ನೀರ ಕಪ್ಪೆ, ಮರದ ಕಪ್ಪೆ

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು.  ಹಲವು ನದಿಗಳ ನೀರು ಕುಡಿಯುವೆನು.  ಏಳು ಸಮುದ್ರಗಳನ್ನು ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವುದಿದೆ.  ಮುಳುಗಿದ ಹಡಗುಗಳಿಂದ ನಾನೊಂದು...

ಏಡಿಗಳು (ಸಿಹಿ ನೀರಿನ)

ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು.  ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ.  ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ...

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ?  ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ.  ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಹೇಗೆ ಎಂಬುದನ್ನಷ್ಟೆ ನೋಡೋಣ. ...

ಕಂಬಳಿಹುಳ

ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು. ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ ಅಲ್ಲಲ್ಲಿ ಹೊಳೆಯುವುದು.  ಕಾಣುವುದಕ್ಕೆ ಮಾತ್ರ. ಮುಟ್ಟಿದರೆ...

ಬೆಲೂನು

ಒಂದು ದೊಡ್ಡದಾದ ಬೆಲೂನನ್ನು ಕಂಡರೆ ಎಲ್ಲರಿಗೂ ತಮಾಷೆ ಅದನ್ನು ಹಿಡಿದೆತ್ತಿ ಒಡೆಯಬೇಕೆನ್ನುವ ವಿಚಿತ್ರ ಆಸೆ ಆದರೆ ನಿಜಕ್ಕೂ ಒಂದು ದೊಡ್ಡ ಬೆಲೂನಿನಷ್ಟು ಮಜವಾದ ವಸ್ತು ಈ ಲೋಕದಲ್ಲಿ ಇನ್ನೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತು ಉದಾಹರಣೆಗೆ...

ಬೆದರುಗೊಂಬೆ

ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ.  ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...

ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ ಬೃಹತ್ತಾದ ತೈಲಚಿತ್ರಗಳು...

ದೇವರು

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು ಕರೆದುಕೊಂಡು...

ರೆನೆಯನ್ನು ಕಂಡಮೇಲೆ

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ ನಾವು ಗಮನಿಸುವುದೆ ಇಲ್ಲ. ...

ಬಿಳಿಬೆಕ್ಕು, ಕರಿಬೆಕ್ಕು

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್ರಗಳಂತೆ ನಿದ್ದೆಹೋಗಿವೆ. ಕರಿಬೆಕ್ಕಿನ ಕಣ್ಣುಗಳು ಬೆಂಕಿಬಿದ್ದ ಕಾಡುಗಳಂತೆ...
cheap jordans|wholesale air max|wholesale jordans|wholesale jewelry|wholesale jerseys