
ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು ತಿಳಿ ಮೋಡದಂತೆ ಮನ ಘನವಾಗು ಬ್ರಹ್ಮಾಂಡದಂತೆ ಮನ ಸಮಸ್ತಲ...
ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ ದೇವರ ಜಂಬೂಸವಾರಿ ದೇವರ ಪೂಜೆಯ ದೇವರ ...
ಬಾಗಿಲು ಬಡೀತಾರೆ ಯಾರಿರಬಹುದು? ಅದೂ ಇಂಥ ಹೊತ್ತು ಬಡ ಬಡ ಸದ್ದು ಯಾರಿರಬಹುದು? ಬಾಗಿಲ ತೆರೆಯೋ ಧೈರ್‍ಯವಿಲ್ಲ ಯಾರಿರಬಹುದು-ಪೊಲೀಸರಿದ್ದಾರು ಪಾರ್‍ಟಿಯವರಿದ್ದಾರು ಎಡಪಕ್ಷ ಬಲಪಕ್ಷ ಜಾಸೂಸಿನವರು ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ ಬಂದವನೊ...
ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ ಕಣ್ಣ ಮಿಟುಕಿಸಿ ಕಂಬಳಿ ಸರಿಸಿ ಮೂಡಲ ಮನೆಯೊಳಗೆ ಸೂರಪ್ಪ ಆಗಲೆ ಎದ್ದೆದ್ದು ಬೆಳಕ ಕಳಿಸ್ಯವನೆ ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ ಬೆಟ್ಟಪ್ಪ ತಲೆಯೆತ್ತಿ ಕುಂತವನೆ ಮೋಡದ ಮರಿಗಳ ತಲೆ ತಡವಿ ಹೇಳ್ಯವನೆ ಕುರಿಗಳ...
ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್‍ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬ...
ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ ಅಟ್ಟಿದ ಗಾಳಿ ಸುಳಿಸುಳಿವ ಗಾಳಿ ಸುಳಿಯದ...
ಒಲವೆ ನನ್ನ ಮೊಲವೆ ಮುದ್ದೆ ಬಾಲದ ಮುದ್ದು ಮೈಯ ಪಿಳಿಪಿಳಿ ಕಣ್ಣ ಬಿಳಿಬಿಳಿ ಬಣ್ಣ ಚುರುಕು ಕಿವಿಗಳ ಚೂಪು ಹಲ್ಲ ಮೊಲವೆ ನನ್ನ ಒಲವೆ ಸದ್ದಿಲ್ಲದ ತುಪ್ಪುಳ ಪಾದ ಯಾರೂ ಇಲ್ಲದಾಗ ಲಾಗ ಎಲ್ಲಿಂದೆಲ್ಲಿಗೆ ಓಡುವೆ ಮೊಲವೆ ನನ್ನ ಒಲವೆ ಹಸಿರ ಬಯಲ ಹೂವೆ ಭೂತ...
ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹ...
ಯರಲವವೆಂಬುದು ಸತ್ಯ ಯರಲವವೆಂಬುದೆ ನಿತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಅ ಆ ಇ ಈ ಮಿಥ್ಯ ಎ ಏ ಐಯೂ ಮಿಥ್ಯ ಋ ೠ ಎಂಬುದು ಮಿಥ್ಯ ಒ ಓ ಔವೂ ಮಿಥ್ಯ ಅಂ ಅಃ ಭಾರೀ ಮಿಥ್ಯ ಯರಲವವೆಂಬುದೆ ಸತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಕ ಖ ಗ ...














