Home / ಕನ್ನಡ ಕಾದಂಬರಿ

Browsing Tag: ಕನ್ನಡ ಕಾದಂಬರಿ

ಸಂಗನ ವಿಷಯ ಶುರಮಾಡಿ ಇದೇನು ನಮ್ಮನ್ನು ಮಂಗನೆಂದು ಭಾವಿಸಿದ್ದಾನೆಯ ಈತ? ಸುತ್ತಿ ಬಳಸಿ ಹೇಳುವ ಇವನಾರು? ದೆವ್ವವೊ? ನಟನೊ? ಮಂತ್ರವಾದಿಯೊ? ಎಲ್ಲೆಲ್ಲೂ ಕೊಂಡೊಯ್ದು ಹಿಂಸಿಸುವ ರಾಕ್ಷಸನೊ? – ಎಂದು ಲೇಖನ ಬಗ್ಗೆಯೇ ಅನ್ನಿಸಿಟ್ಟಿತೆ? ಛೆ! ಇರಲಾರದು ...

ಅಧ್ಯಾಯ ಎಂಟು ವಿಜಯನಗರದ ಅರಮನೆಯಲ್ಲಿ ಓಡಾಟಿಪೋ ಓಡಾಟ. ಮಂತ್ರಿ ಗಳೆಲ್ಲರೂ ಗುಸಗುಸ ಪಿಸಪಿಸವಾಡುತ್ತಿದ್ದಾರೆ. ಅಷ್ಟರಲ್ಲಿಯೇ ಸಮ್ಮುಖಕ್ಕೆ ಬರಬೇಕೆಂದು ಅಪ್ಪಣೆಯಾಯಿತು. ಎಲ್ಲರೂ ಒಬ್ಬರೊಬ್ಬರಾಗಿ ರಾಯರ ಸನ್ನಿಧಿಗೆ ಬಂದು ಕಾಣಿಸಿಕೊಂಡು ಭಯಭಕ್ತಿಗಳ...

ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ...

ಅಧ್ಯಾಯ ಏಳು ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂ...

ಅಧ್ಯಾಯ ಆರು ಶಾಂಭವನಾನಂದರು ಪೂಜೆಯನ್ನುಮುಗಿಸಿ ಹೋಮಮಾಡಿ ಇಂದು ಬಹು ಸುಖಿಗಳಾಗಿದಾರೆ. ಪೂರ್ಣಾಹುತಿಯ ಕಾಲದಲ್ಲಿ ದೇವಿಯೇ ಬಂದು ಆಹುತಿಯನ್ನು ಸ್ವೀಕರಿಸಿದಳೆಂದು ಅವರ ಆನಂದಕ್ಕೆ ಪಾರವಿಲ್ಲ. ಭರತಾಚಾರ್ಯರು ವಿನಾ ಇನ್ನು ಯಾರೂ ಅಲ್ಲಿ ಇಲ್ಲ. ಅವರೊಡ...

ಅಧ್ಯಾಯ ಐದು ಸೆಟ್ಟರಿಗೆ ದಾರಿಯ ಉದ್ದಕ್ಕೂ ನಿಜವಾಗಿ ಯಾವುದೋ ಒಂದು ಲೋಕಕ್ಕೆ ಹೋಗಿಬಂದಿರುವಂತೆ ಆಯಿತು. ಚಿನ್ನಳ ಕೈಹಿಡಿದುಕೊಂಡು ಮುತ್ತಿಟ್ಟಾಗ ಏನೋ ಬಹಳ ಪ್ರಿಯವಾದ ಒಂದು ಚಳುಕು ಹೊಡೆದಂತಾಗಿ ಮೈಯೆಲ್ಲ ಮುಳ್ಳು ಕಟ್ಟಿತು. ಅವರು ಯಾವ ಹೆಂಗಸನ್ನು...

ಅಧ್ಯಾಯ ನಾಲ್ಕು ತುಂಗಭದ್ರೆಯ ತೀರದಲ್ಲಿ ಆ ದೊಡ್ಡ ದೊಡ್ಡ ಬಂಡೆಗಳ ಅತ್ತಕಡೆ, ಮತಂಗಾಶ್ರಮದ ಹತ್ತಿರ ಹಸ್ತಿರವಾಗಿ ಒಂದು ಸಣ್ಣ ತೋಟದಲ್ಲಿ ಭರತಾ ಚಾರ್ಯರ ಆಶ್ರಮ. ಅವರ ನಿಜವಾದ ಹೆಸರು ಶ್ಯಾಮಾಚಾರ್ಯರು ಎಂದು. ಆದರೆ ಅವರ ಭರತಶಾಸ್ತ್ರದ ಅಪಾರ ಪಾಂಡಿತ...

ಅಧ್ಯಾಯ ಮೂರು ಗೋಲ್ಕಂಡದಲ್ಲಿ ಸೆಟ್ಟರದೊಂದು ಸ್ಪಂತಮನೆ ಇದೆ. ಅಲ್ಲಿ ಸೆಟ್ಟರದು ಒಂದು ಸಂಸಾರ ಯಾವಾಗಲೂ ಇರುತ್ತದೆ. ಒಬ್ಬ ಮನೆವಾರ್ತೆ ಸಂಸಾರ ದೊಡನೆ ಅಲ್ಲಿ ಯಾವಾಗಲೂ ಇರುತ್ತಾನೆ. ಅಲ್ಲಿನ ವ್ಯಾಸಾರ ವಾಣಿಜ್ಯ ರಾಜಕೀಯ ಎಲ್ಲವನ್ನೂ ಸಂಗ್ರಹಿಸಿ ಸೆಟ...

ಎರಡನೆಯ ಅಧ್ಯಾಯ ಯಜಮಾನ್‌ ವೀರಪ್ಪಸೆಟ್ಟರು ಇಲ್ಲದಿದ್ದರೆ ವಿಜಯನಗರದಲ್ಲಿ ಯಾವ ದೊಂದು ಮಹಾಜನಕಾರ್ಯವೂ ನಡೆಯುವಂತಿಲ್ಲ. ವಂಶಪಾರಂಪರ್ಯವಾಗಿ ನಡೆದು ಬಂದ ದಾನ ಧರ್ಮಗಳ ಪ್ರಭಾನ ಇರಬೇಕು ಅವರ ಮನೆಯಲ್ಲಿ ಮಹಾಲಕ್ಷ್ಮಿ ನೆಲಸಿದ್ದಳು. ಇತ್ತ ಅಂಗಡಿಯಲ್ಲಿ...

ಅಧ್ಯಾಯ ಒಂದು ೧ ವಿಜಯ ವಿಠ್ಮಲ ದೇವಸ್ಥಾನದಲ್ಲಿ ಇಂದು ಗದ್ದಲವೋ ಗದ್ದಲ. ಕಾರ್ತಿಕ ಶುದ್ಧ ದ್ವಾದಶಿ. ಸ್ವಾಮಿಗೆ ಇಂದು ಬೃಂದಾವನೋತ್ಸವ. ಚಿನ್ನದ ಬೃಂದಾವನದಲ್ಲಿ ಸ್ವಾಮಿಯನ್ನು ಬಿಜಮಾಡಿಸಿದ್ದಾ ರೆ… ರಂಗಮಂಟಪದಲ್ಲಿ ಇಂದು ಸ್ವಾಮಿಯ ಸನ್ನಿಧಾ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...