ಜಡ ವಸ್ತುವೆ?

ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ?...

ದಕ್ಕಿದ ಅವಕಾಶ

ನಾ ಹುಟ್ಟಿ ಬೆಳೆದಂತಹ ಮಣ್ಣ ಗೋಡೆಯ ಮನೆಯ ವಿಶಾಲ ಅಂಗಳದಲಿ ಛಾವಣಿಯೇ ಇಲ್ಲದ ಹಾಳು ಗೋಡೆಗಳ ಮೇಲೆ ಬೆಳೆದಿರುವ ಹುಲ್ಲುಗರಿಕೆ- ದಯಾಮಯ ಅಲ್ಲಾಹ್‌ನ ಕರುಣೆ ನನ್ನ ಮೇಲಿದೆಯೇನೋ, ಕತ್ತಲೆಯ ಕೋಣೆಯಲಿ ಕೈದಿಯಾಗಬೇಕಿದ್ದ ನನಗೆ, ಛಾವಣಿಯಿಲ್ಲದ...

ಜಾರು ನಕ್ಷತ್ರ

ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ...

ಮಾಗಿದ ಕನಸುಗಳು

ನನ್ನ ಬಾಗಿ ಕಾಮನಬಿಲಾದ ಬೆನ್ನು ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ ಗೆರೆಮೂಡಿ ಮಾಗಿದ ಮುಖ ನಡುಗುತ್ತಿರುವ ಕೈಗಳಲ್ಲಿ ನನ್ನ ಕನಸಿನ ವಸಂತಗಳನ್ನು ಭದ್ರವಾಗಿ ಹಿಡಿದಿಡಲು ನಿರಂತರ ತವಕಿಸುತ್ತೇನೆ. ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು ಹಳೆಯ ಪೆಟ್ಟಿಗೆಯಿಂದ...

ಪ್ರತಿಫಲ

ನೀನು ಗಳಿಸುತ್ತಿಲ್ಲ ನೀನು ನಿರುದ್ಯೋಗಿ ಅಷ್ಟೇ ಏಕೆ ಬಡವಿಯೂ ಕೂಡ, ನಿನಗೆ ಅಬಲೆಯ ಪಟ್ಟ ಮೇಲೆ ಕಳಸವಿಟ್ಟಂತೆ. ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡುತ್ತಿರುವೆಯಾ? ಎದುರು ವಾದಿಸಬೇಡ ಜೋಕೆ ಮನೆಗೆಲಸ ನಿನ್ನ ಧರ್ಮ ಅದು...

ನಾನೊಂದು ಕವನ ಬರೆದೆ

ಬರೆದು ನಾನೊಂದು ಕವನ ರಾಯನಿಗೆ ಕೇಳಿದೆ ಹೇಗಿದೆ ಈ ಕವನ "ನಾ ಕಂಡ ಕನಸುಗಳೆಲ್ಲಾ ನೀರ ಮೇಲಿನ ಗುಳ್ಳೆ ಬರೀ ಹೊಡೆತ ನಿಂದನೆ ತುಂಬಿದೆ ಬದುಕೆಲ್ಲ" ...ಇತ್ಯಾದಿ ...ಇತ್ಯಾದಿ ಓದುತ್ತಿದ್ದಂತೆಯೇ ರಾಯ ತಾಳಿದ ರಾವಣನ...

ಆತ್ಮ ಮತ್ತು ಸಾಕ್ಷಿ

ಪ್ರೀತಿ ದ್ವೇಷದ ರಹಸ್ಯಗಳು ಆತ್ಮವನ್ನು ಕುಟುಕಿದ ನಿಗೂಢಗಳು ಪಾತಾಳಕ್ಕೆ ಕುಸಿಯುವ ಕನಸುಗಳು ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ ಪಾಪ ತುಂಬಿದ ಆತ್ಮಗಳು ಅಲೆಮಾರಿ ಮೋಡಗಳು ಪಾಪಾತ್ಮಗಳನ್ನು ತೊಳೆಯಲು ಮಳೆಯನ್ನು ತರಲಿಲ್ಲ ಕಲಬೆರಿಕೆ ಕನಸುಗಳು ಭೂಮಿ ಸೂರ್‍ಯರು...

ಮುಕ್ತಿ ಮಂತ್ರ

ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ...

ಸೂರುಕೊಡಿ

ಕಲ್ಲು ದೇವರಿಗೆಂದು ಗುಡಿ ಗುಂಡಾರಗಳ ಕಟ್ಟಿಸುವವರೇ ಕೊರೆವ ಚಳಿ, ಮಳೆ, ಬಿರಗಾಳಿಗೆ ಗುಡುಗು ಸಿಡಿಲು ಮಿಂಚಿಗೆ ಬರಿಮೈಯನ್ನೊಪ್ಪಿಸಿ, ಗಡಗಡನೆ ನಡುಗುವ ನಿಮ್ಮವರ ತಲೆಯ ಮೇಲೊಂದು ಸೂರುಕಟ್ಟಿಸಿ ಕೊಡಿ. *****
cheap jordans|wholesale air max|wholesale jordans|wholesale jewelry|wholesale jerseys