗಿಲೆಲ್ಲ ಮುಚ್ಚಿದೆ ದೇವರು ಬೇಕೆಂದು ಬೀದಿ ಬೀದಿ ಅಲೆದೆ ಎಲ್ಲೆಲ್ಲೂ ಜನರೆ, ಹುಸಿ ಸುತ್ತಾಡಿ ಬರಿದೆ ನೀತಿ ಬ...

ಕಲ್ಯಾಣಿಯು ಕರುಣವಾಯಿತು ನಮಗ ||ಪ|| ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು ಸೊಲ್ಲು ಸಾರಿತು ಗುಲ್ಲುಎನಿಸುತಲಿ ||ಅ.ಪ.|| ಕಲ್ಯಾಣದಿಂ ಹೊರುಟು ದಾರಿ ಹಿಡಿದಿರುತಲಿ ಶಿಗ್ಗಲಿಯೊಳು ಬಾಯಲಿ ನುಡಿದ ಪರಿಪರಿಯ ಮೋಹಕ್ಕೆ ಬೆರೆತು ಕಾಲಿಡುತಲಿರೆ ಸರಸದಿ ಭೀಮಗ...

– ೧ – ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ...

ಹಸಿರು ಸೀರೆಯುಟ್ಟು…. ಭೂಮಡಿಲ… ಮುತ್ತಿಟ್ಟು ಜಲ-ತಾರೆಗಳ ಅಪ್ಪಿ ಹರಿದ್ವರ್ಣದ ಆಲಿಂಗನ ನಿತ್ಯ ಕಾನನಗೋಡೆ ಮಾದಾಯಿ ಮಡಿಲು ಏರು ತಗ್ಗುಗಳ… ಬೆಟ್ಟಗಳ ನಡುವಲಿ ಜುಳು… ಜುಳು… ಸುಮಧುರ ನಿಸರ್ಗ ನಿನಾದ ಸಂಗೀತ ಚೆಲ್...

ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ ನೀರವ ಉಷೆಗೆ ಸಂಧ್ಯಾ...

ಹುಟ್ಟಿನ ಕಾರಣ ತಿಳಿಯದೇ ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ ಅನಂತದಲ್ಲಿ ವಿಲೀನವಾಗುವುದಷ್ಟೇ ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ ನೆನಪು – ಮೂಲಭೂತವಾಗಿ ಇರುವುದು ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು ಅನಂತ ದಿಕ್ಕುಗಳು.  ಹೌದು, ಮೂಡಣ, ಪಡ...

ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ ಸಂಗಾತಕೆ ಜೀವವೇ ಇಲ್ಲವೆಂಬೆನ್ನ ಹಂಬಲ ನೀನು ಜೊಗೆಯಾದ ಪರಿಯ ನಾನೇ...

ಮಹಾನಗರದ ಮುಖ್ಯ ರಸ್ತೆಯಾಗಿದ್ದು ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ ತಲೆ ಎತ್ತುವ ಧನ್ಯತೆ ಕಳೆದಿತ್ತು. ಬಾಯಾರಿದ ಭೂ ಒಡಲು ಹಸಿರಾಗಿಸಲು ಧಾರಾಕಾರ ವರುಣನ ವಿಜಯೋತ್ಸವ ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ ಮಾನ ಬಿಟ್ಟವರು ನನ್ನ ಮಾನ...

ಮನುಷ್ಯರು ಆಕ್ರಮಣ ಮಾಡುವ ಮತ್ತು ರಕ್ಷಣೆ ಮಾಡುವ ವಿಧಾನವನ್ನು ಕಲಿತರು. ಇದರಿಂದಾಗಿ ಆಗುವ ಪರಿಣಾಮಗಳಿಗೆ ಒಬ್ಬರನ್ನೊಬ್ಬರು ಅಪಾದಿಸತೊಡಿದರು. ಆದರೆ ಎರಡೂ ಕೈಸೇರದೇ ಚಪ್ಪಾಳೆಯಾಗದು ಕೋಟೆಯನ್ನು ಕಟ್ಟುವುದೇ ಮೊದಲನೇ ತಪ್ಪು. ಕೋಟೆ ಕಟ್ಟುವವರು ತಮ್...

ಬರಿದೆ ಕಳೆದುದು ಕಾಲ ಬರೆಯಲಾರದೆ ಮನವ ತಿರುಗಿ ಬಾರದ ದಿನಗಳ ಭಿತ್ತಿ ಚಿತ್ತಾರದಲಿ ಕನಸುಗಣ್ಣಿನ ಕಾವ್ಯ ಕಳೆದುಕೊಂಡಿದೆ ದನಿಗಳ ಯಾರದೋ ಹೋಮ ವೈವಾಹಿಕದ ಧೂಮದಲಿ ಸೂರೆ ಹೋದುದು ರಾಗವು ವರ್ಣರಂಜಿತ ಕದಪು ಯಾರಿಗೋ ನೈವೇದ್ಯ ಇಂಗಿ ಹೋದುವೆ ಕಂಬನಿ ಎಲ್ಲ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...