Home / Kasturi Bayari

Browsing Tag: Kasturi Bayari

ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ. ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ ನಡೆಯುತ್ತಿದ್ದಾರೆ. ಅವರೀಗ ಹಳದಿ ಎಲೆ. ಹಗುರಾಗಿದ್ದಾರೆ ಮಾಗಿದ್ದಾರೆ. ಅವರಿಗೆ ಹೊಸದೇನು ಬೇಕಾಗಿಲ್ಲ. ನಡೆದ ದಾರಿಯ ಹಳವಂ...

ಶ್ರಾವಣದ ಗುಬ್ಬಿ ಮಳೆಯ ನಡುವೆ ಆಗಾಗ ಬೀಸುವ ತಂಗಾಳಿ, ಮಲ್ಲಿಗೆ ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ ಕುಳಿತಿದ್ದಾಳೆ. ಅಮ್ಮನ ಕೈಗಳಿಗೆ ಹೊಸ ಚಿಕ್ಕೀ ಬಳೆ ಕಳೆ ಕೊಟ್ಟಿದೆ. ಅವನ ನೆನಪಲಿ ಅವಳ ಅರಸಿಕ...

ಮನಸ್ಸು ಮೈ ಹೊರೆ ಎನಿಸಿದಾಗ ನಿನ್ನೆಡೆಗೆ ಹೊರಳುತ್ತೇನೆ. ಈ ವೇಳೆಯಲಿ ಸಾಕಷ್ಟು ಹೇಳುವದಿದೆ. ಅನಿಸಿಕೆಗಳು ನಿವೇದನೆಗಳಾಗಿ, ಸಾವಿನಾಚೆಯ ಬೆಳಕು. ಈ ಬದುಕು ದುಡಿಮೆಗೆ ಸಿಗದ ಮಜೂರಿ, ನೊಂದಣಿಗೆ ಸಿಗದ ದಿನದ ಜೀಕುಗಳು, ಕಂಡದ್ದು ಕಂಡಂತೆ ಹೇಳುವ ಕನ್...

ಬಿರು ಬೇಸಿಗೆಯ ಮಧ್ಯಾಹ್ನ ದೂರದಲ್ಲಿ ಎಲ್ಲೋ ಚಹಾದ ಅಂಗಡಿಯಲಿ ರೇಡಿಯೋ ಹಾಡುತ್ತಿದೆ. ರಸ್ತೆ ಇಲ್ಲದ ಊರ ಬಯಲಿನ ತುಂಬ ಸೂರ್ಯ ಚಾಪೆ ಹಾಸಿದ್ದಾನೆ. ಮಾವಿನ ಮರದಲ್ಲಿ ಹಕ್ಕಿಗಳು ನೆರಳಿಗೆ ಕುಳಿತಿವೆ. ಮತ್ತು ಅಂಗಳದ ನೆರಳಿನಲ್ಲಿ ನಾಯಿ ಮಲಗಿದೆ. ಚಹಾದ...

ಪ್ರತಿನಿತ್ಯ ಒಂದು ಹೊಸ ಅನುಭವ ಹೊತ್ತ ಸೂರ್ಯ ಹುಟ್ಟಿ, ಜಗದ ಜನರ ನೆರೆ ಕೂದಲ ಮಧ್ಯೆ ಒಂದು ನಗೆ, ಒಂದು ಹಾಡು, ಮಲ್ಲಿಗೆ ಅರಳುತ್ತವೆ ಘಮ್ಮಗೆ. ಒಲ್ಲದ ಮನಸ್ಸು ರಾತ್ರಿ ಕಳೆದು, ಬಿಳಿ ಹಕ್ಕಿ ಹಾರಾಡುವ ನೀಲ ಬಾನಿನಲಿ ಬೆಳಕಿನ ಕಿರಣಗಳು ಸೋಕಿದಾಗ, ನ...

ದಿನಾಲು ಉರಿಯುವ ಸೂರ್‍ಯನ ಒಂದು ಕಿಡಿಯ ತೆಗೆದು, ಪ್ರಣತಿ ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ, ದೀಪ ಹಚ್ಚುವ ಕಾಲ ಮತ್ತು ನಾನು ಖಾಸಾ ಗೆಳೆಯರು. ಎದೆಯಿಂದ ಎದೆಯ ಆಳಕೆ ಇಳಿದ ಇಷ್ಟದ ಕಷ್ಟದ ಕ್ಷಣಗಳ, ಸರಿಸಿ ದಕ್ಕುವ ಬೆಳಕಿನ ಕೋಲುಗಳು. ಆ ದಿನದ ಮ...

ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ, ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ. ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ, ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ. ಬಯಲ ಗಾಳಿ ನದಿ ಹಳ್ಳಕೊಳ್ಳದಲಿ ಮಿಂದ ನೀ ಅಮ್ಮನ ಸುರಿಯುವ ಹಾಲಿ...

ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್‍ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ, ಹಿಮ ಮಣಿಯ ತಂಪು ಹರಡಿ ತಿಳಿ...

ಅಪರಿಮಿತ ಕತ್ತಲೊಳಗೆ ಬೆಳಕ ಕಿರಣಗಳ ಹುಡುಕಿದೆ. ಒಂದು ಕವಿತೆ ಶಕ್ತಿಯಾಗಿ ಎದೆಗೆ ದಕ್ಕಿತು. ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು. ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ. ಎದೆಯ ಮೇಲೆ ...

ಗೆದ್ದವಳು ನೀನು ಲಿಂಗಮುಖದಿಂದ ಮನದೊಳು ಭಾವ ಲಿಂಗವ ಅರಳಿಸಿ ಉಡುತಡಿಯಿಂದ ಕದಳಿಯವರೆಗೆ ಹರಡಿ ಹಾಸಿದ ಜ್ಞಾನ ಬೆಳದಿಂಗಳು ಧರೆಯಲ್ಲಾ ಪಸರಿಸಿ ಶರಣಸತಿ ನೀನು. ಜಗ ನಂಬಿದ ಲಿಂಗದ ಘನವ ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ ಉಭಯ ಸಂಗವ ಅರಿಯದೆ ಪರಿ...

1...34567...20

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...