Home / ಮುಖಾಮುಖಿ

Browsing Tag: ಮುಖಾಮುಖಿ

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ...

ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ ಒಂಟಿಯಾಗಿ ಬಿಡಬಾರದಾಗಿತ್ತು ಎಂದು.  ಆದರೆ ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ ಮಂಚದ ಮೇಲೆ...

ಗಂಗೋತ್ರಿಯಲ್ಲಿ ರಾತ್ರಿ ರೋಡುಗಳೇಕೆ ನಡೆಯುವುದಿಲ್ಲ ಕಟ್ಟಡಗಳೇಕೆ ತೆರೆಯುವುದಿಲ್ಲ ಮರಗಳು ನಿಂತದ್ದೇಕೆ ಮಣ್ಣು ಮಲಗಿದ್ದೇಕೆ ಸಮಯ ಯಾಕೆ ತುಂಡಾಗಿದೆ ಹೀಗೆ ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ ವ್ಯವಾಗುತ್ತಿದೆ ನನಗೆ ಗೊತ್ತಿರುವ ಸಮುದ್ರದಂಡೆಗ...

ನಾವೇನು ಮಾಡೋಕಾಗತ್ತೆ ಎಂದರೆ ಕೆಲಸ ಹೇಗೆ ಗಿಟ್ಟಿಸಿಕೊಂಡಿರಿ? ಮನೆ ಹೇಗೆ ಕಟ್ಟಿಸಿಕೊಂಡಿರಿ? ಮಕ್ಕಳನ್ನು ಹೇಗೆ ಅಮೇರಿಕೆಗೆ ಕಳಿಸಿದಿರಿ? ಒಂದು ದಿನ ಸಮೀಪ ಭರ್‍ರೆಂದು ಧಾವಿಸಿಹೋದ ಕಾರು ನಮ್ಮಿಬ್ಬರ ಮೇಲೂ ರಾಡಿ ಎರಚಿದ್ದು ನೆನಪಿಲ್ಲವೆ? ನಂತರ ನೀ...

ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ ಶೂನ್ಯವೆಂದು ಅರ್ಥ ಮೈಲುಗಟ್ಟಲೆ ಮರುಭೂಮಿಯ ಮೇಲೆ ಹೊಗೆಯಿಲ್ಲದೆ ಹಬೆಯಿಲ್ಲದೆ ಕಾದ ಮರುಳು ಮುಕ್ಕಳಿಸುವ ಬಯಲು ಚಿಗುರದೆ ಹೂ ಬಿಡದೆ ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್ ಎಟುಕದ ಆಕಾಶಕ್ಕೆ ತಲೆಯೆತ್ತುವ ತಾಳೆಗ...

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ. ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ ಗಾಡಿ ಹತ್ತಿದೆ.  ನಿಂತವರ ನಡ...

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು ಆಕ್ರಮಿಸಿದ ಶಬ್ದ: ಕ್ರ್‍ವಾಕ್. ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ. ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ. ಮನಸ್ಸಿನಲ್ಲೆ ಮೆಸ್ಸಿನ...

ಚೇಳಿನ ಮೈ ತಾಮ್ರದ ಕಿಲುಬಿನ ಹಾಗೆ ಕಡುಪಚ್ಚೆ.  ಏಡಿಯ ಮೈ ಶ್ರೀಮಂತೆಯ ಉಗುರಿನ ಹಾಗೆ ನಸುಗೆಂಪು. ಚೇಳು ಒಂದೇ ಶಿಲೆಯಿಂದ ಕೆತ್ತಿ ಕಡೆದು ತೆಗೆದಂತಿದೆ.  ಏಡಿಯ ಕೈಕಾಲುಗಳು ಹೊಲಿದು ಸೇರಿಸಿದಂತಿವೆ. ಚೇಳು ಭಯೋತ್ಪಾದಕನಂತೆ ನಿಶ್ಚಿಂತೆಯಿಂದಿದೆ. ಏಡ...

ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು ಒಂದು ಹೂದೋಟ ಬೇಕು, ಹೂದೋಟದಲ್ಲಿ ಹೂವುಗಳು ಬೇಕು, ಹೂವುಗಳಲ್ಲಿ ಚಿಟ್ಟೆಗಳು ಕೂತುಕೊಳ್ಳಬೇಕು. ಈಗ ಹೊರಡಿರಿ ಮೆಲ್ಲನೆ. ಎಷ್ಟು ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ ಬೆಕ್ಕು ನಡೆಯುವ ಹಾಗೆ.  ಮುಂದೆ ದೊ...

ಆಮೆ ಏಡಿಯಂತಲ್ಲ ಅದು ಸರೋವರದ ನಡುಗಡ್ಡೆಯಂತೆ ಪ್ರಶಾಂತವಾಗಿರುತ್ತದೆ. ಏಡಿಯೋ ಕೆಟ್ಟದಾಗಿ ಕಟ್ಟಿದ ಗಂಟಿನಂತೆ ಅಸ್ವಸ್ಥವಾಗಿರುತ್ತದೆ. ಆಮೆ ಆನೆಯಂತಲ್ಲ ಅದು ಬೇಕೆಂದಾಗ ಕೈಕಾಲುತಲೆಗಳನ್ನು ಒಳಗಿಟ್ಟುಕೊಳ್ಳುತ್ತದೆ. ಆನೆಯೋ ಭಾರವಾದ ಸೊಂಡಿಲನ್ನು ಕೂ...

123...6

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...