Home / Panje Mangesha Rao

Browsing Tag: Panje Mangesha Rao

ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿಹೋದರು. ಆ ದಿನ ಮೊದಲ್ಗೊಂಡು. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತ...

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂ...

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದ...

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ...

ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರ...

ಹೋದುದಲ್ಲಾ ಎಲ್ಲಾ ಹೋದುದಲ್ಲಾ | ಹೋದುದೆಲ್ಲವು ಕಣ್ಣ ಹಿಂದೆ || ಖೇದವಿನ್ನೆನಗುಳಿದುದೊಂದೆ | ಹೇ ದಯಾನಿಧೆ ಪ್ರೇಮದಿಂದೆ ಹಾದಿ ತೋರಿಸಿ ನಡಿಸು ಮುಂದೆ ಹೋದುದಲ್ಲಾ ||೧|| ತೊಡೆಯ ತೊಟ್ಟಿಲೊಳೆನ್ನನಿಟ್ಟು | ಕುಡಿಸಿ ಮಮತೆಯ ಗುಣವ ನೆಟ್ಟು || ಬಿಡದ...

ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? ...

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭ...

(ಒಂದು ಯಕ್ಷಗಾನ ದೃಶ್ಯ) [ವಾರ್ಧಿಕ ಷಟ್ಪದಿ] ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್ ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ || ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು ಕುಂಭಜನ ಚಕ್ರಕೋಟೆಗೆ ...

(ಮತ್ತೇಭವಿಕ್ರೀಡಿತ) ನಳಿನೀ! ನೀಂ ನಲಿವೈ ವಿಲೋಲಜಲದಾಕಲ್ಲೋಲದುಯ್ಯಾಲೆಗೊಂ ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ! ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗವ, ತೀಡಲ್ ಮೋಡಮಂ ಪೊಂದುವೈ! ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯಂ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....