Home / Parimala Rao

Browsing Tag: Parimala Rao

ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು. ಕಾಡುಹೂವಿಗೆ ಹೃದಯ ಬಾಯಿಗೆ ಬಂದಂತಾಗಿ ಹೇಳಿತು. “ನಿನ್ನದು ಗೊಬ್ಬರದಲ್ಲಿ ಅರಳಿದ ಮುಖ....

ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ ಕುರುಡನಾಗುವೆ. ಬೆಳಕಿಗೆ ಕಣ್ಣು ಕೊಟ್ಟಾಗ ನೀ ಬೆಳಕಿನ ಹಾ...

“ಮುದಿತನವನ್ನು ದೂರವಿರಿಸುವ ಗುಟ್ಟೇನು?” ಎಂದು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರು ಹೇಳಿದರು- “ಹುಟ್ಟಿದ ಮಗುವಿನ ಬೆಳವಣಿಗೆ ಜೊತೆ ಜೊತೆಯಾಗಿ ಮುಗ್ಧತೆ ಮುಗುಳುನಗೆ ಬೆಳದು ಚಿರ ಯೌವನ ಉಳಿಯೆ ಮುದಿತನವೆಲ್ಲಿ?” ಎಂದರು. “ಮುಗುಳ...

ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು. ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರು...

ಒಮ್ಮೆ ಗುರುಗಳು ಶಿಷ್ಯರಲ್ಲಿ ಒಂದೆರಡು ಪ್ರಶ್ನೆ ಕೇಳಿದರು. “ನಾವು ನಡೆಯದೆ, ಯಾವ ವಾಹನವೂ ಇಲ್ಲದೆ ಯಾನದಲ್ಲಿ ತೊಡಗುವುದು ಹೇಗೆ?” ಎರಡನೇಯ ಪ್ರಶ್ನೆ ”ಹಿಡಿಯಲಾಗದ ಪಕ್ಷಿಗಳಾವುವು?” “ಇದಕ್ಕೆ ಉತ್ತರ ಹುಡುಕಿ ಬನ್ನಿ” ಎಂದು ಗುರುಗಳ...

ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ ಹೋಗಿ ಹೆಜ್ಜೆ ಏಣ್ಣಿಸುವ ಎಂಬ ನಿರ್ಧಾರ ಕೈಗೊಂಡ. ಎಷ್ಟು ವರ...

ವಿರಾಮ ಕುರ್ಚಿಯಲ್ಲಿ ಮನೆಯ ಯಜಮಾನ ವಿರಮಿಸುತಿದ್ದ. ಮನವು ಎಲ್ಲೋ ತೇಲುತ್ತಿರುವಂತೆ ಅವನ ಕಣ್ಣುಗಳು ಕಿಡಿಕಿ ಬಾಗಿಲನ್ನು ದೃಷ್ಟಿಸುತ್ತಿದ್ದವು. ಕಿವಿಗೆ ಅದೇನೊ ಮಾತು ಕತೆ ಕೇಳಿಸಿತು. ಕಿಡಿಕಿ ಬಾಗಿಲಿಗೆ ಹೇಳಿತು- “ನಾನೆಷ್ಟು ಧನ್ಯ- ಗೋಡೆಯಂತೆ ಬ...

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕ...

ಪೇಟೆಯಿಂದ ಒಬ್ಬ ಶಿಷ್ಯ, ಗುರುವಿನಲ್ಲಿ ವಿದ್ಯೆ ಕಲಿಯಲು ಬಂದ. ಬಂದಕೂಡಲೆ ಕೈಜೋಡಿಸಿ ನಿಂತು ತನ್ನ ವಿಳಾಸ, ಹೆಸರು, ಗೋತ್ರ, ಜಾತಿ, ಮತ, ಕುಲ, ತನ್ನ ತಂದೆತಾಯಿ, ತನ್ನ ಬಗ್ಗೆಯೂ ಪ್ರವರ ಹೇಳತೊಡಗಿದ. ತನ್ನ ತಾತ, ಮುತ್ತಾತಂದಿರ ಹಿರಿಮೆ, ವೈಭವವನ್ನ...

ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು. ನಂತರ ಗುರುಗಳು “ಈಗ ಅತಿ ಮುಖ್ಯ ಕಾರ್ಯ ಮಾಡಬೇಕು.” “ದೇವಾಲಯವನ್ನೇ ಕೆಡವಿ” ಎಂದಾ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...