
ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು ಒಂದೇ ಕತ...
ಐ.ಟಿ., ಬಿ.ಟಿ. ಕಂಪನಿಗಳು ನಗರದ ಜನಜಂಗುಳಿ ಝಗಝಗಿಸುವ ದೀಪಾಲಂಕಾರ ಕಣ್ಣು ಕುಕ್ಕುವ ಬೆಳಕು ತಲೆಸುತ್ತುವ ಎತ್ತರದ ಬಂಗಲೆಗಳು. ಗಿಜಿಗುಡುವ ಜನಜಂಗುಳಿಯ ಮಧ್ಯೆ ಏಕಾಂಗಿಯಾಗಿದೆ ಒಂಟಿ ಬದುಕು ಮನುಜ ಮನುಜರ ಮದ್ಯ ತುಂಬಲಾಗದ ಆಳ ಕಂದಕ ಎಷ್ಟೊಂದು ಗಹನ?...
ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ ತಣಿಪ ಸೊದೆಯ ಸೋನೆ. ಮುಚ್ಚುಕಿಟಿಕಿಯ...
ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು ಕನ್ನಡದಾ ಹೊನಲ ಬಾಳಿನಂದದಿ ನಲಿದು ಒಂದಾಗಿ ಹಾಡೋಣ ಕನ್ನಡವೇ ಉಸಿರು ಮನ ಅಭಿಮಾನದಿ || ಮೂಡಣದಾ ರವಿಕಿರಣವು ಧರೆಗೆ ಮುಖ ಚೆಲ್ಲಿ ನಿಂದು ಬೆಳದಿಂಗಳ ಹೊತ್ತಿಕೆಯ ಮಡಿಲಲ್ಲಿ ಒಂದಾಗಿ ಬೆಸೆದು ಹಾಡೋಣ ಕನ್ನಡವೇ ಉಸಿ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ ಸುತ್ತ ತಿರುಗುವೆನು ನಾನು, ನಾನು ಯಾರು ಎನ್ನುವುದೆ ತಿಳಿಯದು, ಎಲ್ಲಿ ಹೊರಟಿರುವೆ ಏನು? ನನಗೆ ಗೊತ್ತಿರುವುದೊಂದೇ ಮಾತು ಪ್ರೇಮಿಸಿರುವೆ ನಾನು, ನಾಚಿಕೆ – ಗೇಡಿ ಪೂರ ನಾನು....
ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ ಗಾಳ್ಯಾಗಿ ಬಂದು ಬಡದೇನು. ೧ ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು? ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು ಮೀನಾಗಿ ವೊಳೆಯಾಗ ಮುಳುಗೇನು. ೨...
ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ ಬುದ್ಧ ರಾಹುಲ ಬುದ್ಧ ಗೌತಮ ಬ...
ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಬಯಲ ನಡುವಿನ ...
ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆ...













