Home / Kannada

Browsing Tag: Kannada

ಈ ಹಸಿರು ಹುಲ್ಲು, ಈ ಹೂವು-ಹಣ್ಣು ಈ ಬಣ್ಣದ ಹಕ್ಕಿಗಳು ಈ ಗಂಧಗಾಳಿ ಈ ಗೂಢ ಶಾಂತಿ ಈ ತಂಪು ತೋಟದಲ್ಲಿ ಶ್ವೇತಾಂಬರಿಯ ಹಂಸಗಮನ ಆಚೀಚೆ ಹಾಲ ಹಸುಳೆಗಳ ಬೆಳದಿಂಗಳ ನಗು ಸೂರ್ಯನಿಲ್ಲಿ ಚಂದಿರ ಚಂದಿರನೋ ಹಾಲೈಸ್ಕ್ರೀಂ ಇವರೆಲ್ಲ ಬೇಲಿ ಬಿಗಿದಿದ್ದಾರೆ ಸು...

‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹ...

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿ...

ಈಶ್ವರನ ತಲೆ ಮೇಲೆ ಕೂತಿದ್ದೇನೆಂದು ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು ಕಡಮೆಯೆಂದೆಣಿಸಿ ಕಡೆಗಣಿಸಬೇಡ ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ ನೀನೊಂದು ಸಣ್ಣ ಮಣಿ. ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ. *****...

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ...

ಅಮ್ಮ ತಬ್ಕೊಂಡ್ ಕೊಡೋ ಮುತ್ತು ಜಾಮೂನಪ್ಪ ಜಾಮೂನು, ಮಿಸ್ಸು ಹೇಳೋ ಕಥೆಗಳ ಮುಂದೆ ತುಂಬಾ ಸಪ್ಪೆ ಬೆಲ್ಲಾನೂ! ಬುದ್ಧಿ ಮಾತನ್ ಒದ್ದು ಹೇಳೋದ್ ಅಪ್ಪ ಅಲ್ದೆ ಯಾರು? ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ ಹಾಗಲಕಾಯಿ ಚೂರು! ಮಕ್ಳು ಅಂದ್ರೆ ಅಜ್ಜೀಗ್ ಮುದ...

ಬೀಚಿಯವರು ಹೇಳಿದ ಜೋಕು: “ದೇಶಭಕ್ತನಿಗೆ ನಿಮ್ಮ ‘ಕೈಕೊಡಬೇಡಿ ಏಕೆಂದರೆ ನಿಮ್ಮ ಕೈಯಲ್ಲಿರುವ ಉಂಗುರ ಕಸಿದು ಬಿಡುತ್ತಾನೆಂದು ಖಂಡಿತಾ ಅಲ್ಲ, ಬೆರಳನ್ನೇ ಕಸಿದು ಬಿಟ್ಟಾನು ಎಂದು.!” ***...

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...