Home / Hannerdmath

Browsing Tag: Hannerdmath

ಓ ಓ ತಾಯೆ ಭೋಭೋ ಮಾಯೆ! ಬಾಬಾ ತಾತಾ ತಾರೆಗಳಾ|| ಸಕ್ಕರೆ ಹಾಲಿನ ಅಕ್ಕರೆ ಅವ್ವಾ ಹಸಿದೆನು ಬಿಸಿಲಲಿ ಬಾರಮ್ಮಾ ಕೆನೆಮೊಸರಾಲಿನ ಜುಂಜುಂ ಜೋತಿಯ ತುಂತುಂ ತೂಗುತ ಹಾಡವ್ವಾ ಹಸಿರಿನ ಹೂವಿನ ಹಕ್ಕಿಯ ಹಾಡಿನ ಹಣ್ಣಿನ ಗೊಂಚಲ ಚೆಲುವವ್ವಾ ಮುಗಿಲಿನ ತೇರಿನ ...

ಓ ನೋಡು ಮಾನವತೆ ನೀ ಕಾಣು ದಾನವತೆ ಕಣ್ದೋರು ಕರುಣೆಯಿಂ ವಿಜಯೇಶನೆ ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ ತಾಳ ತಪ್ಪಿದೆಯಯ್ಯ ಸೂತ್ರಧರನೆ ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ ಸಾಕು ಬಿಸಿಲಿನ ಹಲಿಗೆ ಬೇಕು ಜ...

ಗಾನ ಮಾನಸ ಗಗನ ಅರಳಿತು ವಿಶ್ವ ಕಾನನ ತಟದಲಿ ಆತ್ಮ ವೀಣಾ ತಂತಿ ತುಡಿಯಿತು ಝನನ ಝೇಂಕರ ನಟಿಯಲಿ ಮಾಯೆ ಶಿಲ್ಪಿನಿ ರೂಪ ಬಲ್ಪಿನಿ ಕಟಿಯ ಕಂಪಿಂ ಕುಣಿದಳು ಎದಯ ಲಿಂಗನ ಆತ್ಮ ಲೋಲನ ತಪವ ಚಂಛಂ ಮಿಡಿದಳು. ಬಣ್ಣವಾಯಿತು ಬದುಕು ಮೂಡಿತು. ರಾಗ ಯೌವನ ತಂದಳು...

ಯೋಗ ಪುಷ್ಪಾ ಮೊಗ್ಗು ಬಿಚ್ಚಲಿ ಜೋಗ ಶಕ್ತಿಯ ಚಿಮ್ಮಲಿ, ತ್ಯಾಗ ದೇವತೆ ತಪದ ದೇವತೆ ಆಗು ಭಾರತ ಪುರುಷನೀಂ ಕಲಹ ಯುಗದಿಂ ಕರುಣ ಯುಗಕೆ ಶರಣು ಶರಣು ಎನ್ನು ನೀಂ ಸಾಕು ಕತ್ತಲೆ ಶವದ ಬತ್ತಲೆ ನೂಕು ಕಾವಳ ಕಲಿಯುಗಾ ತಾಗು ಯೋಗಕೆ ಬಾಗು ಭಾಗ್ಯಕೆ ಜೀಕು ಸತ...

ಏಳು ಕುದುರಿಯ ಗಾಡಿ ಭಾಳ ಹುರುಪಿಲೆ ಏರಿ ಗಾಲಿ ಮುರಿದುದ ಕಂಡು ಗಾಬರ್‍ಯಾದೆ ಬೀಳಲಾರದ ಜನ್ಮ ಆಳಕೊಳ್ಳಕ್ಕೆ ಬಿದ್ದು ಗೂಳಿಬಿದ್ದುದ ಕಂಡು ಗುಮ್ಮಗಾದೆ ಕತ್ತಲೆಯ ದರ್‍ಯಾಗ ಕೈಕಾಲು ಮುರಿದಾಗ ಎತ್ತಯ್ಯ ಮೇಲೆತ್ತು ಪ್ರೀತಿ ತಂದೆ ಕುಂಟೆತ್ತು ತುಂಟೆತ್ತ...

ನನ್ನ ಗೆಳೆಯಾ ಚಿನ್ನ ತೆನೆಯಾ ಆಗು ಕಾರಣ ಪುರುಷ ನೀಂ || ತೋಳ ಬಲವು ತೋಳವಾಗದೆ ಬಿದ್ದ ಮಕ್ಕಳ ಎತ್ತಲಿ ಬುದ್ದಿ ಬಲವು ಬೂದಿಯಾಗದೆ ಬೆಂದ ಬಡವರ ಅಪ್ಪಲಿ ಹಸಿರು ಆಗೈ ಹೂವು ಆಗೈ ಹಣ್ಣು ಹಂಪಲ ಸುರಿಯು ನೀ ಜಂಗು ಕಬ್ಬಿಣವಾಗಬೇಡೈ ದ್ರಾಕ್ಷಿ ಗೊಂಚಲವಾಗು...

ಮೊನ್ನೆ ನಾನು ಕಾರು ಓಡಿಸುತ್ತಿದ್ದಾಗ ಸಮೀಪ ಕಂಡ ಒಬ್ಬ ಪೊಲೀಸಿನವನಿಗೆ ನ್ಯಾಶನಲ್ ಪಾರ್ಕಿನ ದಾರಿ ಕೇಳಿದೆ. ಆತ ಹೇಳಿದ – ‘ಡೆಡ್ ಎಂಡ್‌ವರೆಗೂ ಹೋಗಿ. ನಂತರ ರೈಟಿಗೆ ತಿರುಗಿ…’ ಡೆಡ್ ಎಂಡ್…. ಶಬ್ದ ಕೇಳುತ್ತಲೇ ನಡುಗಿಬಿಟ್ಟೆ...

ಓ ದೇವಿ ಓ ತಾಯಿ ವಿಶ್ವ ಸುಂದರ ಮಾಯಿ ಕೂಗವ್ವ ವಿಶ್ವದಲಿ ದೇವಗಾನಾ ನಿನ್ನ ದಿವ್ಯದ ಬೆಡಗು ಬೆಳಗಿನಾತ್ಮದ ಕೊಡಗು ಬಾರವ್ವಾ ಉಣಿಸವ್ವಾ ಕ್ಷೀರಪಾನಾ ತಾಯಿಯಂದರು ನೀನೆ ತಂದೆಯೆಂದರು ನೀನೆ ಯೋಗ ಮಾಯೆಯು ನಿನ್ನ ಲೀಲೆಯಪ್ಪಾ ಭುವಿಯ ಮಕ್ಕಳ ಸೊಕ್ಕು ಕಾಮದ...

ಬೆಳಕು ಚಿಮ್ಮಿತು ಬೆಳ್ಳಿ ಹಾಡಿತು. ದಿವ್ಯ ಬಾಗಿಲು ತೆರೆಯಿತು || ಎಡದ ಕಡಲಿನ ನಿಬಿಡ ಒಡಲಲಿ ಜ್ಯೋತಿ ತೆಪ್ಪವು ತೇಲಿತು ತೆರೆಯ ಹೊರೆಯಲಿ ನೊರೆಯ ನೆಲೆಯಲಿ ಆತ್ಮದೀಪವ ತೂರಿತು ಮುಗಿಲ ಬಾಂಡಿಯ ಕರಿಯ ಕಂಠವ ಮಿಂಚು ಕಿರಣದಿ ತೊಳೆಯಿತು ದೂರ ದಂಡೆಯ ಕರ...

ವಿಶ್ವ ನಕ್ಷೆಯ ಬರೆದ ಋಷಿಯೆ ಆತ್ಮ ಪಕ್ಷಿಯ ಹಾರಿಸು ಬಾಳ ಕಾವ್ಯವ ಹೆಣೆದ ಕವಿಯ ಜೀವ ಶಕ್ತಿಯ ಉಕ್ಕಿಸು ನೋಡು ಮೂಡಣ ನೋಡು ಪಡುವಣ ನೋಡು ಕಡಲಿನ ಕೊಂಕಣ ನೋಡು ಚುಂಬನ ಚಲುವಿನೌತಣ ನೋಡು ಕಾಮದ ರಿಂಗಣ ತಾಳ ತಪ್ಪಿತು ಕಾವ್ಯ ಕೆಟ್ಟಿತು ವಿಶ್ವ ತಂಗುಳವಾಯ...

1...45678...14

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...