
ಎಲೆ ಮನವೆ, ಮುದಶೀರ್ಷ ಜ್ಞಾನತನು ಶಮಪಾದ ಪ್ರತ್ಯಕ್ಷಭವನಿವನ ಸಾರುತೇನೆರವೆ? ಆಸೆಭಯಲೋಭಗಳನಾಧರಿಸುವೆರೆಕೆಗಳ ಆಯ್ದಾಯ್ದು ತೋರ್ವುದರೊಳೇ ನಿನ್ನ ನಿಲವೆ? ಪತಿಪುತ್ರವಿತನೆಂಬ ಮಿತ್ರಬಾಂಧವನೆಂಬ ಭವವಿತ್ತ ಫಲಕಗಳ ತಿರುವುತ್ತ ನಿಂತು ಶೈವಕರುಣಾಂಶಗಳ ಎಳ...
ಕುಂಟನಾಗಿ ಕುರುಡನಾಗಿ ಗುರುವ ಕಂಡು ಉಳಿದೆನೆ ಮುಗ್ಧನಾಗಿ ದಗ್ಧನಾಗಿ ಲಿಂಗ ಬೆಳಕು ಪಡೆದೆನೆ ಎಲ್ಲ ಇಲ್ಲಿದೆ ಶಿವನ ಮನೆಯಿದೆ ತಾಯ ತೊಟ್ಟಿಲು ತೂಗಿದೆ ಇದೆ ಗುರುಮನೆ ನಿಜದ ಅರಮನೆ ಜ್ಯೋತಿ ಸಂಗಮವಾಗಿದೆ ಇಲ್ಲಿ ಅರಳಿದ ಹೂವು ಎಂದಿಗು ಬಾಡಿ ಹೋಗದು ಬೀ...
ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತ...
ಓ ಯೋಗಿ ಶಿವಯೋಗಿ ವಿಶ್ವಶ೦ಕರ ಯೋಗಿ ಶಿವಶಿವಾ ಶಿವಯೋಗಿ ನೀ ಇಳೆಗೆಬಾ ರಂಭಾಪುರಿ ಪೀಠ ಮನುಜ ಪೀಠದ ಪಾಠ ಮನೆಮನೆಗೆ ಹೊಸಬೆಳಗು ನೀ ಹೊತ್ತು ಬಾ ಪಂಚಪೀಠದ ಸಿದ್ಧಿ ಪಂಚತತ್ವದ ಶುದ್ಧಿ ಸಹ್ಯಾದ್ರಿ ವಿಂದ್ಯಾದ್ರಿ ಹೈಮಾದ್ರಿ ಓಂ ಹಕ್ಕಿ ಹಾಡಿವೆ ಇಲ್ಲಿ ಕ...
ಡಿಂಭದೊಳು ಕಾಂಬುದೆಂದಸಮಗ್ರವಲ್ಲವಿದು ಕುಂಭದೊಳಗಡಗಿದ್ದರೂ ಅಲ್ಪವಲ್ಲ ತೀರ್ಥ ಪ್ರಸಾದಗಳ ಜೀವಾನುಕರಣದೊಳು ಅದರಮರಭಾವಕ್ಕೆ ಮಾಲಿನ್ಯವಿಲ್ಲ; ಕರಣಗಮಸೌಲಭ್ಯವೀ ಮಹಾಭಾವಕೆನೆ ಎಲ್ಲ ಜೀವಕು ಇದುವೆ ತವರಾದುದೆನ್ನೆ ವಿವಿಧಾಕೃತಿಯ ಮೆರೆವ ವಿವಿಧವಿಧಿಗಳೊಳ...
ನೋಡು ನೋಡು ನೋಡು ಲಿಂಗವೆ ನಿಲ್ಲು ನಿಲ್ಲು ಮೆಲ್ಲಗೆ ನೆಲ್ಲಿ ನೀರಲ ಮಾವು ಪೇರಲ ನೀನೆ ಮಮತೆಯ ಮಲ್ಲಿಗೆ ಗಾಳಿಗುಂಟ ಗಾನ ಹಣೆದನು ಮೇಲೆ ಸಂಪಿಗೆ ಸುರಿದೆನು ಬಕುಲ ಜಾಜಿ ಕಮಲ ಕೇದಿಗೆ ನಿನ್ನ ಮೇಲೆ ಎರೆದೆನು ಅಪ್ಪಿ ತಪ್ಪಿ ತಪ್ಪು ಮಾಡೆನು ಕಡಲ ಗಿಣಿಯ...
ಅನ್ನೆವರಮರಿಯದಿಹ ತನ್ನ ದ್ಯುತಿಯುಚ್ಛೃತಿಯ ರತ್ನದೊಳು ಕಾಣುತ್ತ ನಲಿವುದಿನಕಿರಣ ತಾನೆಯರಿಯದ ತನ್ನ ಪ್ರಸ್ಫುರಚೇತವನು ಕಂಪಿನಲಿ ಕಂಡು ನಲಿವುದು ನೆಲದ ಹರಣ ತನ್ನಹಂಕಾರವನು ಶಮಿಸಿ ಮಮತೆಯ ತೊರೆದ ಸರ್ವಮುಕ್ತನೊಳೆ ಮೆರೆವುದು ಸರ್ವಮಮತೆ ತೋತೋರಿ ಮರೆಗ...
ಮುಗಿಲ ಲೋಕಕೆ ಮೌನ ಲೋಕಕೆ ಲಿಂಗ ತತ್ವಕೆ ಸ್ವಾಗತಂ ಶೂನ್ಯದಾಚೆಯ ಮಹಾ ಮೌನಕೆ ಜ್ಯೋತಿ ಲಿಂಗಕೆ ಸ್ವಾಗತಂ ಜಡವು ಜ೦ಗಮವಾಗಿ ಅರಳಿತು ಪರಮ ಗುರುವಿಗೆ ಸ್ವಾಗತಂ ತಪವು ತು೦ಬಿತು ತಂಪು ತೂರಿತು ಜ್ಞಾನ ಪೀಠಕೆ ಸ್ವಾಗತಂ ಉಸಿರು ಉಸಿರಿಗೆ ಲಿಂಗ ಪೂಜೆಯು ಪ್...
ಇನ್ನಾರುಮರಿಯದಿಹ ಅರಿಯಿಸಲುಮಾಗದಿಹ ಜೀವಾತ್ಮಸಂಸ್ಥೆಯಿದು, ಮಾತಿಲ್ಲ ತೆರೆಯೆ; ಗೀತನೃತ್ಯಾಭಿನಯ ಶಿಲ್ಪ ಕವಿತಾಚಿತ್ರ- ಗಳಿಗರಿದು ಈ ರಹಸ್ಯದ ಮುದ್ರೆಯೊಡೆಯೆ; ಪರಿಸರದ ಪರಿಸರದ ಪರಿಪರಿಯ ಬೆಲೆಗಳೊಳು ಆವ ಬೆಲೆಗೂ ತರದೆ ಉಳಿವುದಿದು ಕೊನೆಗೆ: ಜಗದಾವ ...
(ಮಂಗಳಾರತಿ) ಸೂರ್ಯ ಪಾದಾ ಚ೦ದ್ರ ಪಾದಾ ಕಡಲ ನಾದಾ ಮಂಗಳಾ ಆದಿ ರೇಣುಕ ವೇದ ಘೋಷಾ ಭುವನ ಭಾಸ್ಕರ ಮ೦ಗಳಾ ಅತ್ತ ಅಗೋ ವೀರಭದ್ರಾ ರುದ್ರ ತಾಂಡವ ಮಂಗಳಾ ಇತ್ತ ಇಗೋ ಢಮರು ಢಮರುಗ ಭುವನ ಭೈರವ ಮಂಗಳಾ ಜ್ಞಾನ ಯೋಗಿಯೆ ಪ್ರೇಮ ರಾಜ್ಯವೆ ನಾದ ಬಿಂದುವೆ ಮಂಗಳ...













