ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು.
ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ.
ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು ತಂದುಕೊಡಯ್ತಾ?” ಎಂದರು.
ಮತ್ತೆ ಸತ್ಯನಾಥ ಮರುಮಾತನಾಡದೆ ಕಮಂಡಲವನ್ನು ತಂದು ಕೊಟ್ಟ.
“ಸತ್ಯ! ನನಗೆ ಬೇಕಾದುದು ತಂದುಕೊಡಲು ಹೇಳಿದೆ” ಎಂದು ಮತ್ತೆ ಸಾಧು ಹೇಳಿದ.
ಸತ್ಯನಾಥ ಈ ಬಾರಿ ಅವರ ಕನ್ನಡಕವನ್ನು ತೆಗೆದುಕೊಂಡು ಹೋಗಿ ಕೊಟ್ಟ.
“ನೀನು ಇಷ್ಟು ದಿನ ನನ್ನೊಡನೆ ಇದ್ದು ನಿನಗೆ ಅರ್ಥವಾಗಲಿಲ್ಲವೇ? ನನಗೆ ಬೇಕಾದುದು ‘ಸತ್ಯ’ ಅದನ್ನು ತೆಗೆದುಕೊಂಡು ಬಾ”, ಎಂದೆ ಎಂದರು.
ಬುದ್ದಿಮತಿಯಾದ ಶಿಷ್ಯ ನಮ್ರನಾಗಿ “ನಾನು ‘ಸತ್ಯ’ವಾಗಿ ನಿಮ್ಮ ದಂಡ, ಕಮಂಡಲ, ಕನ್ನಡಕ ತಂದುಕೊಟ್ಟಿದ್ದೇನೆ. ಸುಳ್ಳನ್ನು ತಂದು ಕೊಟ್ಟಿಲ್ಲ. ಇವು ನಿಮ್ಮೆದುರಿಗೆ ಇರುವ `ಸತ್ಯ ವಲ್ಲವೇ?” ಎಂದ.
“ಭೇಷ್! ಸತ್ಯನಾಥ” ಎಂದು ಬೆನ್ನು ತಟ್ಟಿದರು, ಸಾಧು.
*****


















