ಕಂಡೆ ಕಂಡೆ ಕನಸು ಕಂಡೆ
ದೇವಗುರುವು ಕರೆದನು
ಬಾಳೆಹಳ್ಳಿ ಬನದ ಒಳಗೆ
ಹೊಳೆವ ರತುನ ಕೊಟ್ಟನು
ಎಂಥ ಚಂದ ಚಲುವ ರತುನಾ
ಆತ್ಮಮಥನವಾಯಿತು
ನೋಟ ನಿಲಿಸಿ ನೋಡುವಾಗ
ಮಂತ್ರವಾಕ್ಯ ಅರಳಿತು
ಕಾಲ ಕಲ್ಪ ಸೃಷ್ಟಿ ಚಕ್ರ
ಎಲ್ಲ ರತುನ ತೋರಿತು
ದೇವ ಮನುಜ ಸಕಲ ರಾಜ್ಯ
ಲಿಂಗರತುನ ಬೀರಿತು
ಬ್ರಹ್ಮಲೋಕ ವಿಷ್ಣು ಲೋಕ
ರತುನದಲ್ಲಿ ತುಂಬಿದೆ
ನಾದ ಬಿಂದು ಕಲೆಯ ಚಲುವು
ಸೃಷ್ಟಿಮ೦ಚ ತೂಗಿದೆ
*****


















