ಭವ್ಯ ಭಾರತ ಭೂಮಿ ನಮ್ಮದು

ಭವ್ಯ ಭಾರತ ಭೂಮಿ ನಮ್ಮದು
ಸ್ವತಂತ್ರ ಭಾರತ ಭೂಮಿ ನಮ್ಮದು
ಶಾಂತಿ ಸಹನೆ ನೀತಿ ನಿಯಮ
ಭಾವೈಕ್ಯತೆಯ ಸಿರಿ ನಾಡಿದು ||

ಜನನಿ ಭಾರತಿ ಭೂಮಿ ಸ್ವರ್ಗ
ತಾಣ ಮುಗಿಲ ಕಾನನ
ಸಮೃದ್ಧಿ ಸಂಪದ ಹೊಂದಿ ಮೆರೆಯುವ
ಸಂಸ್ಕೃತಿಯ ಸಿರಿ ಧಾಮವು ||

ಕನಕ ದೃಷ್ಟಿ ವನಿತ ಭಾವ
ನಿತ್ಯ ವರ್ಣ ಚೇತನ
ಸತ್ಯ ಧರ್ಮವು ನ್ಯಾಯನೀತಿಯು
ಎತ್ತಿ ಹಿಡಿದಿಹ ಹಿರಿತನ ||

ಶೌರ್ಯ ಸಾಹಸ ಸಮರ ಕೀರ್ತಿಯ
ಶಿಖರಕೆತ್ತಿದ ನಾಡಿದು ಉದಯಕಿರಣ
ಸುದಯ ಅಭಿಮಾನದಲಿ ಮೆರೆದ
ಕಲಿ ಪುಣ್ಯ ಗೂಡು ನಮ್ಮದು ||

ಸಾಧು ಸಂತರ ತ್ಯಾಗ ಪುರುಷರ
ತ್ಯಾಗ ರೂಪ ದೀಪ ವಂದನ
ಅಮರಗಾನ ವಿರಾಟ ಮನನ
ಪುಣ್ಯ ನಾಡಿದು ಜನ್ಮ ಭೂಮಿ ನಮ್ಮದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೊದುತ್ತನಿಯನ್ಗಳ್
Next post ಹಟಮೆಂಟ್ ಜೀವನ

ಸಣ್ಣ ಕತೆ

 • ಜಂಬದ ಕೋಳಿ

  ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…