Home / ಕಥೆ / ಕಾದಂಬರಿ / ಅವಳ ಕತೆ – ೭

ಅವಳ ಕತೆ – ೭

ಅಧ್ಯಾಯ ಏಳು

ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂದಾಣೆ ಬಡ್ಡಿ ತೆಗೆದು ಕೊಳ್ಳುವನು. ಯಾರ ಹತ್ತಿರಲೂ ಅವನು ನಿಷ್ಟುರ ಕಟ್ಟಿಕೊಳ್ಳುತ್ತಿರಲಿಲ್ಲ.

ಈ ದಿನ ರಂಗನಾಥಪುರದಿಂದ ಸೈಯದ್‌ ಸಾಬಿ ಬಂದಿದ್ದಾನೆ. ಅವನು ಕರೀಂಖಾನನ ಸ್ನೇಹಿತ, ಅವನಿಗೆ ಅಲ್ಲಿ ರಂಗನಾಥಪುರದಲ್ಲಿ ಬಡವರಾದ ಎಷ್ಟು ಜನ ಹಿಂದೂಗಳು ಇದ್ದರೋ ಅವರಲ್ಲೆಲ್ಲ ಬಹಳ ಸ್ನೇಹ.

ಇಬ್ಬರೂ ಸ್ನೇಹಿತರೂ ಶುಕ್ರವಾರದ ದಿನ ಹೊಸಪೇಟೆಯ ಮಸೀದಿಯಲ್ಲಿ ನಮಾಜಿಗೆ ಬರುವರು. ನಮಾಜ್‌ ಮುಗಿದ ಮೇಲೆ ಇಬ್ಬರೂ ಅದೇ ಬೀದಿಯ ಕೊನೆಯಲ್ಲಿದ್ದ ರಂಗಪ್ಪನ ತಿಂಡಿಯಂಗಡಿಯಲ್ಲಿ ಕುಳಿತು. ಅಷ್ಟು ತಿಂದು ಚಾ ಕುಡಿದು ಹೋಗುವರು. ಹೋಗುವುದಕ್ಕೆ ಮುಂಚೆ ಒಂದು ಎರಡು ಬೀಡಿ ಸೇದುವಷ್ಟು ಹೊತ್ತು ರಂಗಪ್ಪನ ಜೊತೆಯಲ್ಲಿ ಒಂದಿಷ್ಟು ಹರಟೆ ಹೊಡೆಯುವರು.

ಆ ದಿನವೂ ಹಾಗೆಯೇ ಅಂಗಡಿಯಲ್ಲಿ ಇಬ್ಬರೂ ಸೇರಿದರು. ಇವ ರಿಬ್ಬರೂ ಒಂದು ಮೂಲೆಯಲ್ಲಿ ಬೇರೆ ಕುಳಿತಿದ್ದನ್ನು ಕಂಡು ರಂಗಪ್ಪನೇ ಅಲ್ಲಿಗೆ ಬಂದ. “ಏನ್ರೀ ಸಮಾಚಾರ” ಎಂದು ಅವನೇ ಕೇಳಿದೆ. ಇಬ್ಬರೂ ತಿಳಿಯದಿದ್ದನರಂತೆ, “ಇಲ್ಲ ನಮಗೆ ಏನೂ ತಿಳಿಯದು” ಎಂದರು.

ರಂಗಪ್ಪನು ಅವರನ್ನು ಗೇಲಿಮಾಡುತ್ತಾ ಹೇಳಿದ “ಏನ್ರಿ, ಸೈಯದ್‌ ಸಾಬರೇ, ನಿಜ ಹೇಳಿರಿ. ನೀವು ಮೊನ್ನೆ ಬಿಜಾಪುರದಿಂದ ಬಂದಿರಿ ಹೌದೋ ಅಲ್ಲವೋ ?”

“ಹೌದು, ಅಲ್ಲಿ ನಮ್ಮ ನೆಂಟರು ಇದ್ದಾರೆ. ಅದಕ್ಕೆ ಹುಣ್ಣಿಮೆ, ಅಮಾಸೆ ಹೋಗ್ತಾನೇ ಇರ್ತೀನಿ.”

“ಬಿಜಾಪುರದಲ್ಲಿ ಮಸಲತ್ತು ನಡೆದಿದೆಯಂತೆ. ನಮ್ಮ ರಾಜ್ಯದ ಮೇಲೆ ಅಲ್ಲಿನ ಸುಲ್ತಾನರು ದಂಡೆ ಬರುತ್ತಾರೆಯಂತೆ.?

“ಇದೀಗ ನಂಬೋ ಮಾತು. ಅಲ್ಲಿನ ಸೈನ್ಯದಲ್ಲಿ ಎಲ್ಲರೂ ಮುಸಲ್ಮಾನ ರೇನೂ ಅಲ್ಲ. ಹಿಂದೂಗಳು, ಅದರಲ್ಲಿ ಮರಾಠೆಯವರು, ಬೇಕಾದಷ್ಟು ಜನ ಇದ್ದಾರೆ. ನಿಮ್ಮ ಹಿಂದೂ ರಾಜ್ಯದ ಮೇಲೆ ಹಿಂದೂಗಳೇ ಬಿದ್ದಾರೆ ಯೋಚನೆಮಾಡಿ. ಸುಲ್ತಾನರಿಗೂ ತಲೆ ಬುದ್ಧಿ ಇದೆ. ಅವರು ದುಡು ಕೋದಿಲ್ಲ.”

“ಬಿಡಿ ಬಿಡಿರಿ. ನಂಗೆ ಬಾಳ ನೇರವಾದ ಸುದ್ದಿ ಬಂದಿದೆ. ಅಹಮ್ಮದ್‌ ನಗರದವರು ಗೋವೆ ಹಿಡುಕೊಂಡು ಇತ್ತಲಾಗಿ ಪಶ್ಚಿಮ ಘಟ್ಟಗಳ ಕಡೆ ಬರು ತ್ತಾರಂತೆ. ಆ ವೇಳೆಗೆ ಬಿಜಾಪುರದವರೂ ಗೋಲ್ಕೊಂಡದವರೂ ಕೃಷ್ಣಾ ನದಿ ದಾಟ ನುಗ್ಗುವರಂತೆ. ಬೀರಾರ್‌, ಬಿದರೆಯವರ ಸೈನ್ಯ ಆಗಲೇ ಗೋಲ್ಕೊಂಡದ ಹತ್ತಿರ ಹತ್ತಿರಕ್ಕೆ ಬಂದು ಬಿಟ್ಟಿದೆಯಂತೆ. “

ಕರೀಂಖಾನ್‌ “ಕೇಳುತ್ತಾ ಕುಳಿತಿದ್ದವನು ನಡುವೆ ಬಾಯಿ ಹಾಕಿ “ನೋಡ್ರಿ, ರಂಗಪ್ಪ, ಆಗಾಗ ಅವರು ಇವರ ಮೇಲೆ ಬೀಳೋದು, ಇವರು ಅವರ ಮೇಲೆ ಬೀಳೋದು, ಇದಕ್ಕಿಂತ ಇಬ್ಬರಿಗೂ ಒಂದು ದಘಾ ಭಾರಿ ಲಡಾಯಿ ಆಗೋಗಿ ಐಸಾ ವೈಸಾ ಆಗೋದೇ ಒಳ್ಳೋದು. ಈ ರಾಯರೂ ಆ ಸುಲ್ತಾನರೂ ಜಗಳ ಮಾಡೋದು. ಇವರ ಇತ್ತಾ ಕಡೆ, ಅವರು ಅತ್ತಾಕದೆ ಯಿಂದ ಬರೋದು, ನಮ್ಮ ಗರೀಬ್‌ ಜನನೆಲ್ಲ ಲೂಟಿ ಮಾಡೋದು, ಖೂನ್‌ ಮಾಡೋದು, ಕೆಡಿಸೋದು. ಲಡಾಯ್‌ ಬಂತು ಆಂದರೆ ನವಾಬ್‌ ಜನಾ ಎಲ್ಲ ಕುದುರೆ ಆನೆ ಗಾಡಿ ಸಾರೋಟ್‌ನಲ್ಲಿ ಒಡಿಬಿಡುತ್ತದೆ. ನಾಮಗೆ ಬಿಟ್ಹೋಗೊಹಂಗೂ ಇಲ್ಲ. ಇಲ್ಲಿ ಇರೋ ಆಂಗೂ ಇಲ್ಲ. ನಮ್ಗಗೆ ತಾನೇ ಕಷ್ಟ? ”

ರಂಗಪ್ಪ ಹತ್ತಿರ ಬಂದ. ಕರೀಂಖಾನನಿಗೆ ರೆಪ್ಪೆಹೊಡೆದ ಅವನನ್ನೂ ಸೈಯ್ಯದ್‌ನನ್ನೂ ಕರೆದುಕೊಂಡು ಒಳಕ್ಕೆ ಹೋದ. “ಇಲ್ಲಾ ಸಾಬರೆ, ಈ ಸಲ ಇದೆ ನೋಡ, ನಾವು ಒಂದು ಪಂದು ಮಾಡಿಯೇ ಬಿಡಬೇಕು. ಸೈಯ್ಯದ್‌ ಬಿಜಾಪುರಕ್ಕೆ, ನೀವು ಅಹಮ್ಮದ್‌ ನಗರಕ್ಕೆ ಹೋಗಿ ಬರೋದು ನನಗೆ ಚೆನ್ನಾಗಿ ಗೊತ್ತಿದೆ ಇರಲಿ. ನಿಮ್ಮ ಕಡೆಯವರು ಬಂದು ಹೊಸಪೇಟೆ ಲೂಟಮಾಡಿ ದರೆ. ಬೇಕಾದ್ದು ಸಹಾಯ ಮಾಡುವವರು ಇದ್ದಾರೆ. ಅವರಿಂದ ನಿಮಗೆ ಬೇಕಾದ ಕೆಲಸ ಆದರೆ ನೀವು ಅವರಿಗೆ ಏನು ಮಾಡಿಕೊಡ್ತೀರಿ ?”

“ರಂಗಪ್ಪ, ನಮ್ಮನ್ನೇನು ದಿವಾನ್‌ ಮಾಡಿದ್ದೀರಲ್ಲಾ ! ನಾವು ಬಿಜಾ ಪುರಕ್ಕೆ ಹೋಗೋದೂ ನಿಜ. ಅಹಮದ್‌ನಗರಕ್ಕೆ ಹೋಗೋದೂ ನಿಜ. ಾದರೂ ನಾವು ಇಬ್ಬರೂ ರಾಯರ ಪ್ರಜೆಗಳು. ನಾನು ನಮ್ಮಕ್‌ ಹರಾಂ ಆಗೋಕೆ ಆಗ್ತದಾ ? ಹೇಳಿ.”

“ಬಿಡಿರಿ, ಖಾನ್‌ ಸಾಹೇಬರೆ, ನಿಮ್ಮ ಜನ ಇದೆಯಲ್ಲ ಇನ್ನು ಯಾರೂ ತುರುಕರು ಇಲ್ಲದೆದ್ದರೆ ನಿಮ್ಮಂಥಾ ದೋಸ್ತಿಗಳಿಲ್ಲ. ನಿಮ್ಮ ಜನ ಬಂತೂ ಅಂದ್ರೆ, ಅವರು ಡೆಲ್ಲಿಯಿಂದ ಬರಲಿ, ದೀಪಾಂತರದಿಂದ ಬರಲಿ ಒಂದಾಗಿ ಬಿಡ್ತೀರಿ. ಅದಕ್ಕೇ ನಾನೂ ಕೇಳಿದ್ದು. ನನ್ನೂ ನಿಮ್ಮು ದೋಸ್ತ್‌ ಮಾಡಿ ಕೊಳ್ತೀರಾ? ಎಂತ.”

“ಏನು ಹಂಗಾದರೆ ನೀವೂ ಮುಸಲ್ಮಾನರಾಗುತ್ತೀರಾ ?”

“ಬಿಡಿರಿ ನಾನು ಮುಸಲ್ಲಾನರಾದರೇನು ? ಹಿಂದೂಗಳಾದರೇನು? ಈ ಎಂಜಲತೊಟ್ಟಿ ತೊಳಕೊಂಡು, ಈ ಚಿಲ್ಲರೆಕಾಸು ಎಣಿಸಿಕೊಂಡು ಕೂತಿರೋಕಿಂತ, ಇನ್ನೇನೇ ಕೆಲಸ ಮಾಡಿದರೂ ತಪ್ಪೇನು ? ಹಿಂದೂ ಆದರೆ ಸೋಮಿ ಎಂತ ಅಡ್ಡ ಬೀಳೋದು, ಮುಸಲ್ಮಾನ್‌ ಆದರೆ ಅಲ್ಲಾ ಅಂತ ನಮಾಜು ಮಾಡೋವುದು. ಯಾವುದಾದರೇನು? ಈಗಿನ ಕಾಲದಲ್ಲಿ ಯಾರು ಎತ್ತಲಾಗಿ ಹೋದರೇನು? ನಮ್ಮ ಪಾಡು ನಾವು ನೋಡ್ಕೋಬೇಕರಿ. “

“ನಮಗೆ ಬಿಜಾಪುರದ ಸೇನೇಲಿ ಆಗಲಿ, ಅಹಮ್ಮದ್‌ ನಗರದ ಸೇನೇಲಿ ಆಗಲಿ, ಯಾರೂ ದೋಸ್ತ್‌ ಇಲ್ಲ. ನಿಮಗೆ ಹಾಗೆ ಬೇಕಾದರೆ ಬಿಜಾಪುರಕ್ಕೆ ಹೋದ. ಅಲ್ಲಿ ಯಾರನ್ನಾದರೂ ಜಮಾದಾರ್‌ ಗಿಮಾದಾರ್‌ ನೋಡಿದ. ಸೈನ್ಯಕ್ಕೆ ದಾಖಲಾದ. ಅದಕ್ಕೇನಂತೆ, ನೀವು ಹೇಳಿದಂಗೆ ಸೈನ್ಯ ಇಲ್ಲಿಗೆ ಬಂದರೆ, ಬೇಕಾದ್ದು ಲಾಕ್‌ ಲೇಕ್‌ ಮಾಡಿ ಒಂದು ಪಾಳೆಯಪಟ್ಟು ಹೊಡೆದ, ಪಕ್ಷಕ್ಕೆ ಒಂದು ಸಲಾಂ, ಅಷ್ಟು ನಜರಾಣಿ ಕೊಟ್ಟಿ, ಸುಖನಾಗಿದ್ದ. ಅದಕ್ಕೇನು?”

“ಸಾವಿರ ಹೇಳೀ ಸಾಬರೆ, ನಮ್ಮ ರಾಜ್ಯ ಗರಿಕಟ್ಟಬೇಕು ಅನ್ನೋನಿ ಗಲ್ಲ. ಅಂಥಾ ಜೂರತ್‌ಗಾರನಿಗೆ ನಿಮ್ಮ ರಾಜ್ಯಗಳು. ಬಾಳೇ ಸುಳಿ ದನ ದಿನಕ್ಕೂ ಬೆಳೆಯೋ ಹಂಗೆ ನಿಮ್ಮಲ್ಲಿ ಬೆಳೆದುಬಿಡಬೋದು. “

“ಏನು ರಂಗಪ್ಪಾ ! ನಮ್ಮನ್ನು ಆದ್ಮೀಕೋ ಗುಸ್ಕೋ ದೇಖ್ದಾ ಅನ್ನೋ ಹಂಗೆ ಮಾಡ್ತಿದ್ದೀರಿ ಅಲ್ಲಾ. ನಿಮಗೆ ಬಿಜಾಪುರಕ್ಕೆ ಹೋಗೋದು ಬೇಕಾ ದರೆ ನಮ್ಮನ್ನು ಕೇಳಿ ಹೋಗ್ಬೇಕು? ನಾವು ಸಾಚಾಜನ. ನಮ್ಮನ್ನು ಸತಾಯಿಸಬೇಡಿ.”

ರಂಗಪ್ಪನು ಬಿದ್ದು ಬಿದ್ದು ನಕ್ಕನು “ಲೋ ಕರೀಂಖಾನ್‌, ಯಾರ ಹತ್ತಿರರೋ ಈ ಆಟನೆಲ್ಲಾ! ಇಲ್ನೋಡು ಈ ಕಾಗದಾನಾ?” ಎಂದು ಉರ್ದುವಿನಲ್ಲಿ ಬರೆದ ಒಂದು ಕಾಗದವನ್ನು ಸೊಂಟದಿಂದ ತೆಗೆದು ಮುಂದೆ ಎಸೆದನು. ಅದರಲ್ಲಿ, ಬರೆದಿರುವುದಿಷ್ಟೆ * ಅಲ್ಲಾಹೋ ಅಕ್‌ಬರ್‌. ಸೈಯದ್‌ ಸಾಬಿ, ಕರೀಂರ್ಯಾ, ಇವರನ್ನು ಕೇಳಿ, ಅವರು ಹೇಳಿದ ಹಾಗೆ ನಡೆಯಿರಿ.”

ಆ ಕಾಗದವನ್ನು ನೋಡುತ್ತಲೇ ಇಬ್ಬರೂ ಮುಖ ಮುಖ ನೋಡಿ ಕೊಂಡರು. ಕರೀಂಖಾನನು “ಮುಂದಕ್ಕೆ ?“ಎಂದನು. ರಂಗಪ್ಪನು “ಮುಂದಕ್ಕೇನು ? ಗೋಲ್‌ ಗುಂಬಜ್‌”ಎಂದನು. ಇಬ್ಬರೂ ರಂಗಪ್ಪನನ್ನು ಬಾಚಿ ತಬ್ಬಿಕೊಂಡರು. “ದೋಸ್ತ್‌ ಮಾಫಿ ಕೊಡಬೇಕು. ಈ ಸೈತಾನ್‌ ರಾಜ್ಯದಲ್ಲಿ ಯಾರು ಬದ್ಮಾಷ್‌, ಯಾರು ಸಾಚಾ ಎಂದು ಗೊತ್ತುಮಾಡೋದು ಕಷ್ಟವಾಗಿ ಹೋಗಿದೆ. ಅದಿರಲಿ, ಮುಂದಕ್ಕೆ ಏನು ಮಾಡಬೇಕು ಹೇಳಿ.”

“ನಿಮಗೆ ಧೈರ್ಯ ಇದೆಯೋ ಇಲ್ಲವೋ? ಮಾಡೋಕೆ ? ನಾನು ಹೇಳಿ ಸುಮ್ಮನೆ ಕೆಟ್ಟೋನಾಗಲೇ ?“

“ಇಲ್ಲ ಹೇಳಿ ದೋಸ್ತ್‌.”

ರಂಗಪ್ಪನು ಅತ್ತಕಡೆ ಇತ್ತಕಡೆ ನೋಡಿ ಹೇಳಿದನು. “ಇಲ್ಲಿ ಹೊಸ ಪೇಟೆಯಲ್ಲಿ ರಾಯರ ಸೂಳೆ ರಂಗನಾಯಕಿ ಇದ್ದಾರೆ. ಶುಕ್ರವಾರ ರಾತ್ರಿ ರಾಯರು ಒಂದು ಕುದುರೆಗಾಡಿಯಲ್ಲಿ ಎರಡೇ ಎರಡು ಆಳು ತೆಗೆದುಕೊಂಡು ಬರುತ್ತಾರೆ. ರಂಗಸ್ವಾಮಿಗುಡಿ ಮೂಲೆ ತಿರುಗಿ ಇತ್ತಕಡೆ ಬರುವಾಗ, ನಾವು ಅವರನ್ನು ಹಿಡಿದು ಮುಗಿಸಿಬಿಡೋಣ. ನಿಮ್ಮ ಸೈನ್ಯ ಬಂದು ಮಾಡ ಬೇಕೆಂತಿರೋ ಕೆಲಸ ನಾವೇ ಮೂಡಿಬಿಡೋಣ.”

ಕರೀಂಖಾನನು ಒಂದು ನೂರು ಸುಲ್ತಾನೀ ಚಿನ್ನದ ಲೋಹಗಳನ್ನು ನಡುವಿನಲ್ಲಿದ್ದ ಚೀಲದಿಂದ ತೆಗೆದು ಎಣಿಸಿದನು.

“ಇದು ಇವೊತ್ತಿನ ಖರ್ಚಿಗೆ. ಗೆದ್ದಕ್ಕೆ ನಿಮಗೊಂದು ಸುಬೆಕೊಡಿಸು ತ್ತೇನೆ. ಸಾಕೋ!”

“ಗೆಲ್ಲದಿದ್ದರೆ?

“ನಿಮ್ಮ ತಲೆ ತಗೊತೇನೆ.”

ಇಬ್ಬರೂ ರಂಗಪ್ಪನನ್ನು ತಬ್ಬಿಕೊಂಡರು. “ಎಷ್ಟು ಜನ ಇದ್ದಾರೆ. ನಿಮ್ಮ ಹತ್ತಿರ? “

“ಸದ್ಯದಲ್ಲಿ ನೂರಇಪ್ಪತ್ತು ಜನ ಇದ್ದಾರೆ.”

“ಹಾಗಾದರೆ, ಇದು ಸಾಲದು. ಇನ್ನೂ ಐವತ್ತು ಕಳಿಸುತ್ತೇನೆ. ಸಂಜೆ ಬನ್ನಿ.”

ಇಬ್ಬರೂ ದಾರಿಯಲ್ಲಿ ಹೋಗುತ್ತಾ ಮಾತನಾಡಿಕೊಂಡರು. “ಅಲ್ಲಿ ರಂಗನಾಥಪುರದಲ್ಲಿ ನಿಮ್ಮ ಹತ್ತಿರ ಎಷ್ಟು ಜನ ಇದ್ದಾರೆ?”

“ನಮ್ಮ ಹತ್ತಿರ ನೂರು ಜನ ಇದ್ದಾರೆ. ಅವರಿಗೆ ದಿನಾಲು ಒಂದೊಂದು ರೂಪಾಯಿ ಕೊಡಬೇಕು. ಇವರೆಲ್ಲರಿಗಿಂತ ಆ ಹೆಂಡದಂಗಡಿ ಸಂಗಯ್ಯ ಇದ್ದಾನಲ್ಲ. ಅವನು ರುಸ್ತುಂ. ಇವರನ್ನೆಲ್ಲ ಹಿಡಿದಿಟ್ಟಿರೋನೇ ಅವನು. ಅವರು ಕುಡೀತೀನಿ ಅಂದಷ್ಟು ಹೊಯ್ದು ಹೊಯ್ದು ಅವರನ್ನೆಲ್ಲಾ ರಿಂದಾ ಮಾಡಿಟ್ಟಿದ್ದಾನೆ. ಅವರೆಲ್ಲ ನಮ್ಮ ಸೈನ್ಯ ಬಂತೂ ಅಂದರೆ ಸಾಕು. ಈಗ ಈ ಊರಲ್ಲಿರುವ ಸೈನ್ಯ ಊರು ಬಿಟ್ಟು ಒಂದು ಮೈಲಿ ದೂರ ಹೋಗಲಿ ಸಾಕು. ಲೂಟಿ ಷುರು ಮಾಡುತ್ತಾರೆ.”

“ಹೌದು, ಆದರೆ ಸೈನ್ಯ ಬರೋದೆ ಅನುಮಾನವಾಗಿದೆ.”

“ಏಕೆ ”

“ಇನ್ನೂ ಗೋಲ್ವೊಂಡದ ನವಾಬರು ಒಪ್ಪಲಿಲ್ಲ. ಅವರು ಒಪ್ಪುವ ವರಿಗೆ ಬಿಜಾಪುರದವರೂ ಒಪ್ಪುವುದಿಲ್ಲ.”

“ನಿನ್ನೆ ಒಂದು ಸಂಗತಿ ನಡೆಯಿತು. ಈ ಸೈತಾನ್‌ಕೇಬಚ್ಚೀಸುವರ್‌ ಕೇ ಬಚ್ಚೇ ಹಿಂದೂಗಳು ಏನಂತಾರೆ ಗೊತ್ತೋ ? ಇತ್ತಲಾಗಿ ನಮ್ಮ ರಾಜ್ಯ ರಾಜಮಹೇಂದರ್‌ತನಕ ಇದೆ. ಇತ್ತಕಡೆ ಗೋವಾತನಕ ಇದೆ. ನಿಮ್ಮ ಬಹಮನೀ ಸುಲ್ತಾನರು ಕಮಕ್‌ ಅಂದರೆ, ಈ ಎರಡು ತೋಳು ಸೇರಿಸಿ ಹಿಸಕಿ ಹಾಕಿಬಿಡ್ತೇವೆ ಅಂತಾರಲ್ಲ. ನೋಡಿದಿರಾ?”

“ನೋಡಿ ಕರೀಂಖಾನ್‌, ನೀವು ಹೆದರಬೇಡಿ. ಈ ಹಿಂದೂಗಳಲ್ಲಿ ಇದ್ದಾರಲ್ಲ ಮೇಲಿನ ಜಾತಿ ಕೆಳಗಿನ ಜಾತೀನ ಲೋ “ಹೋಗೋ’ ಶೂದರ್‌ ಅಂತದೆ. ಅದರಿಂದ ಅವರಿಗೆ ಮೇಲಿನ ಜಾತಿ ಮೇಲೆ ಮೊಹಬತ್‌ ಇಲ್ಲ ಏಕೆ? ಅವರಿಗೆ ಇವರ ಮೇಲೆ ಇಜ್ಜತ್‌ ಇಲ್ಲ. ಅದರಿಂದ, ಅವರು ಯಾರೂ ಲಡಾಯ್‌ಗೆ ಬರೋದಿಲ್ಲ. ನಮ್ಮ ಹೆಂಗೆ ಅಲ್ಲಾಹೋ ಅಕ್ಬರ್‌ ಎಂದರೆ ಎಲ್ಲರೂ ಸೇರೋದಿಲ್ಲ! ದೊರೆ ಉಪ್ಪುತಿಂದಿರೋರು ಮಾತ್ರ ಬರತಾರೆ. ಮಿಕ್ಕೋರೆಲ್ಲ ನೋಡತಾನಿಂತಿರ್‌ ತಾರೆ. ಲಡಾಯ್‌ ಆದರೆ ಇವು ನಿಂತಾವೇನು? ಬಕರಾ ಹೊಡೆಯೋಂಗೆ ಹೊಡೆದಾಕಿಬಿಡಬೋದು.?

“ಅದರ ಈ ಜನ ರೇಗಿದರೆ ಮಾತ್ರ ಬಾಳಾ ಹಟಗಾರ ಜಾತಿ, ನೋಡಿದೀರೋ ಇಲ್ಲವೋ ? ಲಡಾಯ್‌ನಲ್ಲಿ ನಮ್ಮೋರ ಸಮ ಸಮ, ರೂಬ್‌ ರೂಬ್‌ ನಿಂತು ಹೇಗೆ ಜಗಳ ಮಾಡತಾರೆ?”

“ಹೌದು. ಆದರೂ ಬಕರಾ ಹಂಗೇನೆ! ಛೂ ಬಿಡೋರು ಒಬ್ಬರು ಇರಬೇಕು… ಯಜಮಾನ್‌ ಹೋದರೆ ಹೋಯಿತು. ಮುಂದಿನ ಲಡಾಯ್‌ ನಲ್ಲಿ ಏನು ಮಾಡ್ತೀವೆ ಗೊತ್ತೆ ? ಎಲ್ಲಾ ಬಿಟ್ಟು ಈ ರಾಯರಿಗೆ ಮೊದಲು ನೋಡಿಕೊಳ್ಳೋದು. ರಾಯರ ತಲೆ ಬಿತ್ತು ಎಂತ ಷುರುನಿಂದಲೇ ಕೂಗೋದು. ರಾಯರ ತಲೆ ಹಂಗೇ ಇರೋ ತಲೇ ಒಂದು ಮಾಡಿಸೋದು. ಅದನ್ನು ಒಂದು ಭರ್ಜಿ ಚುಚ್ಚೋದು. ಆನೆ ಮೇಲೆ ಎತ್ತಿ ಹಿಡಿದು ಬಿಡೋದು. ದೇಖೋ, ಹೆಂಗಾಗತದೆ ಮಾಲು ?”

“ಹೆಂಗಾಗತದೆ?”

“ಆಗೋದೇನು? ಎಲ್ಲರೂ ಹೇಳದೆ ಕೇಳದೆ ಪರಾರಿ ಆಗಿಹೋಗ್ತಾರೆ?

“ಆಹಾ! ಬಹಳ ಒಳ್ಳೆಯ ಯೋಚನೆ, ಮಾಡಿಬಿಡಿ.”

“ಮಾಡಿಬಿಡಿ ? ಮಾಡಲೇಬೇಕು. ಈಗ ಡೆಲ್ಲಿಯಲ್ಲಿ ನಮ್ಮ ರಾಜ್ಯ ಬಂದದೆ, ಅದು ಬೆಳೆದು ಆ ಗಂಗಾ ಯಮುನಾ ಕಣಿವೆಯನ್ನೆಲ್ಲ ಹಿಡೀತದೆ. ಇಲ್ಲಿ ಪಶ್ಚಿಮದಲ್ಲಿ ಸಿಂಧೂ ನದಿ ಕೊನೆಯಲ್ಲಿ ಇರುವ ರಾಜ್ಯ ಮೇಲೆ ಹತ್ತಿ ಹೋಗುತ್ತದೆ. ಈಗ ಇಲ್ಲಿ ಕೃಷ್ಣಾ ಗೋದಾವರೀ ತೀರದಲ್ಲಿರುವ ರಾಜ್ಯ ಬೆಳೆದು ತಪತೀ ನರ್ಮದಾ ದಾಟ ಪರ್ವತದವರೆಗೂ ಹೋಗುತ್ತದೆ. ಅಲ್ಲೆಲ್ಲಾ ಏನೂ ಅಡ್ಡ ಇಲ್ಲ. ತಗ ದಕ್ಷಿಣದಲ್ಲಿ ಈ ವಿಜಯನಗರ ಗೆದ್ದುಬಿಟ್ಟರೆ ಸಮುದ್ರದ ತಂಕ ನಮ್ಮ ರಾಜ್ಯ ಸಲೀಸಾಗಿ ಹೋಗುತ್ತದೆ. ಅದರಿಂದ ಇದನ್ನು ಮಾಡಿಯೇಬಿಡಬೇಕು. ಅಮೇಲೆ ಎಲ್ಲಾ ಮುಸಲ್ಮಾನ್‌ ರಾಜ್ಯವೇ ಆಗಿಹೋಗುತ್ತದೆ.”

“ಆಗ ನವಾಬ್‌ನವಾಬ್‌ರು, ಸುಲ್ತಾನ್‌ಸುಲ್ತಾನ್‌ರು ಜಗಳ ಮಾಡೋ ದಿಲ್ಲವೆ??

“ಆಗ ಆಗುವ ಲಡಾಯ್‌’ ಶತ್ರುಗಳ ಲಡಾಯ್‌ ಅಲ್ಲ ಭಾಯ್‌ ಭಾಯ್‌ ಜಗಳ. ಮನುಷ್ಯ ಇರೋತನಕ ಈ ಜಗಳ ಬಿಡೋದೆ ಇಲ್ಲ. ಖಲೀಫ್‌ ಬಲೀಫ್‌ರಿಗೇ ಜಗಳ ಆಗಿಹೋಯಿತು. ಆದರೂ ಆದು ಪರವಾ ಇಲ್ಲ. ಅತ್ತಾಕಡೆಯಿಂದ ನೀರು ಬರುತ್ತದೆ; ಇತ್ತಾಕಡೆಯಿಂದ ನೀರು ಬರುತ್ತದೆ; ಎರಡೂ ಸೇರಿ ಲಡಾಯ್‌ ಮಾಡ್ತಾ ಮಾಡ್ತಾ ಸೇರಿ ಮುಂದೆ ಹೋಗುತ್ತವೆ. ಹಾಗೆ ನಮ್ಮ ನಮ್ಮ ಜಗಳ. ಇಗೋ, ಕರೀಂರ್ನಾ ಸಾಹೇಬ್‌. ಈ ರಾತ್ರಿ ಯೆಲ್ಲ ಎಚ್ಚರವಾಗಿರಿ. ಏನೇನಾಗ್ತದೆ ನೋಡೋಣ. ರಂಗಪ್ಪ ಇವೊತ್ತು ಈ ಕೆಲಸ ಗೆದ್ದು ಬಿಟ್ಟರೆ. ಯುದ್ದ ನಿಂತೇಹೋಯಿತು. ಈ ವಿಜಯನಗರ ಎಲಾ ಸೂರೆ ಮಾಡಿ ಪುರಿ ತಿಂದಂಗೆ ತಿಂದುಬಿಡೋಣ. ಅಂತೂ ಈ ಷಹರ್‍‌ ನಿಲೋದಿಲ್ಲ. ನಮ್ಮ ಬಾಜೀ ಸಾಹೇಬರು ಶಾಸ್ತ್ರ ನೋಡಿ ಹೇಳಿದಾರೆ. ಈ ರಾಮರಾಯ ಇದಾನಲ್ಲ ಇನನೇ ಕೊನೆಯ ಬಾದ್‌ ಷಾ.”

ಇಬ್ಬರೂ ಹೀಗೇ ಇನ್ನೂ ಅಷ್ಟು ಹೊತು ಮಾತನಾಡುತ್ತಿದ್ದು ಹೊರಟುಹೋದರು.

ಸುಮಾರು ರಾತ್ರಿಯಾಗಿ ಒಂದು ಝಾವ ಆಗಿರಬಹುದು. ಹೊಸಪೇಟೆ ಕಡೆಗೆ ಒಂದು ಕುದುರೆ ಸಾರೋಟ್‌ ಓಡುತ್ತಿದೆ. ರಂಗನಾಥನ ದೇವಸ್ಥಾನ ಕಳೆದು ಮೂಲೆ ತಿರುಗಿತೋ ಇಲ್ಲವೋ, ಯಾರೋ ಒಬ್ಬನು ಗಾಡಿ ಹೊಡೆಯು ಸವನನ್ನು ನಿಲ್ಲಿಸೋ ಎಂದು ಅಡ್ಡ ಬಂದನು.

ಅವನಿಗೆ ಹಾಗೆ ಬೀದಿಯವರಿಂದ ಆಡಿಸಿಕೊಂಡು ಅಭ್ಯಾಸವಿಲ್ಲ. ಕುದುರೆಯ ಚಾಟಿ ಅವನ ಮೇಲೆ ಇಳಿಯಿತು. ಅವನು ವಾಚಾಮಗೋಚರ ವಾಗಿ ಬಯ್ಯಲಾರಂಭಿಸಿದನು. ಅದನ್ನು ಕೇಳಿ ಇನ್ನು ಕೆಲವರು ಕೀಳು ಜನರು ಎಲ್ಲಿಂದಲೋ ಬಂದರು. ಎಲ್ಲರೂ ಸಾಯುಧರಾಗಿದ್ದಾರೆ. ಹೊಡೆದು ಹಾಕುತ್ತೇನೆ ಎಂದು ಆ ಮೊದಲನೆಯವನು ಹಾರಾಡುತ್ತಿದ್ದಾನೆ.

ಈ ಗದ್ದಲವನ್ನು ಕೇಳಿ ಗಾಡಿಯಲ್ಲಿದ್ದವನು ಇಳಿದು ಬಂದನು. ಅವನು ಇಳಿಯುತ್ತಿದ್ದ ಹಾಗೆಯೇ ಹಿಂದಿದ್ದವನು ಒಬ್ಬನು ಮುಂದೆ ಬಂದು, ಆ ಬಯ್ಯು ತ್ತಿದ್ದವನನ್ನು ತಡೆದು ಏನೋ ಗದ್ದಲವನ್ನು ನಿಲ್ಲಿಸುವವನಂತೆ ಅಡ್ಡ ಬಂದು, ಗಾಡಿಯಿಂದ ಇಳಿದವನ ಹತ್ತಿರ ಬಂದು ಬುದ್ಧಿ, ಕುಡಿದಿದ್ದಾನೆ. ಅವನ ಕೈಯಯಲ್ಲೇನು ? ತಾವು ಹೋಗಿ” ಎಂದನು.

ಗಾಡಿಯಿಂದ ಇಳಿದವನು ಗೋಪಾಲರಾಯ. ಆ ದಿನ ಹೊಸಪೇಟೆ ಯಲ್ಲಿ ನಾಟಕ. ಅಲ್ಲಿಗೆ ಹೋಗಬೇಕೆಂದು ಹೊರಟದ್ದಾನೆ. ಹೊತ್ತಾಗಿದೆ. ಅಲ್ಲಿ ನಿಲ್ಲುವಂತಿಲ್ಲ. ಹಾಗೆಂದು ಬಿಟ್ಟುಹೋಗುವಂತೆಯೂ ಇಲ್ಲ. ಯಾವೊತ್ತೂ, ಹೀಗಾಗಿರಲಿಲ್ಲ. ಕುಡಿದವನು ಅಡ್ಡ ಹಾಕಿದನೆಂದು ಹಗುರವಾಗಿ ಗಣಿಸುವಷ್ಟು ಸಣ್ಣ ವಿಷಯವಾಗಿ ತೋರಲಿಲ್ಲ.. “ಯಾವದೋ ಕಾಣದ ಕೈ ತುಂಟಿತನನನ್ನಿಲ್ಲಿ ಆರಂಭಿಸಿರಬೇಕು. ಇದನ್ನು ಇಲ್ಲಿಗೇ ಬಿಡಬಾರದು” ಎಂದು ಮನಸ್ಸಿನಲ್ಲಿ ಗೊತ್ತುಮಾಡಿಕೊಂಡು, ಅಲ್ಲಿ ನಿಂತಿದ್ದವ ರೆನ್ನೆಲ್ಲ ನಗುನಗುತ್ತ ಮಾತನಾಡಿಸಿದನು.

“ಆಯ್ಯೋ ಪಾಪ, ನಿಮಗೆಲ್ಲ ತೊಂದರೆಯಾಯಿತು. ನೀವೆಲ್ಲ ಬರದಿದ್ದರೆ ಇಲ್ಲಿ ಏನೇನು ರಾದ್ಧಾಂತವಾಗುತ್ತಿತ್ತೋ ?”

ಮೊದಲು ಮಾತನಾಡಿದವನೇ ಮಾತನಾಡಿದನು: “ಉಂಟಾ ಬುದ್ಧಿ ? ಇವನು ಯಾವನೋ ಕುಡಿದು ಬಂದು ತಮ್ಮನ್ನು ಅಡ್ಡ ಹಾಕಿ ರಂಪ ಮಾಡು ತ್ತಿದ್ದರೆ‌, ನಾವು ನೋಡಿಕೊಂಡಿರಬೋದಾ ? ತಾನು ದೊಡ್ಡ ಮನುಷ್ಯರು. ನಮ್ಮ ಊರು ಅಂದರೆ ಅಷ್ಟು ಅನಾಯಕವಾಗೋಯ್ತಾ ?”

ಗೋಪಾಲರಾಯನ ಅನುಮಾನ ಇನ್ನೂ ಬಲಿಯಿತು. ತನ್ನ ಭಾವವನ್ನು ತಿಳಿಯಗೊಡಿಸದೆ, “ನೀವೆಲ್ಲ ಇಲ್ಲಿಯವರೇನೇನು ? ಎಲ್ಲಿದ್ದೀರಿ?” ಎಂದನು

ಮತ್ತೆ ಆತನೇ ಉತ್ತರಕೊಟ್ಟನು. “ಇಲ್ಲ ಬುದ್ಧಿ , ಇವೊತ್ತು ಶುಕ್ರವಾರ ವಲ್ಲರಾ 1 ಅದಕ್ಕೆ ದೇವರ ಪೂಜೆಗೆ ಹೋಗಿದ್ದು ಬರತಾಇದ್ದೋ ? ಅಷ್ಟರಲ್ಲೇ ಇವನು ಕೂಗಾಯಿತಾಇದ್ದದ್ದು ಕೇಳಿಸಿ ಓಡಿಬಂದೋ. ಅಷ್ಟೇ !“

ಗೋಪಾಲರಾಯನು ಅವರಿಂದ ತನಗೇನೋ ಮಹೋಪಕಾರವಾದ ಹಾಗೆ ಹೊಗಳಿ, ಅವರಿಗೆ ಒಂದೆರಡು ರೂಪಾಯಿ ಕೊಡುವ ನೆವದಿಂದ ಹತ್ತಿರಕ್ಕೆ ಬಂದು ಅವರ ಮುಖಗಳನ್ನು ನೋಡಿದನು. ಆತನ ಅನುಮಾನಕ್ಕೆ ಅವರ ಮುಖದಲ್ಲಿ ಏನೋ ಬೇಕಾದಷ್ಟು ಆಧಾರವಿದ್ದಂತೆ ಕಂಡಿತು. ಅವರನ್ನು ಇನ್ನಷ್ಟು ಮಾತನಾಡಿಸಬೇಕು ಎನ್ನಿಸಿ, “ಅಯ್ಯಾ, ನೀವೆಲ್ಲ ಒಂದೇ ಗುಂಪೋ? ನಿಮ್ಮಲ್ಲಿ ಯಾರ ಕೈಗೆ ಕೊಡಲಿ? ಇಗೋ ಎರಡು ರೂಪಾಯಿ ಇದೆ. ತಗೊಳ್ಳಿ ನೀವೆಲ್ಲ ದಾರಿಯುದ್ದಕ್ಕೂ ಬಾಯಿತುಂಬಾ ಅಡಕೆಲೆ, ಹೊಗೆಸೊಪ್ಪು ಹಾಕಿ ಕೊಂಡು ಹೋಗಿ. ಅವನಿಗೂ ಏನಾದರೂ ಕೊಡಿ. ಪಾಪ, ಬುದ್ಧಿಯಿಲ್ಲ. “ ಎಂದನು.

ಮತ್ತೆ ಗುಂಪಿನಪನೊಬ್ಬನು, “ಈ ಅಪ್ಪನೋರಕಡೆ ಕೊಡಿ. ಅವನಿಗೂ ಅಷ್ಟು ಕೊಡುತ್ತೇವೆ”ಎಂದನು.

ರಾಯನು ಕೇಳಿದನು “ಏನಯ್ಯಾ ? ನನ್ನ ಮುಖನೋಡಿ, ನನ್ನ ಮಾತು ಕೇಳಿಯೂ ನಾನು ಯಾರು ಎನ್ನುವುದು ಗೊತ್ತಾಗಲಿಲ್ಲವೆ?”

“ಇಲ್ಲಾ ಬುದ್ಧಿ. ನಾವು ಬಡವರು. ನಾವು ತಮ್ಮನ್ನು ಎಲ್ಲಿ

ನೋಡಿದ್ದೇವು??

“ನಾಟಕದ ಗೋಪಾಲರಾಯನ ಹೆಸರಾದರೂ ಕೇಳಿದ್ದೀರೋ ?

ತಾವೇನಾ ಬುದ್ಧಿ ಅವರು? “

“ಹೌದು. ಬರುವಹಾಗಿದ್ದರೆ ಬನ್ನಿ. ಇವೊತ್ತು ನಮ್ಮ ನಾಟಕ ಇದೆ. ನೋಡುವಿರಂತೆ. ?

ಮೊದಲು ಮಾತಾಡಿದವನು ಹೇಳಿದನು. “ಇವೊತ್ತು ನಮಗೇನೋ ಕೆಲಸ ಅದೆ ಬುದ್ಧಿ. ಇವೊತ್ತು ಬೇಡಿ. ಇನ್ನೊಂದು ದಿನ ಬರುತೇವಿ. ?

ರಾಯನು ತನ್ಮೊಳಗೇ ಯೋಚಿಸಿಕೊಳ್ಳುತ್ತಾ “ನೀವು ಬೇಕಾದ ದಿನ ಬನ್ನಿ. ಬಂದು ಬಾಗಿಲಲ್ಲಿ ಇರುವವರ ಹತ್ತಿರ ಯಜಮಾನನನ್ನು ಕಾಣಬೇಕು ಎಂದು ಹೇಳಿ. ನಾನು ಹೇಳಿರುತ್ತೇನೆ. ನಾನು ಬರಲೇ?“

“ಹುಂ. ಹೋಗಬುಟ್ಟು ಬನ್ನಿ. ನಿಮ್ಮ ಪಾದ. ‘

ಗೋಪಾಲರಾಯನು ಒಂದೆ ಗಳಿಗೆಯೊಳಗೆ ನಾಟಕಮಂದಿರದ ಹತ್ತಿರ ಬಂದನು. ಬಂಡವನೇ ನಗರ ರಕ್ಷಕನನ್ನು ಕರೆಸಿ, ದೇವರಗುಡಿಯ ಹತ್ತಿರ ಆದುದನ್ನು ತಿಳಿಸಿ, ಅಲ್ಲಿ ತನಗೆ ಬಂದ ಅನುಮಾನವನನ್ನು ಹೇಳಿ, ಅಲ್ಲಿನವರನ್ನು ಹಿಡಿದು ಹಾಕಬೇಕು ಎಂದನು.

“ಒಂದು ವೇಳೆ ಆ ಬಂದವರು ಹೇಳುವಹಾಗೆ ಅದೆಲ್ಲ ಒಬ್ಬ ಕುಡುಕನ ಅಧಿಕ ಪ್ರಸಂಗವಾಗಿದ್ದರೆ ?“

“ಅವರೆಲ್ಲರೂ ಒಂದೇಗುಂಪು ಎನ್ನುವುದರಲ್ಲಿ ಸಂದೇಹವಿಲ್ಲ. ಏನಾದ ರಾಗಲಿ. ನೀವು ಮನಸ್ಸು ಮಾಡಿದರೆ ನಾನೊಂದು ಆಟಕಟ್ಟುತ್ತೇನೆ. “

“ನೀವು ಏನು ಮಾಡಿದರೂ ನಾನು ನಿಮ್ಮ ಹಿಂದೆ.“

ಗೋಪಾಲರಾಯನು ಅವನ ಕಿವಿಯಲ್ಲಿ ಏನೋ ಹೇಳಿದನು. ಅವನು ಒಪ್ಪಿದನು. ಇನ್ನೊಂಡು ಗಳಿಗೆಯಲ್ಲಿ ನಾಟಕದ ಮಂದಿರದಲ್ಲಿ ಗೋಪಾಲ ರಾಯನಿಗೆ ಜ್ವರ ಬಂದಿದೆ. ಅದರಿಂದ ಆತನ ಪಾತ್ರವನ್ನು ಮತ್ತೊಬ್ಬನು ಅಭಿನಯಿಸುವುದಾಗಿ ಸುದ್ದಿ ಹಬ್ಬಿತು. ಮತ್ತೊಂದು ಗಳಿಗೆಯೊಳಗಾಗಿ, ಸಾಮಾನ್ಯವಾದ ಉಡುಪುಗಳನ್ನು ಉಟ್ಟು, ಸಾಮಾನ್ಯವಾದ ಒಡವೆಗಳನ್ನು ಇಟ್ಟುಕೊಂಡಿರುವ ಅಂದಗಾತಿಯೊಬ್ಬಳು ರಂಗಮಂಟಪದ ಮಗ್ಗುಲ್ಲಿರುವ ನೇಪಥ್ಯಶಾಲೆಯಿಂದ ಒಬ್ಬ ಗೆಣೆಯನೊಡನೆ ಹೊರಬಿದ್ದಳು. ಇಬ್ಬರನ್ನೂ ರಾಯನ ಗಾಡಿಯು ಕರೆಮಕೊಂಡು ಹೋಗಿ ಅಷ್ಟು ದೂರ ಬಿಟ್ಟುಬಂತು.

ಕುಡಿದವನ ಗೆಳೆಯರು ಇನ್ನೂ ಅಲ್ಲಿಯೇ ಇದ್ದರು. ರಾಯನ ನಿರೀಕ್ಷೆ ಯಂತೆ ಅವರು ಆತನು ಕೊಟ್ಟಿದ್ದ ಎರಡು ರೂಪಾಯಿಗೆ ಏನೇನೋ ತಿಂಡಿಗಿಂಡಿ ಅಡಕೆಲೆ ತಂದು ಆಲ್ಲಿಟ್ಟುಕೊಂಡಿದ್ದಾರೆ.

ಹೆಣ್ಣೂ ಅವಳಗೆಣೆಯ ಇಬ್ಬರೂ ರಂಗುಪದಗಳನ್ನು ಹಾಡಿಕೊಂಡು ಅಲ್ಲಿಗೆ ಬಂದರು. ಹೆಣ್ಣು ಬಹಳ ಬಜಾರಿಯಿದ್ದ ಹಾಗಿತ್ತು. ಆವಳು ಸುಳಿದ ಕಡೆಯೆಲ್ಲಾ, ಆ ಗಾಳಿಗೆ ಮತ್ತುಹಿಡಿಯುವಷ್ಟು ಮದ್ಯದವಾಸನೆ. ಅದರ ಜೊತೆಗೆ ಅವಳು ಮುಡಿದಿರುನ ಜಾಜಿಯಹೂವಿನ ಪರಿಮಳ. ಅದರ ಸಂಗಡವೇ ಅವಳು ಹಚ್ಚಿಕೊಂಡಿರುವ ಹಸಿಯ ಗಂಧದ ಸುಗಂಧ. ಅವಳ ಜೊತೆಯಲ್ಲಿರುವ ಗೆಣೆಯನಕೈಯಲ್ಲಿ ಒಂದು ಚೀಲ. ಅದರಲ್ಲಿ ಒಳ್ಳೆ ಒಳ್ಳೆಯ ತಿಂಡಿಗಳು.

ಇವರೆಲ್ಲ ತಿಂಡಿ ತಿನ್ನುತ್ತ ಕುಳಿತಿರುವುದನ್ನು ನೋಡಿ ಅವಳು ತಾನು ನಿಂತಿರುವ ಕಡೆಯಿಂದಲೇ ಒಳ್ಳೆಯ ದಿಮಾಕಿನಿಂದ ಕೇಳಿದಳು: “ಯಾರೋ ಅವ ಅಲ್ಲಿ ಕೂತವ. ?

ಇವರಿಗೆ ಅವರು ಕೇಳಿದುದು ಪ್ರಿಯನಾಗಲಿಲ್ಲ. “ನೀನಾರು ಬಜಾರಿ ನಮ್ಮನ್ನು ಕೇಳೋಳು?”

“ಯಾರ ಅವ ನನ್ನ ಬಜಾರಿ ಅನ್ನೋವ?“

ಅವಳೇ ಹತ್ತಿರ ಬಂದಳು ಕೈಯಲ್ಲಿದ್ದ ಮಷಾಲ್ಟಿ ಅವನ ಮುಖ ಸುಡುವಷ್ಟು ಹತ್ತಿರಕ್ಕೆ ತೆಗೆದುಕೊಂಡು ಹೋಗಿ “ಯಾರಾ ನೀನು? ಕಿಷ್ಣೆಸ್ಸನ ಮಗ ಸೊಣ್ಣಪ್ಪನೇನೋ ?” ಎಂದು ಮುಖದ ಹತ್ತಿರ ಹಿಡಿದು ನೋಡಿದಳು.

ಅವನು ಆ ಮಷಾಲ್ಟಿಯನ್ನು ಅತ್ತ ನೂಕಿ, “ಏ ನೋಡು ಮತ್ತೆ 1? ಎಂದನು.

“ಏನಾ ನೋಡೋಡು. ಹೊಟ್ಟೆಗಿಲ್ಲದ ಬಡ್ಡಿ ಮಕ್ಕಳು ಕುಂತಿದ್ದೀರಿ. ಕೊಡೋ, ಸೂಳೆ ಮಕ್ಕಳು ತಿನ್ಲಿ. ಏನರೋ ಸಬ್ಜಾ ಒಡೆಬೇಕೇನ್ರೋ ? ನೋಡಿ ಮಾಂಸ ಗೀಂಸ ಎಲ್ಲ ಹಾಕದೆ. ನಿಮ್ಮ ಹುಟ್ಟಲ್ಲೇ ತಿಂದಿಲ್ಲಾ ಅಂಥಾ ವಡೆ? ತಿಂದರೆ ತಲೆ ತಿರುಗತವೆ. ಬೊಡ್ಡೀಮಕ್ಕಳಾ. ತಿನ್ನೋ ಹಂಗಿದ್ದರೆ ಹೇಳಿ. “

ಅವರೆಲ್ಲ ಒಬ್ಬನ ಕಡೆ ತಿರುಗಿದರು. ಅವನು, “ನಾವು ಏನೋ ಏನೋ ಕೆಲಸ ಇಟ್ಟು ಕೊಂಡಿದ್ದೀವಿ. ನಾವು ಸಬ್ಜಾ ಒಡೆ ತಿನ್ನೋಕಿಲ್ಲ” ಎಂದನು.

ಆ ಹೆಣ್ಣು ಗದರಿದಳು. “ಎಂಥಾ ಗಂಡುಸೋ ನೀನು ? ಮೀಸೆ ಹೊತ್ತ ವನೆ. ನಾಚಿಕೆಯಿಲ್ಲದೆ ಒಡೆ ಕೊಟ್ಟರೆ ಬೇಡಾ ಅಂತಾನೆ. ತಿನ್ಲೆ ಮುಂಡೆ ಹೆತ್ತದ್ದೇ!” ಎಂದು ಅವನ ಬಾಯಿಗಿಟ್ಟಳು. ಅವನೂ ಬೇಡ ನೋಡು ಬೇಡ ನೋಡು ಅಂತಲೇ ಅದನ್ನು ಮುಗಿಸಿದನು. ಅನನ ಗುಂಪಿನವರು ಒಂದು ಚೀಲದ ಒಡೆಯನ್ನೂ ಮುಗಿಸಿಬಿಟ್ಟರು… ರಾಯನ ಗಾಡಿ ಬಂದಾಗ ಅಡ್ಡ ಕಟ್ಟಿದವನು ಇನ್ನೂ ಎರಡು ಒಡೆ ಹೆಚ್ಚಾಗಿ ತಿಂದನು. ಅವನು ಆಗ ಕುಡಿದವನಂತೆ ಆಡಿದ್ದರೂ ಈಗ ಸರಿಯಾಗಿದ್ದನು. ಹೆಣ್ಣು ಕೂತುಬಿಟ್ಟಳು. ಗೆಣೆಯನು ಹೊತ್ತಾಗೋಕಿಲ್ವಾ ಎಂದನು. ಅವಳು ಅವನ ಸೋಟೆ ಸೋಟೆ ತಿವಿದು “ಇಂಥಾ ಮೀಸೆ ರಾವುತ ಸಿಕ್ಕವ್ನೆ. ಬಿಟ್ಟು ಹೋಗೂದಾ? ಚೆನ್ನಾಯಿತು. ಬಿಡು. ಮೂದೇವಿ. ನೀ ಬೇಕಾದರೆ ಹೋಗು. ನಾ ಬರೋಕಿಲ್ಲ. ಏನ್ಲಾ, ಇವ ಹೊರಟು ಹೋದರೆ ನೀನೂ ನನ್ನ ಜೊತೆಯಲ್ಲಿ ಮನೆ ತನಕ ಬರೋಕಿಲ್ವಾ ?” ಎಂದಳು.

ಅವನಿಗೆ ಕಷ್ಟಕ್ಕಿಟ್ಟುಕೊಂಡಿತು. ಅವನ ಮುಖದಲ್ಲಿಯೂ ಆ ಕಷ್ಟ ಕಾಣಿಸಿತು. ಏನೋ ಭಾರಿ ಕೆಲಸ ಇದ್ದವನು ವಹಿಸಿರುವ ಹೊಣೆಗಾರಿಕೆ ಅವನ ಮುಖದಲ್ಲಿ ಇದೆ. ಸಬ್ಜಾಒಡೆ ತನ್ನ ಕೆಲಸವನ್ನು ಮಾಡಿರುವುದಾಗಿ ಅವನ ಕಣ್ಣಿಗೆ ಹಿಡಿಯುತ್ತಿರುವ ಕೆಂಪು ಹೇಳುತ್ತಿದೆ. ಆ ಎರಡು ಒಡೆ ತಿಂದಿದ್ದವನಂತೂ ತಲೆ ತೂಗುತ್ತಿದ್ದಾನೆ. ಇನ್ನೊಂದು ಗಳಿಗೆಯೊಳಗಾಗಿ ಅವನು ಬಾಯಿಬಿಟ್ಟನು. “ಲೇ ಹೋಗಲೇ ! ನಾವೊಂದು ಭಾರಿ ಬೇಟೆ ಕಾದು ಕುಳಿತೀವಿ. ಇದೊಂದು ಸನಿ ಬಂದಂಗೆ ಬಂದನಳೆ. ನೀನು ಇಲ್ಲಿರಬೇಡ. ಮೊದಲು ಕಾಲಿಗೆ ಬುದ್ಧಿ ಹೇಳು. ಇಲ್ಲದಿದ್ದರೆ ನೋಡು, ಕುಂಬಳಕಾಯಿ ಎತ್ತಿಟ್ಟಂಗೆ ನಿನ್ನ ಎತ್ತಿ ಕುಕ್ಕಿಬಿಡುತ್ತೇನೆ ನೋಡು.”

“ಅವನು ಯಾವನೋ ಗೆಣೆಯ ನನ್ನಿತ್ತಿ ಕುಕ್ಕೋವ ?“ಎಂದು ಇವನ ಕಡೆ ಬರುವುದಕ್ಕೆ ಎದ್ದಳು. ತಲೆ ತಿರುಗಿತು. ಮೈ ಒಲಿಯಿತು… ಕಾಲು ನಡುಗಿ ಒಬ್ಬನ ಮೇಲೆ ಬಿದ್ದು ಬಿಟ್ಟಳು. ಅವನು ಕವಚದಲ್ಲಿ ಬಚ್ಚಿಟ್ಟು ಕೊಂಡಿದ್ದ ಮಚ್ಚು ಕತ್ತಿಗೆ ಇವಳು ತೊಟ್ಟಿದ್ದ ಬಳೆಗಳು ತಗುಲಿ ಎಲ್ಲವೂ ಪುಡಿ ಪುಡಿಯಾದವು. “ಅವಳ ಸೀರೆಯ ಮದ್ಯದ ಗಂಧ ಅವನಿಗೆ ಹಿಡಿಸಿ, ಸಬ್ಜಾ ಒಡೆ ಆರಂಭಿಸಿದ್ದ ಕಾರ್ಯವನ್ನು ಮುಂದುವರಿಸಿತು.

ಇದುವರೆಗೂ ಕುಳಿತಿದ್ದ ಗೆಣೆಯನು ತನ ಬಳಿಯಿದ್ದ ಬುರುಡೆಯನ್ನು ತೆಗೆದು “ಸರಿ. ಬಿಡು ಬಿದ್ದೋದಳು. ಅವಳ ಕೆಲಸ ಮುಗೀತು. ಇನ್ನು ಬೆಳಗಾಗೋತಂಕ ಅವಳು ಏಳೋ ಹೆಂಗಿಲ್ಲ. ಬನ್ನಿರೋ, ಇದನಾದರೂ ಮುಗಿಸೋಣ” ಎಂದನು.

ಮೊದಲು ಮಾತನಾಡಿದವನು “ಲೇ, ಕೂಡದು. ನಾವು ಬಂದಿರೋ ಕೆಲಸ ಕೆಟ್ಟೋದ್ರೆ ನೋಡಿಕೊಳ್ಳಿ. ನಿಮಗೆಲ್ಲ ಸೊನ್ನೆಯೇ”ಎಂದು ಗದರಿಸಿ ಕೊಂಡನು. ಮಿಕ್ಕವರು “ಏನು ರಂಗಪ್ಪಾ, ಏನೋ ದೇವರು ಬಂದಂಗೆ ಬಂದು ಇವನು ಕರೀತಿದ್ದರೆ, ಬೇಡಾ ಅಂತೀಯಲ್ಲಾ ?”ಎಂದು ಅಂಗಲಾಚಿ ಕೊಂಡರು. ಕೊನೆಗೆ ಆ ಹೊಸಬ “ಹೋಗರೋ, ನಂಗೇ ಸಾಲದು ನಿಮಗೆಲ್ಲಿ ಕೊಡಲಿ?” ಎಂದು ಬುರುಡೆಯನ್ನೆತ್ತಿ ಗಟಗಟನೆ ಎಲ್ಲವನ್ನೂ ಕುಡಿದು ಹಾಡುತ್ತ ಕುಳಿತುಬಿಟ್ಟನು. ಇನ್ನೊಂದು ಗಳಿಗೆಯೊಳಗಾಗಿ ಅನನಿಗೂ ಜ್ಞಾನತಪ್ಪಿತು. ಅವನೂ ಬಿದ್ದು ಹೋದನು.

ಅವರವರೇ ಕುಳಿತು ಮಾತನಾಡಿಕೊಂಡರು. “ನೋಡಿಡೆಯೋ? ನೀನು ಕುಡಿದಿದ್ದರೂ, ಹೀಗೆ ಬಿದ್ದು ಹೋಗುತ್ತಿದ್ದೆ. ಬಂದ ಕೆಲಸ ಕೆಟ್ಟು ಹೋಗುತ್ತಿತ್ತು.”

“ಆಯಿತು. ಇನ್ನೂ ಎಷ್ಟು ಹೊತ್ತಿಗೆ ಸಾರೋಟು ಬರೋದು?”

“ಯಾವಾಗಲೂ ಇಷ್ಟು ಹೊತ್ತಿಗೆ ಬಂದು ಬಿಡಬೇಕು. ಇದೇನೋ ಇವೊತ್ತು ಕೊಂಚಹೊತ್ತಾಗಿದೆ. ಅಷ್ಟೆ!“

“ಆಯಿತು. ಇನ್ನೊಂದು ಸಲ ಹೇಳಬುಡಪ್ಪ. ಮೊದಲಿನಂಗೆ ಆದಾತು. ಈ ಸಲ ನೀನು ಹೇಳೋತನಕ ನಾನು ಅಡ್ಡ ಕಟ್ಟೋಲ್ಲ. ಇನ್ನೂ ಚಾವಟಿ ಏಟು ಚುರು ಚುರು ಅಂತಾ ಅದೆ.”

“ಏನೂ ಇಲ್ಲ ಕಣ್ರೋ. ಈ ಸಲ ಹತ್ತಿರ ಹೋಗೊಃದೇ ಬೇಡ. ಅಲ್ಲಿ ನೋಡು, ಹೆಗ್ಗಣದ ಬಲೆ ತಂದಿದ್ದೀನಿ. ಅದನ್ನ ಅಡ್ಡ ಕಟ್ಟಿ ಬುಡೋದು. ಕುದುರೆ ಕಾಲು ತೊಡರುತದೆ. ಕುದುರಿ ಬಿದ್ದರೆ ಎಲ್ಲರೂ ಕೆಳಕ್ಕೆ ಬೀಳತಾರೆ. ಬಿದ್ದವ್ರ ಕಮಕ್‌ ಕಿಮಕ್‌ ಅನ್ನದೆ ಹೊಡೆದುಹಾಕಿ. ತಲೆತಂದು ನನ್ನ ಕೈಗೆ ಕೊಟ್ಟು ಬಿಡಿ. ನಿಮ್ಮದೇನದೆಯೋ ತಕೊಂಡು ಹೆೊಂಟೋಗಿ.”

“ಬರೋರು ಯಾರು ?“

“ಇನ್ನು ಯಾರು? ಸೂಳೆಮನೆಗೆ ಹೊಗೋ ರಾಯರು.“

“ಗಾಡಿ ಬರುವ ಸದ್ದಾಗತೈತೆ.“

“ಅದು ಹೊಸಪೇಟೆ ಕಡೆಯಿಂದ ಬರುತಿರುವ ಗಾಡಿ. ಆದು ನಮಗೆ ಬೇಕಿಲ್ಲ. ನಮಗೆ ಬೇಕಾಗಿರೋ ಗಾಡಿ ಹೊಸಪೇಟೆಗೆ ಹೋಗೋ ಗಾಡಿ.”

ಗಾಡಿಯು ಬಂತು. ಅಲ್ಲೇ ನಿಂತಿತು. ಒಬ್ಬರೊಬ್ಬರಾಗಿ ಐದು ಜನ ಇಳಿದರು. ನೇರವಾಗಿ ಇವರ ಹತ್ತಿರಕ್ಕೆ ಬಂದರು. “ಕೈ ಮೇಲಕ್ಕೆತ್ತಿ “ ಇಂದು ಒಂದು ಕೂಗು ಕೇಳಿಸಿತು. ಇನರಿನ್ನೂಆ, ಊ, ಎನ್ನುವುದರೊಳ ಗಾಗಿ ಬಂದವರು ಮೇಲೆ ಬಿದ್ದರು. ಇವರೂ ವಶವಾಗಲಿಲ್ಲ. ತಪ್ಪಿಸಿಕೊಳ್ಳು ವುದಕ್ಕೆ ಯತ್ನಮಾಡಿದರು. ಆವೇಶದಲ್ಲಿ ಮಚ್ಚುಗಳಿಂದ ಎರಡು ಎಟೂ ಹೊಡೆದರು. ಆದರೂ ಸಾಧ್ಯವಾಗಲಿಲ್ಲ.

ಕೆಳಗೆ ಬಿದ್ದಿದ್ದ ಹೆಣ್ಣೂ, ಗೆಣೆಯನೂ ಎದ್ದು ನಿಂತಿದ್ದರು. ಇಬ್ಬರ ಕೈಯ್ಯಲ್ತಿಯೂ ಪಟ್ಟಾಕತ್ತಿಗಳಿದ್ದವು. ರಂಗಪ್ಪನು ಓಡಿಹೋಗುವುದಕ್ಕೆ ಯತ್ನಿಸಿದ್ದನು. ಅವನಿಗೆ ಕಾಲಿಗೆ ಏಟು ಬಿದ್ದು ಕತ್ತರಿಸಿ ಹೋಗಿತ್ತು. ಗಾಡಿ ತಡೆದವನಿಗಂತೂ ಒಂದು ಕೈ ಒಂದು ಕಾಲು ಹೋಗಿತ್ತು.

ನಗರ ರಕ್ಷಕರು ಅವರನ್ನೆಲ್ಲಾ ಹೆಡೆಮುರಿ ಕಟ್ಟಿ ಗಾಡಿಯಲ್ಲಿ ತುಂಬಿ ದರು. ಆ ದಳದ ಜೊತೆಯಲ್ಲಿ. ಬಂದಿದ್ದ ಅಧಿಕಾರಿಯು ಮುಂದೆ ಬಂದ್ಕು ಆ ಹೆಣ್ಣನ್ನು ಮಾತನಾಡಿಸಿದನು. “ಏನು ಸಮಾಚಾರ, ಗೊತ್ತಾ ಯಿತೇನು ?”

“ಹೊಸಸೇಟಗೆ ಹೋಗುವ ರಾಯರ ಸವಾರಿಯನ್ನು ಅವರು ಕಾಯ್ದು ಕೊಂಡಿದ್ದುದು.”

“ಹಾ! ಹಾಗೆಯೇ? ಅದೃಷ್ಟ ! ಅದೃಷ್ಟ ! ಗೋಪಾಲ್‌ರಾವ್‌ ! ತಾವು ಇವೊತ್ತು ನಮ್ಮನ್ನೆಲ್ಲ ಕಾಪಾಡಿದಿರಿ. ವಿಜಯನಗರದ ಆಪತ್ತು ಕಳೆಯಿತು ಇರಲಿ. ನೋಡುವಿರಂತೆ. ನಾಳೆ ಬೆಳೆಗಾಗುವುದರೊಳಗಾಗಿ ಈ ದ್ರೋಹಿ ಗಳನ್ನೆಲ್ಲ ಹಿಡಿದುಹಾಕುತ್ತೇನೆ. ನಾನೇ ರಾಯರ ಸನ್ನಿಧಿಗೆ ಹೋಗಿ ತಾವು ಎಂತಹ ಉಪಕಾರ ಮಾಡಿದಿರಿ ಬಂಬುದನ್ನು ಮಹಾಪಾದದಲ್ಲಿ ಬಿನ್ನವಿಸಿ ಬರುತ್ತೇನೆ. ಆಯಿತು ತಾವು ಹೇಗೆ ಹೋಗುತ್ತೀರಿ.”

“ಇನ್ನೆಷ್ಟು ದೂರ ಹೋಗಬೇಕು? ನಾನು ಹೋಗುತ್ತೇವೆ. ತಾವು ತಮ್ಮ ಕೆಲಸ ಮಾಡಿ.”

“ನಾನು ಇಲ್ಲಿ ಇನ್ನೂ ಅಷ್ಟು ಹೂತ ಷ್ಟ ಸವಾರಿ ದಯಮಾಡಿ ಸಿದಮೇಲೆ ಹೋಗುತ್ತೇನೆ. ನಾಳೆ ನೋಡೋಣ. ತಾವು ಈ ಗಾಡಿಯಲ್ಲಿ ಹೋಗಿ. ಹಿಂತಿರುಗಿ ಬರುವವರೆಗೂ ಈ ದ್ರೋಹಿಗಳು ಇಲ್ಲೇ ಬಿದ್ದಿರುವರು”

ಹೆಣ್ಣೂ ಗೆಣೆಯನೂ ಗಾದಿಯಲ್ಲಿ ಹೊಸಪೇಟಗೆ ಹೋದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...