ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ ಕುರುಡನಾಗುವೆ. ಬೆಳಕಿಗೆ ಕಣ್ಣು ಕೊಟ್ಟಾಗ ನೀ ಬೆಳಕಿನ ಹಾದಿ ಕಾಣುವೆ. ಬೇರುಗಳ ಸ್ನೇಹದಲ್ಲಿ ಅನಂತ ಫಲ ಪಡೆಯುವೆ. ಬುಡದಲ್ಲಿ ನೀ ಸಿರಿಸೌಭಾಗ್ಯ ಪಡೆಯುವೆ. ಕಣ್ಣಿನ ರೆಪ್ಪೆ ಚಪ್ಪರದಡಿ ಬೆಳಕು ನೆರಳಿನಾಟದಲಿ ನೀ ಮುನ್ನೆಡೆವೆ.”

“ಹುಡುಕುವವರಿಗೆ ಹಲವು ಹತ್ತು ದಾರಿಯಲ್ಲವೇ?” ಎಂದರು.
*****