
ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ ...
ಎಲ್ಲರಿಗೂ ಒಂದೊಂದು ಚಾಳಿ ಇರುವುದಿಲ್ಲವೆ, ಹೇಳಿ. ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ ಅಮವಾಸ್ಯೆಯ ರಾತ್ರಿಗಳಲ್ಲಿ ಸುಮ್ಮನೇ ಅವನ ಮೌನಮುರಿಯುವ ಕಥಾವಳಿ. ಪ್ರಶ್ನೆಗಳನ್ನು ಹಾಕುತ್ತಲೇ ಸ...
ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾ...
೧ ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ, ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ- ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ? ಅತ್ಯಂತ ನೀರಸವಾದ ಈ ಮರದ ಕಾಂಡದ ಮೇಲೆ ಚುನಾವಣಾ...
ಇಲ್ಲಿ ಹಿಂದೊಮ್ಮೆ ಕೋಣೆಗಳ ತುಂಬ ಸಿಗರೇಟು ತುಂಡುಗಳಿದ್ದವು. ಹರಿದ ಕಾಗದಗಳಲ್ಲಿ ಅಕ್ಷರಗಳು ಚೂರಾಗಿ ಎಲ್ಲೆಲ್ಲೂ ಬಿದ್ದಿದ್ದವು. ಪುಸ್ತಕದ ಅಟ್ಟಳಿಕೆಯಲ್ಲಿ ಅನಂತಮೂರ್ತಿ, ಲಂಕೇಶ ಒಟ್ಟಿಗೇ ಕುಳಿತ್ತಿದ್ದರು. ಮೇಜಿನ ಮೇಲಿದ್ದ ಮೈಸೂರಿಂದ ತಂದ ಆನ...
ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು. ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...
ಹಳೇ ಹಂಚಿನ ಕಟ್ಟಡವಿದ್ದರೆ ಅದರ ಸುತ್ತ ಕಾಂಪೌಂಡಿದ್ದರೆ ಎದುರು ದೊಡ್ಡ ಮರಗಳಿದ್ದರೆ ಕೋಣೆಗಳೊಳಗೆ ಫೈಲುಗಳಿದ್ದರೆ ಅವುಗಳ ಹಿಂದೆ ಗುಮಾಸ್ತರರಿದ್ದರೆ ವೆರಾಂಡದಲ್ಲಿ ವೆಂಡರರಿದ್ದರೆ ಕೈಚಾಚುವ ಜವಾನರಿದ್ದರೆ-ಅಷ್ಟಕ್ಕೇ ಅದೊಂದು ತಾಲೂಕಾಪೀಸು ಆಗುತ್ತ...
ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ ಟಪ್ಪಾಲಿನ ಗೋಣಿಚೀಲ ಬರುತ್ತದೆ. ಪೇದೆ ಅದನ್ನು ಒಡೆದು ಕೊಡವಿ ಹಾಕುತ್ತಾನೆ. ಕಾಗದಗಳ ಕಟ್ಟು ಕೆಳಕ್ಕೆ ಬೀಳುತ್ತದೆ. ಪೋಸ್ಟ್ ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ. ನಂತರ ಒಂದೊಂದನ್ನೇ ವಿಂಗಡ...














