ಶಿಷ್ಯನೊಬ್ಬ ಗುರುವಿನಲ್ಲಿ ಬಂದು ಬೇಡಿಕೊಂಡ.
“ನನ್ನ ತಂದೆತಾಯಿ ಹುಟ್ಟುವ ಮೊದಲು ನನ್ನ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೃದಯ, ಮೈ ಎಲ್ಲಿತ್ತು? ನನ್ನ ಬುದ್ದಿ ಏನು ಮಾಡುತ್ತಿತ್ತು?”, ಎಂದು ಕೇಳಿದ.
ಕೋಳಿಹುಟ್ಟುವ ಮೊದಲು ಮೊಟ್ಟೆಯಿಡುವ ಮೊದಲು, ಮೊಟ್ಟೆ, ಈ ಭೂಮಿಗೋಳದಲ್ಲಿ ಗೋಳವಾಗಿತ್ತು. ಹಾಗೆ ನಿನ್ನ ತಂದೆ ತಾಯಿಗಳ ಜನ್ಮಕ್ಕೆ ಮುಂಚೆ ಪರಮಾತ್ಮನಲ್ಲಿ ಆತ್ಮವಾಗಿ ಅಡಗಿದ್ದಿ” ಎಂದರು ಗುರುಗಳು.
*****


















