
ಹೇಗೆ ತಿಳಿವೆ ನೀ ಹೇಳೆ ಸಖೀ ಒಲಿದ ನನ್ನ ಪಾಡು? ಲೋಕದ ಕಣ್ಣಿಗೆ ನನ್ನೀ ಪ್ರೇಮ ಶ್ರುತಿಮೀರಿದ ಹಾಡು ಹಿರಿಯರ ಮೀರಿ ಕೃಷ್ಣನ ಕಂಡೆ ಕೊಟ್ಟೆ ಬೆಣ್ಣೆ ಹಾಲು ಸವಿದನು ಎಲ್ಲ ನುಡಿಸಿದ ಕೊಳಲ ಜುಮ್ಮೆಂದಿತು ಕಾಡು ಒಂದೇ ಸಮನೆ ಹಳಿವರು ಹಿರಿಯರು ಪ್ರಾಯದ ಮ...
ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು ಬೀಳಲಿ ನಭ ನೆಲಕೆ ತೋಳೊಳಗೆ ಇರುವ ಹರ...
ಗೇರ್ ಗೇರ್ ಮಂಗಣ್ಣ ಕಡ್ಲೇಕಾಯ್ ನುಂಗಣ್ಣ ಕೊಂಬೆಯಿಂದ ಕೊಂಬೆಗೆ ಹೈಜಂಪ್ ಮಾಡೋ ಹನುಮಣ್ಣ! ಆಟಕ್ ಕರಕೋ ನನ್ನೂನೂ ಲಾಗ ಹಾಕ್ತೀನ್ ನಾನೂನೂ, ಜೀಬಿನ ತುಂಬ ತಿಂಡೀನ ತಂದೀದೀನಿ ನಿನಗೂನೂ! ಬೇರೆ ಕೋತಿ ಬೆನ್ನಿಂದ ಹೇನು ಹೆಕ್ಕೋದ್ ಯಾಕಪ್ಪ? ಹೆಕ್ಕಿ ಅ...
ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ ಇರುವ ಸಸ್ಯ ಪ್ರಾಣಿ ನಮ್ಮಂತೇ ಅಂದುಕೊ ನಮ್ಮ ಹಾಗೆ ಅವಕೂ ಸಹ ಜ...















