ಅಂತರಿಕ್ಷ ನೌಕಾ ನಡುಮನೆಯೊಳಗೆ ಸುತ್ತು ಹೊಡೆದೂ ಹೊಡೆದೂ ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ ಮೊನ್ನೆಯಷ್ಟೇ ಬಂದಿಳಿದ ಡೆನಿಸ್ ಟಿಟೋ ಮಾತಿಗೆ ಸಿಕ್ಕ. ಎಂಥಾ ಛಲಗಾರನೋ ನೀನು ಟಿಟೋ ಕನಸು ನನಸಾಗಿಸಿಕೊಂಡು ಬಿಟ್ಟೆ ಹಣ ಇದ್ದರೇನಂತೆ...
ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ಚಾಕಲೇಟ್ ಸೀಪುವ...
ಅಂತರಾಳ ಬೇರುಗಳ ಭಾವಸ್ಪರ್ಶಕೆ ಸಹ್ಯಾದ್ರಿಯ ತುಂಬೆಲ್ಲ ಹಸಿರು. ಎಣ್ಣೆ ಹಚ್ಚಿ ಎರೆದ ಮಿರುಗು ಗತ್ತಿನ ಮಾತು ವಯ್ಯಾರ ಗಗನ ಚುಂಬಿಸುವ ಹಂಬಲ. ನೂರು ಸಾವಿರ ಮಾತುಗಳ ಒಳಗೊಳಗಿನ ಚಡಪಡಿಕೆಗೆ ಮೌನ ಆದರೂ ಎಷ್ಟೊಂದು ಸ್ಪಷ್ಟ...
ಆ ಸರ್ಕಲ್ಲೇ ಹಾಗೆ ಭಯಪಡಬೇಡಿ, ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು. ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು ಅದೇನು ತರಾತುರಿ ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ...
ಅದೇ ಮೊದಲನೆಯ ಸಲ ಸೀರೆ ಉಟ್ಟು ಮಾಂಗಲ್ಯಕಟ್ಟಿಸಿಕೊಂಡ ಹುಡುಗಿ- ಮದುವೆ ಮುಗಿಸಿ ಬಿಟ್ಟುಹೊರಡುವ ತಂದೆತಾಯಿಯರ ಅಗಲಿಕೆಯ ನೋವಿಗೆ ಅರಿಯದೇ ಕಣ್ಣೀರು ತುಂಬಿದ್ದು ಬಿಕ್ಕುತ್ತ ಸೆರಗಂಚಿನಿಂದ ಕಣ್ಣೊರಸಿಕೊಳ್ಳುವ ಮದುವಣಗಿತ್ತಿ- ಕಂಪ್ಯೂಟರ್ ಮೇಲೆ ಕೈಚಳಕವಾಡಿಸಿ ಹಾಯ್ ಸುಜಿ,...
ನಡುರಾತ್ರಿ ಜೋರಾಗಿ ಮಳೆ ಬೀಳಾಕ ಸುರುವಾಗಿತ್ತು ಹಾಲಿವುಡ್ ಪಿಕ್ಚರ್ ಅರ್ಧನೋಡಿ ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು. ಅದರ ಕನಸು ಬಿದ್ದದ್ದು ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ ದಿಲ್ಲಿದರ್ಬಾರ್ ಕುತುಬ್‌ಮಿನಾರ್ ತಾಜಮಹಲ್ ಬಾಂಬೆ ಬಜಾರ್ ಸುರಯ್ಯಾ...
ಯಾರಿಗಾದರೂ ಏನಾದರೂ ಆಗಬಹುದು ಮುಂದಿನ ಕ್ಷಣಗಳಲಿ ಸಾಯಬಹುದು ಸ್ವಲ್ಪದರಲ್ಲಿಯೇ ಮರುಹುಟ್ಟು ಪಡೆಯಲೂಬಹುದು. ಗಳಿಸಬಹುದು ಕಳೆದುಕೊಳ್ಳಲೂಬಹುದು ಹೀಗೇಽ ಇನ್ನೂ ಏನೇನೋ...... ಆದರೂ ಒಳತೋಟಿಗೆ ಕನಸುಗಳೇನೂ ಕಡಿಮೆ ಇಲ್ಲ ಸದ್ದು ಗದ್ದಲಲ್ಲೇ ಹೆಣೆದುಬಿಡುವ ಸೌಧಕ್ಕೂ ಗೆದ್ದಲಿರುವೆಗಳ ಕಾಟ...
ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ ಒಳ ಹೊರಗೆಲ್ಲ ಸುಟ್ಟು ಕರಕಲು ಬೆಚ್ಚನೆಯ ಬೂದಿಯೊಳಗೆ ಸದಾ ಅವಳ ಚಿತ್ರ. ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು ಬರಸೆಳೆತದ ಚಿಗುರು ಎಲೆ ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ ಮನೆ ತುಂಬ ರಂಗೋಲಿಯ...