Home / Kannada Poetry

Browsing Tag: Kannada Poetry

ಹಸಿದು ಹೊಟ್ಟೆಗಿಲ್ಲವೆಂದು ಕುಸಿದು ಬಾಯಿ ಬಿಡುವ ಜನರ ಕರುಳು ಸುಡುವ ಒಡಲ ಬೆಂಕಿ ಕೆರಳಿ, ಬಾನಿನುದ್ದ ಎದ್ದು, ಉರಿಯುತಿರಲು, ಅವರ ಬಾಯಿ ಯಿಂದ ಬೀಸಿ ಬರುವ ಬೆಚ್ಚ ನುಸಿರು, ಕಿಡಿಗಳನ್ನುಗುಳಿತು. ಇಂಥ ಕಿಡಿಯನೊಂದು ಎನ್ನ ಒಡಲು ಒಳಗೆ ಧರಿಸಿತು. ಬೀ...

೧ ಇದು ಹೇಗೆ ಬಂದಿತೈ ಈ ಹೊಸ ವಿಷಾದ- ಇದೆಯೆಂದು ತಿಳಿದಿರಲು ಗೆಳೆಯನ ಪ್ರಸಾದ? ೨ ಮಿಶ್ರಭಾವೋದ್ರೇಕತಾಪವೇಕೆ? ಅಶ್ರುಜಲಧಾರಾಪ್ರಪಾತವೇಕೆ? ೩ ತಿಳಿದೊ ತಿಳಿಯದೆಯೊ ಏನಾಯಿತೋ ರೇಯಾ! ಗೆಳೆಯ! ಗೆಳೆಯರ ಗೆಳೆಯ! ಬಿಡುವರೇ ಕೈಯಾ? ೪ ಜನ್ಮಾಂತರದ ಪುಣ್ಯ ತ...

ಮಿಂಚಿನ ಗೊಂಚಲು ಸುತ್ತಲು ಎತ್ತಲಿ, ಸುಳಿಸುಳಿಗಾಳಿಯ ನಡುಎಡೆಪಥದಲಿ ಕಪ್ಪನೆಮೋಡದ ಮುಬ್ಬಿನದೆಸೆಯಲಿ ಮಿನಿಗಿತು, ಮೆರೆಗಿತು, ಕಿರುತಾರೆ! ಪಡುವಲನಾಡಿನ ಮಲೆಯಸ್ತೋಮದಿ, ಮೂಡಲತಗ್ಗಿನ ಹಚ್ಚನೆಹಳುವಲಿ ನಾಡಿನ ತೀರದ ಸುಳಿವಿನ ಗೆಲುವಲಿ ದೋರಿತು, ಮೆರೆಯ...

೧ ಗಡಿಯಾರದಲಿ ಗಂಟೆ ಹತ್ತಾಯಿತು! ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ ಕೈಯ ಕುಲುಕಿಸಿ ಕಾಲ ಗೆಲುವಾಯಿತು; ಕುಳಿತಿರುವ ಕೋಣೆಯಲಿ ಕಂದೀಲ ದೀಪವದು ಕುರುಡು ಕುರುಡಾಗೆನಿತೊ ಉರಿಯುತ್ತಿದೆ. ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ ನೋಡಬೇಕೆ...

ಮಾಟ ಮಾಟ, ಇದು ಯಾವ ಆಟ ಈ ಬಟಾ ಬಯಲಿನಲ್ಲಿ. ಅಚ್ಚ ಅರಿವು ಬರಿ ಬಚ್ಚ ಅರಿವು ಹೊಸ ಹೊಚ್ಚ ಅರಿವಿನಲ್ಲಿ. ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ ಹೊರ ಅರಿವಿನಲ್ಲಿ ನೀನು ತೆರೆ ಅರಿವಿನಲ್ಲಿ ಬರೆ ಅರಿವಿನಲ್ಲಿ ಕೊರೆ ಅರಿವಿನಲ್ಲಿ ನೀನು. ಮುರಿವರಿವಿನಲ್...

ಹೊಸ ವರುಷದ ಹೊಸ್ತಿಲಿನಲಿ ಹೊಂಗಿರಣದ ಚೆಲುವು ಹೊಸಕಾಲದ ಹೊಸ ತಿಳಿವಿನ ನಲವಿನ ನವ ಜಲವು ಹೊಸತಾಗಿಸಿ ಹಳ ಬಾಳನು ತರಲಿದೆ ಮಾ ಗೆಲುವು ಕಸ-ಕಸವರ ವಾಗಲಿದೆ ಬಿಸ-ರಸದಲಿ ಮುಣುಗಲಿದೆ! ಕಿವಿ ಕೇಳದ ಕರ್ಕಶ ದನಿ ಇಂಚರವಾಗಲಿದೆ ಸವಿ ಸೂಕ್ಷ್ಮದ ಸುಂದರ ತನು ...

ಕಣ್ಮುಚ್ಚಿ ಕಣ್ದೆರೆಯುವಷ್ಟರೊಳು ಕಾಣದಾಗಿರುವ ಹೊಸ ಗೆಳೆಯನೇ ಕೇಳು ಕೇಳು ಕಣ್ಮುಚ್ಚಿಕೊಂಡರೂ ಕೂಗಿ ಕರೆಯುವೆ ನಿಲ್ಲು ಕಿವಿಗೊಟ್ಟು ಕೇಳು ಕೇಳು! ಕಾಲ ಪುರುಷನ ವೇಳೆಗನುಗುಣದಿ ತಪ್ಪದಲೆ ತಿರುಗುವದು ವಿಶ್ವವಿನ್ನು ಬಾಳುವದು ಬೀಳುವದು, ನಮ್ಮ ಕೈಯಲ್...

೧ ಇಂದು ಬಾಗಿಲವರೆಗು ಇದಿಗೋ ಬಂದ ಆ ದೊರೆ ಒಳಗೆ ಬರಲಿ- ಲ್ಲೆಂದು ಹೃದಯವೆ ನಿನ್ನ ಮನದೊಳು ಹೆದರಿ ಬೆದರುವೆಯಾ? ೨ ಒಳಗೆ ಬಂದರೆ ಈಗ ತುಂಬುತ ತುಳುಕುತಿಹ ಕಣ್ಣೀರಿನಿಂದಲಿ ತೊಳೆಯುವನು ಇವ ತನ್ನ ಪಾದವ- ನೆಂದು ತೆರಳಿದನೋ! ೩ ಪ್ರೀತಿಬಾಧ್ಯನೆ ಪೀತಿ ನ...

[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧ...

1...45678...184

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...