ಗೆಳೆಯ ನಿನ್ನ ಬಾಳಿದು ಶಾಶ್ವತವೇ!
ಬದುಕಿನೊಂದಿಗೆ ಸಾವು ಜನಿಸಿದೆ
ಹೆಜ್ಜೆ ಹೆಜ್ಜೆ ನಿನ್ನ ಹೆಜ್ಜೆಯಾಗಿ
ನಿನ್ನೆಲ್ಲ ಕರ್ಮಗಳು ತಾನು ಗಮನಿಸಿದೆ
ಒಂದೊಂದು ಸೌಖ್ಯದಲ್ಲೂ ಅಪಾಯ
ಅದಕ್ಕಾಗಿ ಮಾಡು ನೀನೊಂದು ಉಪಾಯ
ನಾಳಿನ ಭಾಗ್ಯಕ್ಕೆ ಇಂದೇ ತ್ಯಾಗಿಸು
ದೇವರ ನಾಮ ಜಪವೇ ಅಡಿಪಾಯ
ಕೆಲವೊಂದು ಕ್ಷಣಗಳು ನಿನ್ನವೀಗ
ಆ ಕ್ಷಣಗಳು ಎಚ್ಚರದಿ ವೆಚ್ಚಮಾಡು
ಕಳೆದು ಹೋದವುವೆಲ್ಲ ಮರೆತು
ಸುಗುಣಗಳಿಗೆ ನಿನ್ನಲ್ಲಿ ಅಚ್ಚಮಾಡು
ಜೀವನವೊಂದು ನಿನಗೆ ಅವಕಾಶ
ಇದನ್ನು ನೀನು ಸಮರ್ಥವಾಗಿ ಬಳಸು
ಕೆಟ್ಟ ಗುಣಗಳ ದೂರಿಕಾರಿಸು
ಮಾಣಿಕ್ಯ ವಿಠಲ ಮನವಾಗಿಸು
*****
















