Home / ನಿನ್ನೊಲುಮೆಯಲಿ

Browsing Tag: ನಿನ್ನೊಲುಮೆಯಲಿ

ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು ದೀಪಗಳ ಮಿಲನ ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ ...

ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...

ಭಾರತಾಂಬೆಯ ಮಕ್ಕಳು ನಾವು ಕನ್ನಡ ತಾಯಿಯ ಒಕ್ಕಲು || ತಾಯಿಯ ಒಡಲ ಹೂಗಳು ನಾವು ಅವಳ ಅಕ್ಕರೆಯ ಕಿರಣಗಳು || ಹಸಿರ ಒಡಲ ಕಣಗಳು ನಾವು ಉಸಿರಾಗುವ ಮಾನವತೆಯ ಸಸಿಗಳು || ಭಾ || ಗಂಗೆ ಯಮುನೆ ಸಿಂಧು ಕಾವೇರಿ ತುಂಗೆ ಭದ್ರೆ ಜೀವನದಿ || ಭಾ || ಜಾತಿ ಭೇ...

ಭವ್ಯ ಭಾರತ ಭೂಮಿ ನಮ್ಮದು ನಮ್ಮ ತಾಯಿಯು ಭಾರತಿ ನಾವು ಅವಳ ಮಡಿಲ ಮಕ್ಕಳು ಅದುವೆ ನಮ್ಮ ಕೀರುತಿಯು || ಆ ಹಿಮಾಲಯ ಕನಾಕುಮಾರಿಯು ನಡುವೆ ಹರಡಿದೆ ಭಾರತ ನಮ್ಮ ಭಾರತ ಸ್ವರ್ಗ ಭೂಮಿಯು ನಾವು ಪಡೆದಿಹ ಸುಕೃತವು || ಪುಣ್ಯ ನದಿಗಳು ಹಸಿರು ವನಗಳು ಸಾಧು ...

ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ ಕಣ್ಣೀರ ಸುರಿಸುತ್ತಾ ಕೊರಗುವೇಕೆ! ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ ಸೀತೆ ಮಿಥಿಲೆ ತೊರೆದು ಹೋಗುವಳೆಂದೆ! ಸೀತೆ ಮನ ತುಂಬಿದವ ಶ್ರೀರಾಮ ಶ್ರೀರಾಮ ವರಿಸಿದ ಹೆಣ್ಣು ಸೀತೆ ಇಬ್ಬರಾಸೆಗಳಿಂದು ಕೈಗೂಡಿ ಅವ...

ಭಾವನ ಭಾವನ ಭಾವನ ನಿನ್ನ ಉಳಿವಿನಲಿ ನನ್ನ ಚೇತನ ಚೇತನ ಚೇತನ ಚೇತನ || ಬದುಕೆಂಬ ಬಳ್ಳಿಯಲಿ ಹೂವೆಂಬ ಚೇತನ ಭಾವನ || ಉಣ್ಣುವ ತುತ್ತು ತುತ್ತಿನಲ್ಲಿ ಅನಂತ ಅನಂತ ಚೇತನ ಬಡವ ಬಲ್ಲಿದ ಭೇದ ತೊರೆದ ನಿತ್ಯನೂತನ ನೂತನ ಭಾವನ || ಜೋಗುಳ ಹಾಡುವ ತಾಯಿ ಮಮತ...

ಜಯತು ವಿಶ್ವರೂಪಿಣಿ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೇ || ಕಾಳರಾತ್ರಿ ಕದಂಬ ವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣೀ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆಯೆ || ಜಯತು ರಾಜರಾಜೇಶ್ವರಿ ಜಯತು ಭುವನೇಶ್ವರಿ ...

ಧರೆಗಿಳಿದು ಬಂದಿದೆ ಸ್ವರ್ಗದ ತಾಣವು ಸುಂದರ ಮಂದಿರವು ನಮ್ಮ ಭಾರತ ಭೂಮಿ || ಭುವನ ಮನೋಹರ ಚೆನ್ನಯ ತಾಣವು ತನ್ಮಯ ಚಿತ್ತದ ಜೀವರಾಶಿಗಳು ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು || ಯುಗ ಯುಗಗಳೆ ತಾಳಿದೆ ಗತ ವೈಭವ ಸಾರಿದೆ ಕಣ ಕಣವೂ ನಿನ್ನ ಸ್ತುತಿಯನ...

ಭವ್ಯ ಭಾರತ ಭೂಮಿ ನಮ್ಮದು ಸ್ವತಂತ್ರ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನಿಯಮ ಭಾವೈಕ್ಯತೆಯ ಸಿರಿ ನಾಡಿದು || ಜನನಿ ಭಾರತಿ ಭೂಮಿ ಸ್ವರ್ಗ ತಾಣ ಮುಗಿಲ ಕಾನನ ಸಮೃದ್ಧಿ ಸಂಪದ ಹೊಂದಿ ಮೆರೆಯುವ ಸಂಸ್ಕೃತಿಯ ಸಿರಿ ಧಾಮವು || ಕನಕ ದೃಷ್ಟಿ ವನಿತ ...

ಹಸೆಮಣೆ ಮೇಲೆ ಹೊಸ ವಧುನಾಚುತ ಕುಳಿತಿಹಳು ಸೌಂದರ್ಯವತಿ ಪಕ್ಕದಲಿ ಬೀಗುತ ಕುಳಿತಿಹ ವರನು ಹೊಸ ಜೀವನದ ಸಂಭ್ರಮದಿ || ಮನೆಯ ಮುಂದೆ ಆಕಾಶವೆತ್ತರ ಚಪ್ಪರ ಹಾಕಿದೆ ನೋಡವ್ವ ಬಾಳೆ ಕಂಬಗಳು ತಳಿರು ತೋರಣವು ಹೂಗಳ ಮಾಲೆಯು ಕಾಣಿರೇ || ಸುತ್ತ ಪ್ರಕೃತಿ ಹಚ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...