
ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ....
ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....
ಒಂದು ಪರಿಪೂರ್ಣ ರೊಟ್ಟಿಗಾಗಿ ಎಷ್ಟೊಂದು ಹಸಿವಿನ ಘಳಿಗೆಗಳು ಸಾಯಬೇಕು. ಶುಭ್ರ ಬೆಳಗಿಗಾಗಿ ನಾವೂ ಹಟ ಹಿಡಿದು ಕಾಯಬೇಕು....
‘ಕಾಯ’ಬೇಕಿರುವುದು ಕಾಯಾತೀತ ರೊಟ್ಟಿಯಾತ್ಮಕ್ಕಾಗಿಯೇ ಎಂದು ಅರ್ಥವಾಗಿದ್ದರೆ ಅಕಾಯ ಹಸಿವೆಗೆ ಕಾಯುವುದೂ ಅಮೂಲ್ಯವೆನಿಸುತ್ತಿತ್ತು. ಈಗ ಕಾಯವೇ ಮುಖ್ಯ,...
ಕತ್ತಲಲ್ಲಿ ಕಣ್ಣು ಮಿಟುಕಿಸಿದಂತೆ, ಕಾಣಲಾಗದ ಹಸಿವಿನ ಒಡಲಾಳದಲ್ಲಿ ರೊಟ್ಟಿಗೊಂದು ಪುಟ್ಟ ಘನವಾದ ಸ್ಥಾನವಿದೆಯಂತೆ. ಪ್ರತ್ಯಕ್ಷ ನೋಡಲಾಗದ ಸತ್ಯ ಇದ್ದರೂ ಇರದಂತೆ....
ರೊಟ್ಟಿ ಹಸಿವು ಸೇರಿ ಒಂದರೊಳಗೊಂದಾಗಿ ಪರಿಪೂರ್ಣತೆಯ ಅನುಭವ. ಹಸಿವು ಮತ್ತೆ ಆವಿಯಾಗಿ ಪರಿತಪಿಸಿ ರೊಟ್ಟಿಗಾಗಿ ರೊಟ್ಟಿಯೇ ಆಗುವುದು ಅನುಭಾವ....
ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ....
‘ಛೆ! ಎಷ್ಟೊಂದನ್ನು ಹೇಳಲಾಗಲೇ ಇಲ್ಲ’ ಕಳವಳ ರೊಟ್ಟಿಗೆ. ‘ಸದ್ಯ ಎಷ್ಟೊಂದನ್ನು ಹೇಳಲಾಗುವುದಿಲ್ಲ’ ಸಮಾಧಾನ ಹಸಿವೆಗೆ....
ಪಡೆಯುವ ಅರ್ಹತೆ ಕೊಡುವ ಘನತೆಯ ನಡುವಿನ ಒಪ್ಪಂದ ಹಸಿವು ರೊಟ್ಟಿಯ ಸಂಬಂಧ....
ಹಸಿವಿಲ್ಲದೆಯೂ ರೊಟ್ಟಿ ನಿರಾಳ ಪರಿಪೂರ್ಣ. ರೊಟ್ಟಿಯಿಲ್ಲದೇ ಹಸಿವು ಅಪ್ರತಿಭ ಅಪೂರ್ಣ ಇದೂ ಸೃಷ್ಟಿ ಅಸಮತೆ ಉತ್ಪಾದನಾ ಚಾತುರ್ಯ....














