Home / Kannada Poem

Browsing Tag: Kannada Poem

ಹಕ್ಕಿ ಹಾರುತವ ನೋಡಽಽಽ ಹಕ್ಕಿ ಪಿಕ್ಕಿ ರಂಗು ಚೆಲ್ಲಿ ಭೂಮಿ ಮ್ಯಾಗ ಹಸಿರ ಹಾಸುತ್ತಾವ ನೋಡ || ಹಸಿರು ಹಕ್ಕಿ ಉಸಿರನಂಟು ನೆಂಟಾ ನಂಟು ಬಳಗ ಕರೆದು ಸುವ್ವಾಲಾಲಿ ಹಾಡುತ್ತಾವ ನೋಡ || ಬಾನಾಡಿಯಾಗ ಬಣ್ಣ ಬಣ್ಣದ ಒಕುಳಿಯಾಡಿ ಕಾಮನಬಿಲ್ಲು ಹೂಬಾಣ ಹೂಡು...

ಕಟ್ಟುವೆವು ನಾವು ಬಾಹ್ಯ ಬಲು ಸುಂದರ ಮನೆಗಳ ಸಾವಿರವರುಷ ಬದುಕುವವೆಂಬ ಭ್ರಮೆಯಲಿ| ಕಲ್ಲು, ಕಬ್ಬಿಣ ಸಿಮೆಂಟಲಿ ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ|| ಬಹು ಅಂತಸ್ತಿನ ಮನೆ ಬಾರೀ ಬೆಲೆಬಾಳುವ ಮನೆ| ವೈಕುಂಠದಂತಹ ಬಾಗಿಲು ಹತ್ತು ಕೊಠಡಿಯ ನೂರಾರು ಚದು...

ಮಂಗಳಕರ ದಿನದಾಗಮನದ ಘೋಷಣೆಯಾಗಿ ಕತ್ತಲೆ ಚಾಪೆಯ ಸುತ್ತುತಿದೆ ಬಾನಿನ ಕಣ್ಣುಗಳು ಮಂಕಾಗುತಿವೆ ಭೂಮಿಯ ಕಣ್ಣುಗಳು ತೆರೆಯುತಿವೆ ಹಕ್ಕಿಗಳು ಕಲರವ ಎಬ್ಬಿಸಿವೆ ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ. ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ ಮೊಳಗುತಿವೆ ಶ...

ದೇಹದೊಳಗೊಂದು ದೇಹ ಬೆಳೆಸಿದಳು ಇನ್ನೊಂದು ಜೀವ ಹೊರುವಳು ಗರ್ಭದಿ ನವಮಾಸ ಹೆರುವಳು ನವ ರಂಧ್ರದ ಕಾಯ. ಭುವಿಗೆ ತರುವ ತವಕದಿ ತಾನು ತಿಂದು ಸಹಿಸಿ ಸಾವಿರ ನೋವು ಆ ನೋವಿಗೆ ಸರಿ ಸಾಟಿ ಯಾರಿಹರು? ಹೆತ್ತಿರುವ ಮಗುವಲ್ಲದೇ ಮತ್ತಾರು. ಜನ್ಮವಿತ್ತಾಕ್ಷಣ ...

ನೀನು ದೇವ ನಾನು ಭಕ್ತ ಎಂದರಾರು ಹುಚ್ಚರು ನಾನೆ ದೇವ ನೀನೆ ಭಕ್ತ ನೆಂದು ಯಾರು ತಿಳಿವರು ||೧|| ವರ್ಷ ಕೋಟಿ ವಿರಸ ಕೋಟಿ ಯಲ್ಲಿ ಹಲ್ಲಿ ಯಾದೆನೆ ಬರಿದು ಬರಿದು ಬಚ್ಚ ಬರಿದು ಬರಿಯ ಬಯಲ ಉಂಡೆನೆ ||೨|| ನನ್ನ ಕಂಠ ನನ್ನ ಕಾವ್ಯ ನನ್ನ ಕಲ್ಪ ಕನಸು ನೀ...

ಹೂವಾಡಗಿತ್ತಿ ಹೂವಾಡಗಿತ್ತಿ ಏಕೆ| ಹೀಗೆ ಆಡುತ್ತೀ || ಘಮ ಘಮಿಸೋ ಹೂವು ಮನವ ತಟ್ಟಿತೇ ನಿನಗೆ ಹೇಳೆ ಮಲ್ಲಿಗೆ ಅರಳೆ || ನಿನ್ನವನ ನೆನಪು ಕಾಡಿತ್ತೆ ನೀನು ಕಟ್ಟಿದ ಹೂ ಮಾಲೆ ನಾಚಿ ತಗ್ಗಿ ಸೆಳೆಯಿತು ನಿನ್ನ || ನೀನು ಕಟ್ಟಿದ ಹೂ ಬಿಡಿ ಬಿಡಿಯಾಗಿ ಮ...

ಕ್ಷಮಿಸು ನೀನು ಇನ್ನೆಂದೂ ನಾನು ಕುಡಿಯುವುದಿಲ್ಲ| ಕ್ಷಮಿಸು ನೀನು ಮದುವೆಗೆ ಮುನ್ನ ಯಾವ ಚಟವಿಲ್ಲವೆಂದು ಸುಳ್ಳುಹೇಳಿ ಮದುವೆಯಾದೆ ನಿನ್ನ|| ನಿನ್ನ ಪ್ರೀತಿ ಮಮತೆಗಿಂತ ಹಿರಿದಲ್ಲ ಈ ಚಟ ನಿನ್ನ ಸನಿಹವಿರುವುದಕಿಂತ ಸುಖವೇನಿಲ್ಲ ಈ ಚಟ| ನಿನ್ನ ಪೇಮದ...

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು ಅಂಗಳದಿ ಸ...

ನಿರಾಳ ಮನುಜ ನಿರಾಳ ಬದುಕಲಿ ನಡೆಯುವ ಆಗು ಹೋಗುಗಳಿಗೆ ಹಣೆ ಬರಹವೆಂಬ ಹಣೆ ಪಟ್ಟಿಯ ಕಟ್ಟಿ ನೀನಾಗುವೆ ನಿರಾಳ ಜನನಕು, ಮರಣಕು ನಡುವೆ ಈ ಜೀವನಕು ಸಫಲತೆಗು, ವಿಫಲತೆಗು ನಿನ್ನಯ ಸಾಧನೆಗೂ ಬರೆಯುತ ಹಣೆ ಬರಹದ ಮುನ್ನುಡಿಯ ನೀನಾಗುವೆ ನಿರಾಳ ಯತ್ನವ ಮಾಡ...

ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ...

1...4849505152...81

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....