ನಾವು

ಯಾರಿಗಾದರೂ ಏನಾದರೂ ಆಗಬಹುದು
ಮುಂದಿನ ಕ್ಷಣಗಳಲಿ
ಸಾಯಬಹುದು ಸ್ವಲ್ಪದರಲ್ಲಿಯೇ
ಮರುಹುಟ್ಟು ಪಡೆಯಲೂಬಹುದು.
ಗಳಿಸಬಹುದು ಕಳೆದುಕೊಳ್ಳಲೂಬಹುದು
ಹೀಗೇಽ ಇನ್ನೂ ಏನೇನೋ……

ಆದರೂ ಒಳತೋಟಿಗೆ ಕನಸುಗಳೇನೂ ಕಡಿಮೆ ಇಲ್ಲ
ಸದ್ದು ಗದ್ದಲಲ್ಲೇ ಹೆಣೆದುಬಿಡುವ
ಸೌಧಕ್ಕೂ ಗೆದ್ದಲಿರುವೆಗಳ ಕಾಟ
ಅಸ್ಪಸ್ಟ ಮುಖವಾಡಗಳು ಮನೆಮನೆಗಳೊಳಗೆ
ಬೆವರ ಹನಿ ಉದುರಿಸುವ
ಕಟ್ಟಡ ಕೆಲಸಗಾರರ ಸ್ಪಷ್ಟಮಾತು.

ಕಾಲಯಾತ್ರೆಯ ಪ್ರವಾಸಿಗಳು
ಬದುಕಿಗೆ ಅರ್ಥಕೊಡದೆ ಅರಿಯದೇ
ಭಾವನೆಗಳಿಗೆ ಬೆನ್ನುಹತ್ತಿದವರು
ಗೊತ್ತಿದ್ದೂ ಗೊತ್ತಿದ್ದೂ
ವಿಚಿತ್ರ ಕೂಪಗಳಿಗೆ ಬೀಳುವ
ಸ್ವಾರ್ಥ ಮೋಹಮದಮತ್ಸರ
ತುಂಬಿಕೊಂಡಿರುವ ಟೊಳ್ಳು ಜೀವಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿಗೆ
Next post ಉತ್ಸವ

ಸಣ್ಣ ಕತೆ

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…