Home / Tirumalesh KV

Browsing Tag: Tirumalesh KV

ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ ಹೆತ್ತವರ ಮರೆತೇವೊ ಹೊತ್ತವರ ಮರೆತೇವೊ ಊರುಕೇರಿಗಳ ಸುದ್ದಿ ತೆಗೆದೇವೊ...

ಅರ್‍ಧದಲ್ಲೆ ಎದ್ದು ಹೋಗುವರು ನಾವು ಪೂರ್‍ಣತೆಯ ಮಾತೆಲ್ಲಿ ಬಂತು ಪೂರ್‍ಣಯ್ಯ ಅಯ್ಯಾ ಅರ್‍ಧವೇ ಯಾವಾಗಲೂ ಕತೆಯರ್‍ಧ ಹರಿಕತೆಯರ್‍ಧ ಕಾವ್ಯವರ್‍ಧ ಪುರಾಣವು ಅರ್‍ಧ ನಮ್ಮ ವತಾರವು ಅರ್‍ಧ ಸುಖವರ್‍ಧ ದುಃಖವರ್‍ಧ ಹರುಷವರ್‍ಧ ಸ್ಪರ್‍ಶವು ಅರ್‍ಧ ನಮ್ಮು...

ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್‍ಯಾರ ಕಟ್ಕೊಂಡು ಯಾರ್‍ಯಾರ ಬಿಟ್ಕೊಂಡು ಯಾರ್‍ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ ಬೆಳ್ಳಿಯ ಹಡಗ...

ಎಂಥಾ ಚಂದ್ರಾಮ ಇವನೆಂಥಾ ಚಂದ್ರಾಮ ಪಡುಮನೆ ಇಳಿಯಲು ಹೋಗಿ ಇವ ನೀರಿಗೆ ಬಿದ್ದಾನ ನೀರ ತರುವವರ ಸೆರಗಿಗೆ ಬಿದ್ದಾನ ಎಂಥಾ ಚಂದ್ರಾಮ ಮೂಡಲ ಮನೆ ಏರಲು ಹೋಗಿ ಮುಗಿಲಿಗೆ ಮೆತ್ಯಾನ ಮನೆಯವಳ ಹೆಗಲಿಗೆ ಸುತ್ಯಾನ ಎಂಥಾ ಚಂದ್ರಾಮ ಮಲ್ಲಿಗೆ ಹೂಗಳ ಕೊಯ್ಯಲು ಹ...

ಏನೆಂದು ಹೇಳಲಿ ಅಕ್ಕ ಮುತ್ತಿನ ಕತೆಯ ಏನೆಂದು ಹೇಳಲಿ ಅದ ಕಿತ್ತವನ ಕತೆಯ ಬೃಂದಾವನ ತುಂಬ ಸುರಿಯಿತು ಮುತ್ತು ಅದು ಸುರಿದರು ಇನ್ನೂ ಮುಗಿಯದೆ ಇತ್ತು ಅತ್ತು ಕೇಳಿದ ಕೃಷ್ಣ ಮತ್ತೂ ಕೇಳಿದ ಕೃಷ್ಣ ಒತ್ತಾಯಿಸಿ ಕೇಳಿದ ಸತ್ತಾಯಿಸಿ ಕೇಳಿದ ಒಬ್ಬೊಬ್ಬ ಗೋ...

ಬರಬೇಕು ನಾ ನನ್ನೂರಿಗೆ ಹಾಳೂರೊ ಮಾಳೂರೊ ಏನಾದ್ರೂ ನನ್ನೂರೆ ಮುರುಕು ಛಾವಣಿಗಳೊ ಕೊರಕು ಕಲ್ಲೋಣಿಗಳೋ ಏನಾದ್ರೂ ನನ್ನೂರೆ ಅಲ್ಲೆಲ್ಲೋ ನನ್ನ ಜೀವ ಅಲ್ಲೆಲ್ಲೋ ತುಸು ತೇವ ನೆನಪಿನಂತೇನೊ ಯಾವ ಇನ್ನೂ ಕಾಡುವ ಒಂದು ಭಾವ ಗುಡ್ಡ ಬೆಟ್ಟವ ದಾಟಿ ಇಳಿದು ಕಡ...

ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ ಮುಡಿದು ಮುಗೀದಷ್ಟು ಮಾಲೆಗಳು ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ ಮಿನುಗಿ ಮುಗೀದಷ್ಟು ತಾರೆಗಳು ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ ಹೇಳಿ ಮುಗಿಯದಷ್ಟು ಸುದ್ದಿಗಳು ಹಾಡಿ ಮುಗೀದಷ್ಟು ಹಾಡಿರಲಿ ಶಿವನೆ ಆಡ...

ಆ ಮನೆ ಬೇಕೊ ಈ ಮನೆ ಸಾಕೊ ಎರಡೂ ಮನೆಗಳು ಮನುಷ್ಯನಿಗೆ ಬೇಕೊ ಭೂತ ಬೇಕೊ ಭವಿಷ್ಯ ಸಾಕೊ ವರ್‍ತಮಾನಕ್ಕೆ ಎರಡೂ ಬೇಕೊ ಹಳೆಯಲೆ ಬೇಕೊ ಹೊಸ ಎಲೆ ಸಾಕೊ ಮರವೊಂದಕ್ಕೆ ಎರಡೂ ಬೇಕೊ ಮಳೆಯು ಬೇಕೊ ಬಿಸಿಲು ಸಾಕೊ ಧರೆಗಿವೆರಡೂ ಬೇಕೊ ಹಳೆ ಹಾಡು ಬೇಕೊ ಹೊಸ ಹಾಡ...

ರಾಮ ನಾಮ ಸುಖವೋ ಸೀತಾರಾಮ ನಾಮ ಸುಖವೋ ಭರತನ ಭಕುತಿ ಸುಖವೋ ಲಕ್ಷ್ಮಣನ ಸೇವೆ ಸುಖವೋ ಹನುಮನ ಭಕ್ತಿ ಸುಖವೋ ಸೀತೆಯ ಮನ ಸುಖವೋ ದಂಡಕಾರಣ್ಯ ಸುಖವೋ ಪಂಪಾರಣ್ಯ ಸುಖವೋ ವಾಲಿ ಸುಗ್ರೀವರ ಕಥೆ ಸುಖವೋ ಲಂಕಾದಹನ ಸುಖವೋ ಶ್ರೀರಾಮ ಪಟ್ಟಾಭಿಷೇಕ ಸುಖವೋ ಸೀತಾ...

ನೀನೀತರ ನೋಡುವಿಯೇ ಇದರರ್‍ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...