Home / ಪದಗಳೊಂದಿಗೆ ನಾನು

Browsing Tag: ಪದಗಳೊಂದಿಗೆ ನಾನು

ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ...

ನನ್ನದೇ ತಾರಸಿಯಲ್ಲಿ ಒಣಗಿಸಿದ ಒಂದೇ ಜಾತಿಯ ಬೀಜಗಳು ಮೈಮನ ಗೆದ್ದಿದ್ದವು. ಕಂಕುಳಲ್ಲಿ ಎತ್ತಿಕೊಂಡು ಉಣಿಸಿ ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವ...

ಕಾರದ ಹೂಹನಿ ನೀ ಖಾರವಾಗದೇ ಬಾ ಉಬ್ಬರಿಸದೆ ಅಬ್ಬರಿಸದೆ ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ ಮೋಹನನಾಗಿ ಬಾ ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ ಶರಧಿಯಾಳದಿ ಚಿಪ್ಪ ಗರ್ಭವ ಸೇರಿ ಮುತ್ತಾಗು ಬಾ ಒತ್ತಾದ ಗಿಡಗಂಟಿಗೆ ಮಸ್ತಕಾಭಿಷೇಕದ ಮಂತ್ರಜಲವಾಗಿ ಬ...

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು ಆಟ, ಒಂದು ಅಧ್ಯಾಯ ಮತ್ತೆ ಪುಟ ತಿ...

ನಲ್ಮೆಯ ಗೂಡು ನಾದಮಯ ನಲ್ಲನಾ ನುಡಿಯೂ ಪ್ರೇಮಮಯ ಸಂಚರೀಪ ವಾಂಛೆಗೆ ಅಳುಕುವುದು ಮೈ ಮನ, ಎನ್ನೋಲವು ಆ ಒಲವ ಬೇಡುವುದು ಅನುದಿನ. ಈ ಹೊತ್ತು ಅವನಿರದೆ ತಿಂಗಳನು ಬಂದಿರಲು, ಹುಣ್ಣಿಮೆಯು ಹಗೆಯಾಗಿ ಕೊಲ್ಲುತಿರಲು ಹೇಗೋ ಏನೋ ಹಾಗೆ ಹಂಬಲಿಕೆ ಕನವರಿಕೆ ಅ...

ಬದುಕು ಬಂಡಿಹಬ್ಬ ಹಂಗಿಸುವವ ಕೊರಡುರಾಶಿಗಳ ದಿಬ್ಬ ಕಾಮ, ಕ್ರೋಧ, ಲೋಭ ಮೋಹ ಮದ, ಮತ್ಸರಗಳು ಅರಿಗಳಲ್ಲ ಅರಿತುಕೊಳ್ಳಲು ಆಯುಧಗಳು. ನಿಮ್ಮ ಆತ್ಮಗಮನಕ್ಕೆ ಬದುಕಿಗೆ ಕಾಮನೆಗಳಿಲ್ಲದಿರೆ ಕಾಡು ಈ ಮನೆ ಕಾಮವೆಂದರೆ ವೃಷ್ಟಿ ಸಂಕುಲ ಜೀವ ಸೃಷ್ಟಿ ಮೋಹವೆಂಬ...

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು. ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ- ನೆಲ ನುಡಿಯ ಬಲ್ಮೆಗೆ ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ. ಹೊಂಬಣ್ಣವೆಂದು ಕನ್ನಡವ ಮೆಲ್ಲುತ್ತ ಹಾಡಿದರು ಕುಡಿಯುತ್ತ ತೇಗಿದರು ಕನ್ನಡದಲೇ ಮಿಂದರು ಜನಪದರು ಕಾಯಕ...

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ ದಾನದ ಸ್ಫುರಣೆ ನಮ್ಮಯ ಮನದಲಿ ನಿನ್ನದೇ ಸ್ಮರಣೆ ಕಾಳಿ ಜಪವಿದೋ ಮರೆಸಿತು ಬವ...

ತುಂಬಿಲ್ಲವಿನ್ನು ಜೋಳಿಗೆ ಮತ್ತದು ಎಂದಿಗೂ ತುಂಬದು ಅವರಿವರು ಅಷ್ಟಷ್ಟು ಕೊಟ್ಟಷ್ಟು ತೃಷೆ ಮಿಗುವುದೇ ಹೊರತು ಇಂಗದದು ಜೋಕೆ? ಕರೆದು ನೀಡುವೆನೆನುವ ಮಂದಿ ನಂಬಿ ನಿಂತಿರೋ, ಹೊಂಚಿದ್ದು ತಲೆ ಮೇಲೆ ಮೆಣಸು ಅರೆಯದೆ ಬಿಡರು ಜೋಕೆ? ಜೋಳಿಗೆ ಹರಿದ ಗೋಣಿ...

ಎಲ್ಲರಂತೆ, ಎಲ್ಲದರಂತೆ, ಸಹಜವೆಂಬಂತೆ ಸೂರ್ಯ ಚಂದ್ರರಿಲ್ಲವೇ, ಮಿನುಗುವ ತಾರೆಗಳಿಲ್ಲವೇ ಹಾಗೆ ಸಂತಸ ನೀಡುತ್ತಿಲ್ಲವೇ ಅಂತೆ ನೀನು ನನಗಾಗೇ ಎಂದು ತಿಳಿದೆ ನಿನ್ನಾಳ, ಅದರೊಳಗೊಂದರ್ಥ, ಒಂದಾಸೆ, ಹೊರಡದ ಹೊರಡಿಸಲಾಗದ ತುಮುಲ ತುಡಿತ ಇತ್ತೆಂದು ಅರಿವಾ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...