Home / ಸಂತಳ ಜೋಳಿಗೆಯ ರೊಟ್ಟಿ

Browsing Tag: ಸಂತಳ ಜೋಳಿಗೆಯ ರೊಟ್ಟಿ

ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ. ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ ಒಂದು ಚುಟುಕು ನೆಮ್ಮದಿಯ ಚೂರು ದಯಾಮಯ ಅಲ್ಲಾಹ್‌ನಲಿ ಕೈಯತ್ತಿ ಬೇಡುತ್ತಿರುವೆ ನಮಗೆ ಮನುಷ್ಯತ್ವದ ವರವ ನೀಡೆಂದು. ಜಗತ್ತು ಎಷ್ಟೇ ಹೊತ್ತಿ ಉರಿದರೂ ಏನಂತ...

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು ದುಡಿದು ದುಡಿದು ಸವೆದು ಹೋದ ದೇಹಗಳು ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು ಉಸಿರುಗಟ್ಟಿಸುವ ನಿಯಮಗಳು ನಡುವೆ ಸಮಾಧಿಯಾದ ಬದುಕು. ಗೋಡೆಯಾಚೆ ತೂಗುತ್ತಿದೆ ನೋಡ...

ಇಂದಿನ ಸತ್ಯವನು ಮುಂದಿನ ತಲೆಮಾರಿಗೆ ಸಾಗಿಸುವ ವಾಹಕ ಸತ್ಯದ ಪಕ್ಷಪಾತಿ ಗಟ್ಟಿ ಬೆಟ್ಟದಂತೆ ನಿಲ್ಲುವುದು ಎಂದಿಗೂ ನನ್ನ ಲೇಖನಿ ಧರ್‍ಮಕ್ಕೆ ಬದ್ದವಾಗಿ ಅಧರ್‍ಮಕ್ಕೆ ಶತ್ರುವಾಗಿ ಸಾತ್ವಿಕತೆಯ ಪರವಾಗಿ ಎದ್ದು ನಿಲ್ಲುವದು ಎಂದಿಗೂ ನನ್ನ ಲೇಖನಿ! ಸಾತ...

ಕಾಗೆಯ ಗೂಡಿನಲ್ಲಿ ಕೋಗಿಲೆಯ ಮರಿ ಪರಪುಟ್ಟ ಹೇಗೆ ಬೇರ್‍ಪಡಿಸುತ್ತದೆ ನೋಡು ಇಂಚರ! ಭೂಮಿಯ ಗರ್‍ಭದ ಒಳಗೆ ಬೆಂಕಿ ಲಾವಾದ ಹರಿವು ಹೇಗೆ ಹುಟ್ಟುತ್ತವೆ ನೋಡು ಬೆಂಕಿ ಪರ್‍ವತ! ಬೆಟ್ಟದ ಕಲ್ಲಿನ ಒಡಲಲ್ಲಿ ಹಸಿರು ಪಾಚಿ ನೀರಿನ ಒಸರು ಹೇಗೆ ಹುಟ್ಟುತ್ತದೆ...

ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ ಅಮ್ಮಿ ಕಟ್ಟು...

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು ಗೃಹಬಂಧನದ ಜೈಲಿನ ಗೋಡೆಗಳಿಗೆ ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು. ಅರವತ್ತೈದರ ತೆಳ್ಳನ ದೇಹದಲ್ಲಿ ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು. ನೀಳ ದ...

ನನ್ನ ಅಖಂಡ ಪ್ರೀತಿಯನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಭವ್ಯ ಇಮಾರತ್ತು ಕಟ್ಟಿಸಿ ಅದರಲ್ಲಿ ನಿನ್ನ ಗೋರಿ ಮಾಡಿರಬಹುದು. ಆದರೆ ನನ್ನ ಪ್ರಿಯತಮನ ಹೃದಯದಲೇ ಕಟ್ಟಿಸಿದ ಭಾವ...

ಐ.ಟಿ., ಬಿ.ಟಿ. ಕಂಪನಿಗಳು ನಗರದ ಜನಜಂಗುಳಿ ಝಗಝಗಿಸುವ ದೀಪಾಲಂಕಾರ ಕಣ್ಣು ಕುಕ್ಕುವ ಬೆಳಕು ತಲೆಸುತ್ತುವ ಎತ್ತರದ ಬಂಗಲೆಗಳು. ಗಿಜಿಗುಡುವ ಜನಜಂಗುಳಿಯ ಮಧ್ಯೆ ಏಕಾಂಗಿಯಾಗಿದೆ ಒಂಟಿ ಬದುಕು ಮನುಜ ಮನುಜರ ಮದ್ಯ ತುಂಬಲಾಗದ ಆಳ ಕಂದಕ ಎಷ್ಟೊಂದು ಗಹನ?...

ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಬಯಲ ನಡುವಿನ ...

1...45678...10

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...