ಸ್ವಸ್ಥವಾಗು ಮನ ಶಾಂತವಾಗು ಮನ
ದಿನದಿನವು ನವೋನ್ಮೇಷವಾಗು ಮನ

ಸ್ವಚ್ಛವಾಗು ಅಚ್ಛೇದದಂತೆ ಮನ
ಸಮಚಿತ್ತವಾಗು ಆಕಾಶದಂತೆ ಮನ

ಗಹನವಾಗು ಸಮುದ್ರದಂತೆ ಮನ
ಉನ್ನತವಾಗು ಪರ್‍ವತದಂತೆ ಮನ

ಹಗುರಾಗು ತಿಳಿ ಮೋಡದಂತೆ ಮನ
ಘನವಾಗು ಬ್ರಹ್ಮಾಂಡದಂತೆ ಮನ

ಸಮಸ್ತಲೋಕ ಚೈತನ್ಯವಾಗು ಮನ
ಸ್ವರ್‍ಗ ಮರ್‍ತ್ಯಗಳ ಸೇತುವಾಗು ಮನ

ವಿಸ್ತಾರವಾಗು ಮನ ಚಿತ್ತಾರವಾಗು ನೀ
ಸತ್ಯವಾಗು ಮನ ನಿತ್ಯವಾಗು ನೀ

ಅಮೃತತ್ವವಾಗು ಮನ ಋತತತ್ವವಾಗು ಮನ
ಓ ಮನ ನಮೋಂ ನಮಃ
*****