Home / Belagere Janakamma

Browsing Tag: Belagere Janakamma

ಎತ್ತಿನ ಕತ್ತಿನ ಗೆಜ್ಜೆಯ ಸರವು ಮೊರೆಯಿತು ಘಲ್ ಘಲ್ ಘಲ್ಲೆಂದು ಹಳ್ಳಿಯ ಸರಳದ ಜೀವನ ನೆನೆದು ಕುಣಿಯಿತು ಎನ್ನೆದೆ ಥೈ ಎಂದು ಸೂರ್ಯನ ಅಸ್ತಮ ಸಮಯದ ಚೆಲುವು ಪಚ್ಚೆಯ ಪಯಿರಿನ ನೋಟದ ಸುಖವು ಹಕ್ಕಿಗಳೋಟದ ಗುಂಪಿನ ಸೊಗವು ವಿಶ್ವವ ತುಂಬಿದ ಆಗಸವು ಏರಿಯ...

ಬಂದನೂ ಬಂದನೂ ಚಂದ ಮಾಮಣ್ಣ ತಂದನೂ ಜಗಕೆಲ್ಲ ಹಾಲಿನಾ ಬಣ್ಣ ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು ಹಾಕಿದೆನು ನಾನಿಂತು ಕುಣಿವ ಕೂಗೊಂದು ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ ನಿರ್ಮಲಾ ಕುಂತಳಾ ಕುಮುದಿನೀ ರಾಧೆ ಭಾ...

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು ನೀನೊಂದು ಕ್ಷಣಕಾಲವಲ್ಲಿ ಕೂಡು ಜ್ಞಾನಮಯದಾನಂದ ಶಾಂತಿಮಯದಾನಂದ ತಾನೆ ತಾನಾಗಿಹುದು ಪುಣ್ಯವಂತಳ ಬೀಡು ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು ಕೆಟ್ಟ ಯೋಚನೆ ಮಾಡದಂತೆ ಘಳಿಗೆ ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ...

ಮುಗಿಲು ತುಂಬಿತು ನಿನ್ನ ಅದ್ಭುತದ ಗಾಯನದ ಸೊಂಪಿನಿಂಪಿನ ಮೇಳವು ಮನವು ಪರವಶವಾಗಿ ಸ್ವಾಮಿ ಸನ್ನಿಧಿಗೈದಿ ಉಕ್ಕಿ ಬಂದಿತು ಧ್ಯಾನವು ಕುಸುಮ ಮಾಲೆಗಳಂತೆ ತೂಗಿ ಬಂದುವು ರಾಗ ದಲೆಯ ತೆರದೊಳು ಗಮಕಗಳ್ ರಸವ ಚಿಮ್ಮುತ ಒಡೆದು ಮೂಡಿದುವು ಶಬ್ದದೊಳು ಮಿಂಚಿ...

ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...

ಶ್ರೀಮಾನ್ ಬೇಂದ್ರೆಯವರಿಂದ ತಂಗಿ ಜಾನಕಿ ನಿನ್ನ ವೈದೇಹದೊಲವಿನಲಿ ಓಲೆ ಬಂದಿತು ಒಂದು ಇತ್ತತೇಲಿ ಯಾರಿಗಾರೋ ಎನುವ ನಾಸ್ತಿಕತೆಯನು ನೂಕಿ ದಾಟಿ ದಿಕ್ಕಾಲಗಳ ಸುತ್ತು ಬೇಲಿ ಕವಿಯು ಮಾನಸಪುತ್ರ ಅವನು ಆಗಸದೇಹಿ ಮಾತಿನಲೆ ಮೂಡುವಾ ಭಾವಜೀವಿ ಮೈಯಾಚೆ ಉಸಿ...

ಶ್ರೀಮಾನ್ ದ ರಾ ಬೇಂದ್ರೆಯವರಿಗೆ ದೋಷರಾಹಿತ್ಯದಾ ಕಲ್ಪನಾ ರಾಜ್ಯದೊಳು ಸಗ್ಗದೂಟವನುಣುವ ಹಿರಿಯ ಕಬ್ಬಿಗನೇ ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂ ಇಣಿಕಿಣಿಕಿ ನೋಡುತಿದೆ ಈ ಸಣ್ಣ ಮನವು ಕವಿಯ ಬರೆಹವ ಕಂಡ ರಸಬಿಂದುಗಳ ಸವಿಯೆ ಸುಳಿಯುತಿದೆ ಭೃಂಗದೊಲು...

ಚಿದ್ರೂಪನಂತೆ ತೊಳ ತೊಳಗಿ ಬೆಳಗುತಿಹ ದಿವ್ಯಜ್ಞಾನಿ ತಾತ ಸದ್ಗುಣದ ಕಣಿಯು ಬಹುಪೂಜ್ಯನೆಂದು ಮನ ಗಂಡೆನೆಂದೊ ಪೂತ ನಿಜತತ್ವವರಿತು ಗುರು ಪೀಠವೇರಿ ಮೆರೆದಿರುವ ಕರ್ಮಯೋಗಿ ವಿಜಯವನುಗೈದೆ ಅದ್ವೈತದೊಳಗೆ ಬಿಡು ನೀನೆ ಪರಮ ತ್ಯಾಗಿ ಇಂದ್ರಿಯವ ಜಯಿಸಿ ಬಂಧ...

ಪಂಡಿತರ ಪಾಮರರ ಮನವನೊಲಿಸುತಲಿರುವೆ ಕುದಿಯುತಿಹ ಆತ್ಮಕ್ಕೆ ಶಾಂತಿಯನು ಕೊಡುವೆ ಕರೆದೊಯ್ವೆ ಎಲ್ಲಿಗೋ ಕಂಬನಿಯ ತರಿಸುವೆ ಸರಿಯಿಲ್ಲ ನಿನಗಾರು ಸಂಗೀತವೆ! ನಿರ್ಮಲದ ಹೃದಯಕ್ಕೆ ಭಕ್ತಿಯನು ಕರುಣಿಸುವೆ ಭಾವದಲಿ ನಿಮಿಷದೊಳು ದೇವನನು ಕಾಣಿಸುವೆ ಪ್ರೇಮಕ್...

ಬಂಧನದ ಬಲೆಯೊಳಗೆ ಸಿಲುಕಿ ನರಳದೆ ಸುಳಿವ ಪಕ್ಷಿ ಕೂಟವೆ! ನಿಮ್ಮ ಬಾಳ್ವೆ ಲೇಸು ರೆಕ್ಕೆಗಳ ಪಸರಿಸುತ ಕುಪ್ಪಳಿಸಿ ನೆಗೆದೋಡಿ ಬಯಲೊಳಗೆ ಸಂಚರಿಪ ಬದುಕೆ ಲೇಸು ಗೆಳೆಯರೆಲ್ಲರು ಕೂಡಿ ಸೊಗದ ಬನಗಳ ಸೇರಿ ಚಿಲಿಪಿಯ ಧ್ವನಿಗೈವ ಪರಿಯೆ ಲೇಸು ಮರದಿಂದ ಮರಕೋಡ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...