ಹುಣ್ಣಿವೆಯ ಹೊತ್ತಿನ ಹುಟ್ಟು

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ನೆಂದು ಜವದೊಳು ಪಡುವಲ ಸೀಮೆಯ ಬೆಟ್ಟದೊಳು...

ಪರಾತ್‌ಪರ!

ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ.... ಮನಕೆ ಬಂದಂತೆ ಚಿತ್ರಿಸಿ ಪೂಜಿಸುತ ನಿನ್ನ ಅನುದಿನ...

ಶ್ರೀಕೃಷ್ಣನ ಕೊಳಲಿಗೆ

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ ಇಂಚರದ ಕೊಳಲೆ ನೀನು ? ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ ಕಮಲೋದ್ಧವಾಂಡವನ್ನು! ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ ಜಾಗೃತಿಯನೊಂದಿಸಿದೆಯೊ ! ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ- ಯನ್ನು...

ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು...

ಮೊರೆ

೧ ಬರು ನನ್ನ ಬಳಿಗೆ ಜೀಯಾ, ಮೊರೆಯ ಕೇಳಿ ಸುರಿಸು ನಲ್ಮೆಯ ಸುಧೆಯ ! ಸುರತರುವಿನಂದದಲಿ ಸುಜನರ ಹಿರಿಯ ಕೊರತಗಳೆಲ್ಲ ಕಳೆಯುತ ಪೊರೆವವರು ನೀನಲ್ಲದಲೆ ಯಾ- ರಿರರು ಎಂದರಿತಿರುವೆ ರೇಯಾ ! ಬರು ನನ್ನ...

ಬಯಕೆ

ನಿನ್ನನರಿಯುವ ಅರಿವ ಚೆನ್ನ ನನಗೀಯುವುದು, ನನ್ನ ಈ ಬಯಕೆಯನು ಹಣ್ಣಿಸೈ ನೀನೊಲಿದು ! ೧ ಹೆರರು ತನ್ನವರೆಂಬ ಅರಿಕೆ ನಸುವಿಲ್ಲದೆಯೆ ನೆರೆದಿರುವ ಗರತಿಯರ ನೆರವಿಯನು ಕಡೆಗಣಿಸಿ, ತೊರೆದ ಮೊಲೆವಾಲುಣಿಸಿ ಹೊರೆಯುವಾ ತಾಯನ್ನು ಮರೆಯದೇ ಗುರುತಿಸುವ...

ಸಾರಥಿಗೆ

ಏನು ಇದು ಸಾರಥಿಯೆ, ನೀನಿಂತು ಮಾಡಿದರೆ ನಾನು ಹಗೆಯರಸರನು ಕೂನಿಸುವನೆಂತು ? ೧ ದಾರಿ ಯಾವುದು ಈಗ ತೇರ ನಡೆಯಿಸುತಿಹುದು ? ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ ! ದಾರಿಯನು ಅರಿತವರು ಸಾರಿರುವ ಕುರುಹುಗಳು ತೋರಲೊಲ್ಲವು...

ಕೊಳಲನುಡಿಸು!

ಕೊಳಲ ನುಡಿಸು ಕಿವಿಯೊಳನಗೆ ಚೆಲುವ ಮೋಹನಾ! ಕೊಳಲ ನುಡಿಸಿ ಪ್ರೇಮಸುಧೆಯ ಮಳೆಯ ಸುರಿಸಿ ಹೃದಯ ತಾಪ ಕಳೆದು ತಿಳಿವಿನೆಳಬಳ್ಳಿಯ ಬೆಳೆಯಿಸಿ ಬೆಳಗೆನ್ನ ಮನವ.... ಚೆಲುವ ಮೋಹನಾ! ೧ ಎಳೆಯತನದಿ ಹಸುಗಳ ಜಂ- ಗುಳಿಯ ಕಾಯಲೆಂದು...

ಮಾಟಗಾರ್‍ತಿ

ಬಾಡದಿರುವಲರಂತ ಬಗೆಯನ್ನು ಮಾಡಿದರೆ ಬೈಯುವೆನೆ ನಿನ್ನ ತಾಯೇ ? ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ ಕುಂದಿಡುವನೇನು ತಾಯೇ ? ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ ಮುಚ್ಚರಿಪರಾರು ತಾಯೇ, ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ ಮುನಿವೆನೇ...

ಮನದ ಮಾತು

ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು ಎದೆಯ ಕೊಳಲುಲಿಯನೇ ಕೇಳಗೊಡವು ! ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ, ತೆಗೆವುದೊಂದೊಂದು ಸಲ ಎದೆಯು ಬಾಯ ; ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು, ಎದೆಯದೊಂದೇ ಒಂದು ಪದವೆ ಸವಿಗನಸು...