Home / ಕಥೆ / ಕಾದಂಬರಿ / ಅವಳ ಕತೆ – ೬

ಅವಳ ಕತೆ – ೬

ಅಧ್ಯಾಯ ಆರು

ಶಾಂಭವನಾನಂದರು ಪೂಜೆಯನ್ನುಮುಗಿಸಿ ಹೋಮಮಾಡಿ ಇಂದು ಬಹು ಸುಖಿಗಳಾಗಿದಾರೆ. ಪೂರ್ಣಾಹುತಿಯ ಕಾಲದಲ್ಲಿ ದೇವಿಯೇ ಬಂದು ಆಹುತಿಯನ್ನು ಸ್ವೀಕರಿಸಿದಳೆಂದು ಅವರ ಆನಂದಕ್ಕೆ ಪಾರವಿಲ್ಲ. ಭರತಾಚಾರ್ಯರು ವಿನಾ ಇನ್ನು ಯಾರೂ ಅಲ್ಲಿ ಇಲ್ಲ. ಅವರೊಡನೆ ಕೂಡ ಮಾತನಾಡುವುದಕ್ಕೆ ಆನಂದರಿಗೆ ಇಷ್ಟವಿಲ್ಲ. ಹಾಗೆಯೇ ಎದ್ದು ಬಂದು ಕಣ್ಣು ಮುಚ್ಚಿ ಕೊಂಡು ಗೋಡೆ ಒರಗಿಕೊಂಡು ಕುಳಿತಿದ್ದಾರೆ. ಆನಂದದ ಜೊತೆ ಯಲ್ಲಿಯೇ ಇನ್ನೂ ಏನೋ ಒಂದು ಭಾವ ಪ್ರಬಲನಾಗಿ ಅವರನ್ನು ಆಕ್ರಮಿಸಿದೆ.

“ಶಾಮಣ್ಣ, ನನ್ನ ಕೆಲಸ ಅರ್ಧ ಗೆದ್ದಿದೆ. ಈ ದಿನ ಗೋಲ್ಕೊಂಡದ ಸುಲ್ತಾನರು ಶಾಂತಿ ಸಂಧಾನಕ್ಕೆ ಒಪ್ಪಿದ್ದಾರೆ. ಇನ್ನು ನಿನ್ನ ಕೆಲಸವೇ ಉಳಿದಿರುವುದು. ಎಲ್ಲಿ ಬಾ. ಇನ್ನೂ ಹೋಮಕುಂಡವು ಶಾಂತವಾಗಿಲ್ಲ. ಅಷ್ಟರೊಳಗಾಗಿ ಪ್ರಮಾಣಮಾಡು. ವಿಜಯನಗರದ ರಕ್ಷಣೆಗೋಸ್ಟರವಾಗಿ ಏನುಬೇಕಾದರೂ ಮಾಡುತ್ತೇನೆಂದು ಅಗ್ನಿಯನ್ನು ಮುಟ್ಟಿ ಪ್ರಮಾಣಮಾಡು.”

ಭರತಾಚಾರ್ಯರು ಎದ್ದರು. ಏಕೋ ಎದೆ ನಡುಗಿತು. ಮುಂದಕ್ಕೆ ಎರಡು ಹೆಜ್ಜೆ ಇಡುವುದರೊಳಗಾಗಿ ಏಕೋ ಕೈಕಾಲು ನಡುಗಿತು. “ಶಂಭ್ಕೂ ಏಕೋ ನನಗೆ ಕೈಕಾಲು ನಡುಗುತ್ತಿದೆ. ಕಣೋ” ಎಂದರು. ಆಚಾರ್ಯರು. ಯಾವಾಗಲೂ ಯಾವುದಕ್ಕೂ ಹೆದರಿದ್ದಿಲ್ಲ.

ಶಾಂಭವಾನಂದರು ಗೋಡೆ ಒರಗಿ ಕುಳಿತಿದ್ದವರು ಗೋಡೆಬಿಟ್ಟು ಸರಿ. ಯಾಗಿ ಕುಳಿತರು. ಮುಚ್ಚಿದ್ದ ಕಣ್ಣು ತೆಗೆದರು. “ಅಲ್ಲಿರುವ ತೆಂಗಿನಕಾಯಿ ತಾ” ಎಂದರು. ಏನೋ ಮಂತ್ರಿಸಿ, ಆಚಾರ್ಯರಿಗೆ ಇಳಿತೆಗೆದರು; ಅವರಿಗೆ ಥೈರ್ಯ ಬಂತು. ಎದ್ದು ಆಚಮನ ಮಾಡಿ, ಧೈರ್ಯವಾಗಿ ಯಜ್ಞೇಶ್ವರನ ಬಳಿಗೆ ಹೋದರು. ಆನಂದರ ಅಪ್ಪಣೆಯಂತೆ, ಅಲ್ಲಿದ್ದ ಸ್ರುವದಲ್ಲಿ ತುಪ್ಪ ತೆಗೆದು ಕೊಂಡು ಯಜ್ಞೇಶ್ವರನಿಗೆ ಆಹುತಿಯಿತ್ತು “ಈ ಯಜ್ಞೇಶ್ವರನ ಸಾಕ್ಷಿಯಾಗಿ ವಿಜಯನಗರದ ಆಪತ್ತು ಕಳೆಯುವುದಕ್ಕೋಸ್ಕರ” ಏನು ಬೇಕಾದರೂ ಮಾಡುತ್ತೇನೆ”ಎಂದು ಮೂರು ಸಲ ನುಡಿದರು. ಕೊನೆಯ ಸಲ ನುಡಿದು ಆಜ್ಯಾಹುತಿಯನ್ನಿತ್ತಾಗ ಏನಾಯಿತೋ ಏನೋ ಹೋಮಕುಂಡದಿಂದ ತಟ್ಟನೆ ಜ್ವಾಲೆಗಳು ಎದ್ದುವು. ಜ್ವಾಲೆಗಳ ಮಧ್ಯದಲ್ಲಿ ಒಂದು ಕರಿಯಬಟ್ಟೆಯುಟ್ಟ ಕಪ್ಪನೆಯ ಹೆಣ್ಣು ಎದ್ದು ವಿಕಾರವಾಗಿ ನಗುತ್ತ, “ಕೊಡು, ಹಾಗಾದರೆ, ನನಗೆ ಬೇಕಾದ ಬಲಿಯನ್ನು ಕೊಡು” ಎಂದು ವಿಚಿತ್ರವಾಗಿ ಚೀರಿದಳು. ಆಚಾರ್ಯರು ಶ್ರೀಹರಿ ಎಂದು ಜ್ಞಾನತಪ್ಪಿ ಕೆಳಕ್ಕೆ ಬಿದ್ದು ಹೋದರು.

ಆನಂದರು ಕುಳಿತಿದ್ದ ಸ್ಥಳದಿಂದಲೇ ಒಂದು ಹಿಡಿ ಬೂದಿಯನ್ನು ತೆಗೆದು ಕೊಂಡು ಥಟ್ಟನೆ ಹೊಡೆದರು. ಆ ಸ್ತ್ರೀ ರೂಪವು ಕೈನೀಡಿಕೊಂಡು ಬಾಯಿ ತೆರೆದುಕೊಂಡು ಭಯಂಕರವಾದ ಕೋರೆಗಳನ್ನು ತೋರಿಸುತ್ತ, ಹಾಗೆಯೇ ನಿಂತುಬಿಟ್ಟಿತು. ಆ ಬೂದಿಯ ಒಂದು ಭಾಗವು ಆಚಾರ್ಯರ ಮೇಲೆ ಬಿದ್ದು ಅವರಿಗೆ ಎಚ್ಚರವಾಯಿತು. ಆನಂದರು ಗಂಭೀರವಾಗಿ “ಇಕೋ ಇದೇ ವಿಜಯನಗರದ ಮೃತ್ಯು. ಇದಕ್ಕೆ ಬೇಕಾದ ಬಲಿಯನ್ನು ಕೊಟ್ಟು ವಿಜಯನಗರವನ್ನು ಉಳಿಸಿಕೊಳ್ಳಬೇಕು. ನೀನು ಧೈರ್ಯವಾಗಿ ಕೊಡುವೆನೆನ್ನು. ಅದು ಸರಿಯೆಂದು ಹೊರಟುಹೋಗುವುದು. ಹೆದರಬೇಡ. ಅದರಿಂದ ನಿನಗೆ ಏನೂ ಭಯವಿಲ್ಲ. ಥೈರ್ಯವಾಗಿದ್ದಿಯಾ? ಹೆದರಿಕೆಯಿಲ್ಲವಷ್ಟೇ? ಕಟ್ಟು ಬಿಡಲೇ?”ಎಂದು ಕೇಳಿ, ಕೇಳಿ ಆಚಾರ್ಯರು ಹೂಂ ಎಂದ ಮೇಲೆ, ಇನ್ನೊಂದು ಹಿಡಿ ಬೂದಿಯನ್ನು ಊದಿದರು. ಬೂದಿಯನ್ನು ತಿದಿಯಿಟ್ಟು ಊದಿದ ಹಾಗಾಗಿ ಆ ಕೋಣೆಯನ್ನೆಲ್ಲಾ ಆವರಿಸಿತು. ಆ ಬೂದಿಯು ತನ್ನನ್ನೂ ಮುಚ್ಚಲು ಆ ಮೃತ್ಯು ದೇವತೆಯು ಸೌಮ್ಯಳಾಗಿ ಗಂಭೀರವಾಗಿ “ಬಲಿಯನ್ನು ಕೊಡುವೆಯಾ?”ಎಂದು ಮತ್ತೆ ಕೇಳಿದಳು. ಆಚಾರ್ಯರು ನಡುಗುತ್ತಾ “ಕೊಡುವೆನು” ಎಂದು ಇನ್ನೊಂದು ಆಜ್ಯಾಹುತಿಯನ್ನು ಕೊಟ್ಟರು. ದೇವತೆಯು ಕಣ್ಮರೆಯಾಯಿತು.

ಆನಂದರ ಆನಂದವೇ ಆನಂದ. “ಶಾಮಣ್ಣ, ನೀನೂ ನಾನೂ ಈ ರಾಜ್ಯದಲ್ಲಿ ಹುಟ್ಟಿದುದಕ್ಕೆ ಸಾರ್ಥಕವಾಯಿತು. ಈ ರಾಷ್ಟ್ರದ ಋಣವನ್ನು ತೀರಿಸಿದುದಾಯಿತು. ನನಗೆ ಭೂ ಋಣವು ತೀರಿತು. ನಿನಗೆ ಇನ್ನೂ ಇದೆ. ಇನ್ನುಮುಂದೆ ನೀನು. ಮಾಡಬೇಕಾಗಿರುವ ಕಾರ್ಯ ಇಷ್ಟು. ಇಲ್ಲಿ ಇಟ್ಟಿರುವ ಕಲಶದಲ್ಲಿರುವ ಮಂತ್ರೋದಕವನ್ನು ನನ್ನ ತಲೆಯ ಮೇಲೆ ಸುರಿದುಬಿಡು. ಅಲ್ಲಿ ಯಜ್ಞೇಶ್ವರನ ಬಳಿಯಲ್ಲಿರುವ ಹೋಮ ಮಂತ್ರಪೂತವಾದ ಸಮಿತ್ತುಗಳ ಕಂತೆಯನ್ನು ಹೋಮಕುಂಡದಲ್ಲಿ ಹಾಕಿಬಿಡು. ನೀನು ಬಾಗಿಲನ್ನು ಹಾಕ ಕೊಂಡು ಹೊರಟುಹೋಗು. ಇನ್ನು ಮೂರು ದಿನ ಇತ್ತ ಕಡೆ ಬರಬೇಡ.

“ಈ ಕಲಕೋದಕವನ್ನು ನಿನ್ನ ಮೇಲೆ ಸುರಿದರೆ ಏನಾಗುತ್ತದೆ ?”

“ಆಗುವುದೇನು? ಜ್ಞಾನತಪ್ಪಿ ಕೆಳಕ್ಕುರುಳುತ್ತೇನೆ.”

“ಈ ಸಮಿತ್ತುಗಳು ಒಂದು ತಬ್ಬಿನಷ್ಟು ಇವೆ. ಕುಂಡದಲ್ಲಿ ಅಗ್ನಿ ಪ್ರಜ್ವಲಿಸುತ್ತಿದೆ. ಈ ಸಮಿತ್ತುಗಳು ಚೆನ್ನಾಗಿ ತುಪ್ಪದಲ್ಲಿ ನೆನೆದಿವೆ. ಈ ಕಂತೆ ತೆಗೆದು ಹೋಮಕುಂಡದಲ್ಲಿ ಹಾಕಿದರೆ, ಅಗ್ನಿಯು ಪ್ರಜ್ಞಲಿಸುವುದು. ಈ ಗರಿಯ ಗುಡಿಸಲು ಹತ್ತಿಕೊಳ್ಳುವುದು. ನಿನ್ನ ಗತಿ ?“

ಗತಿಯೇನು ? ಎಂದಾದರೊಂದುದಿನ ಬಿದ್ದುಹೋಗಬೇಕಾಗಿರುವ ಈ ಘಟವನ್ನು ಬಲಿಗೊಟ್ಟು ನನ್ನ ರಾಷ್ಟ್ರದ ಋಣವನ್ನು ಕಳೆದು ಸದ್ಧತಿಗೆ ನಡೆಯುವೆನು. ನೀನು ಕಲಶೋದಕವನ್ನು ನನ್ನ ಮೇಲೆ ಸುರಿಯುವುದಕ್ಕೆ ಮುಂಚೆಯೇ ಸಮಾಧಿಯಲ್ಲಿ ಇರುವೆನಾಗಿ ನನಗೆ ತಪ್ಪದೆ ಸಿದ್ದಿ ಯಾಗುವುದು ಇನ್ನು. ಏಳು. ಕಾಲಾತೀತವಾಗಬಾರದು *

“ಕಾಲಾತೀತವಾದರೆ ಏನು ಆಗುತ್ತದೆ ?

“ಕಾಲಾತೀತವಾದರೆ ಈಗ ಮೃತ್ಯುವಿಗೆ ಕೊಟ್ಟರುವ ಮಾತು ತಪ್ಪಿ ಹೋಗುತ್ತದೆ. ಆಗ ಮತ್ತೊಂದು ಸಲ ಬರುತ್ತದೆ. ಆಗ ಎರಡು ಬಲಿ ಕೊಡಬೇಕು.”

“ಈಗ ತಪ್ಪಿಹೋಗಲಿ. ಇನ್ನೊಂದು ಸಲ ಬಂದಾಗ ಎರಡು ಬಲಿ ಕೊಡೋಣ. ನಿನ್ನ ಜೊತೆಯಲ್ಲಿ ನಾನೂ ಬಲಿಯಾಗುತ್ತೇನೆ.”

“ಆಗ ಬಲಿಕೊಡುವವರಾರು ? ?

“ನಾವಿಬ್ಬರೂ ಪಕ್ಕಪಕ್ಕದಲ್ಲಿ ಕುಳಿತುಕೊಳ್ಳೋಣ. ಕಲಶೋದಕ ವನ್ನು ನೀನು ನಗೆ ಹಾಕು; ನಾನು ನಿನಗೆ ಹಾಕುತ್ತೀನೆ. ಇಬ್ಬರೂ ಬಲಿಯಾಗಿ ಹೋಗೋಣ.”

“ಸಮಿತ್ತಿನ ಕಂತೆ ಹೋಮ ಕುಂಡಕ್ಕೆ ಹಾಕುವರಾರು?”

ಆಚಾರ್ಯರಿಗೆ ಕಷ್ಟಕ್ಕೆ ಬಂತು. ಕೊಳೆ ಕಣ್ಣಲ್ಲಿ ನೀರಿಟ್ಟುಕೊಂಡು “ಶಂಭು, ನಿನ್ನನ್ನು ಕಂಡು ನಲವತ್ತು ವರ್ಷವಾಗಿತ್ತು. ಈಗ ನೋಡಿದೆ. ಹಾಗೆ ನೋಡಿದುದು ನೀನು ಬದುಕಿರುವಾಗಲೇ ನಿನ್ನನ್ನು ಬೆಂಕಿಗೆ ಹಾಕುವು ವಕ್ಕೇನು ? ಇದು ನನ್ನಿಂದ ಆಗುವುದಿಲ್ಲ.”

“ಶಾಮಣ್ಣ, ನಿನಗೆ ಮೂರು ದಿನಗಳಿಂದ ಹೇಳಿದೆ. ನೀನು ಆಗಲಿ ಎಂದ ಮೇಲೆ ನಾನು ಈ ಕೆಲಸಕ್ಕೆ ಕೈಯಿಟ್ಟೆ.”

“ಆದರೆ ನೀನು ನನಗೆ ನಿನ್ನನ್ನು ಬಲಿಕೊಡಬೇಕೆಂದು ಹೇಳಲಿಲ್ಲ? ?

“ಅದು ಹೇಳಕೂಡದು. ಅದರಿಂದ ಹೇಳಲಿಲ್ಲ. ಆಯಿತು. ಈಗ ನೀನು ಬಲಿಕೊಡದಿದ್ದರೆ ಏನಾಗುವುದು ಬಲ್ಲೆಯಾ?”

“ಆಗಲೇ ಹೇಳಿದ್ದೀಯಲ್ಲ! ಎರಡು ಬಲಿ. ನಾವಿಬ್ಬರೂ ಯಾವಾಗ ಸಿದ್ಧವಾಗಬೇಕು ಹೇಳು.”

“ಶಾಮಣ್ಣ, ನನ್ನ್ನ ಮಾತು ಕೇಳು. ಏಳು. ವಿದ್ಯಾರಣ್ಯರು ಕಟ್ಟಿದ ವಿಜಯನಗರ, ವಿದ್ಯಾನಗರ, ಶತ್ರುಗಳ ಪಾಲಾಗಿ, ಮನೆ ಮನೆಯೂ ಬೆಂಕಿಯ ಪಾಲಾಗಬೇಕೇ? ಮಹಾಲಕ್ಷ್ಮಿಯು ಓಲಾಡುತ್ತಿರುವ ಈ ನಗರ ಹಿಂದೂ ಸಂಸ್ಕೃತಿಯನ್ನು ಪುನರುದ್ಧಾರ ಮಾಡಿದ ಈ ಪಟ್ಟಣ ತುರುಕರು ಉತ್ತರವನ್ನೆಲ್ಲಾ ಸ್ವಾಹಾಮಾಡಿ ದಕ್ಷಿಣಕ್ಕೂ ಕಾಲಿಟ್ಟಾಗ ಕೃಷ್ಣೆಯಿಂದ ಕೆಳಕ್ಕೆ ಅವರು ಬರದಂತೆ ತಡೆದ ಈ ವೀರಪುರ, ಶತ್ರುಗಳ ಪಾಲಾಗುವುದು ನಿನಗೆ ಸಮ್ಮತವೆ ? ನಿನ್ನ ನಗರದಲ್ಲಿ ಬದುಕಿ ಬಾಳುತ್ತಿರುವ ಹೆಣ್ಣುಮಕ್ಕಳನ್ನು ಹಗೆಯವರು ಹಿಡಿದು ಮಾನಭಂಗಮಾಡಿ ಅವರು ಅಯ್ಯೋ ಎಂದು ಬಡಿದು ಕೊಳ್ಳುತ್ತಿದ್ದರೆ ಆ ಗೋಳನ್ನು ಕೇಳುವುದು ನಿನಗೆ ಹಿತವೆ? ನಿಮ್ಮಪ್ಪ ತಾತ ಮುತ್ತಾತಂದಿರು ಸುಮಾರು ಮುನ್ನೂರು ವರ್ಷಗಳಿಂದ ಪೂಜೆಮಾಡುತ್ತಿದ್ದ ಈ ಪವಿತ್ರ ದೇವಾಲಯಗಳ ಮೂರ್ತಿಗಳನ್ನು ಅವರು ಹೊಡೆದು ತುಂಡುಮಾಡಿ ಅಪವಿತ್ರಮಾಡುವುದು ನಿನಗೊಪ್ಪಿಗೆಯೇ? ಈ ತುಂಬಿದ ಊರು ನರಿಗಳು ಹಗಲುಹೊತ್ತು ಹೆದರಿಕೆಯಿಲ್ಲದೆ ತಿರುಗುವ ಹಾಳು ಭೂಮಿಯಾದರೆ ನಿನಗೆ ಸಂತೋಷವೇ? ಲಕ್ಷಾಂತರ ಜನಕ್ಕೆ ಅನ್ನೋದಕಗಳನ್ನು ಒದಗಿಸುತ್ತ ಅನ್ನಪೂರ್ಣೆಯಂತೆ ಅನೇಕಾನೇಕರಿಗೆ ಆಶ್ರಯವಾಗಿರುವ ಈ ನಗರಿ, ದಾರಿ ತಪ್ಪಿ ಬಂದ ಕಾಗೆಗೆ ಒಂದು ಅಗಳು ಹಾಕುವರಿಲ್ಲದೆ ಹೋಗುವ ಸ್ಮಶಾನ ವಾಗುವುದು ನಿನಗೆ ಸಮ್ಮತವೆ? ಶಾಮಣ್ಣ, ನನ್ನ ಮಾತು ಕೇಳು. ಉದುರುವ ಹಣ್ಣೆಲೆಯಂತೆ ಎಂದಾದರೊಂದುದಿನ ಬಿದ್ದೇ ಹೋಗಬೇಕಾಗಿರುವ ಈ ದೇಹದ ಮೇಲಿನ ಅಭಿಮಾನದಿಂದ, ರಾಜ್ಯಕ್ಕೆ ಒದಗಿರುವ ವಿಪತ್ತನ್ನು ಲಕ್ಷಿಸದಿರುವುದೆ? ನೀನೇ ಹೇಳು. ನಿನ್ನ ಪರಮ ಪ್ರಿಯನಾದ ಸ್ನೇಹಿತ. ನಾದರೂ ನಾನು ಒಬ್ಬನು. ನನ್ನೊಬ್ಬನನ್ನು ಬಲಿಗೊಟ್ಟು ಕೋಟಿ ಕೋಟಿ ಪ್ರಜೆಗಳಿಗೆ ಆಶ್ರಯವಾಗಿರುವ ಈ ರಾಜ್ಯವನ್ನು ರಕ್ಷಿಸು. ನಾನು ಉತ್ತರದಿಂದ ಹಿಮಾಲಯದಿಂದ ಬಂದಿರುವೆನು. ವಿಂಧ್ಯಪರ್ವತಕ್ಕೆ ಮೇಲಿನ ಪ್ರದೇಶವೆಲ್ಲ ತುರುಕರ ವಶವಾಗಿದೆ. ವಿಂಧ್ಯದಿಂದ ಕೆಳಗೆ ಗೋದಾವರಿಯವರೆಗೆ ಅವರಿಗೆ ಸೇರಿಹೋಗಿದೆ. ಪೂರ್ವದಲ್ಲಿ ಬಂಗಾಂವೆಲ್ಲ ಖಾನರ ಪಾಲಾಗಿದೆ. ಪಶ್ಚಿಮ ದಲ್ಲಿ ರಾಜಪುಟಾನದಲ್ಲಿ ಆ ಬೆಂಗಾಡಷು, ರಾಜಪುತ್ರರ ಕೈಯಲ್ಲಿ ಎಣ್ಣೆ ಸಾಲದ ದೀಪದಂತೆ ಮೊಂಕಾಗುತ್ತಿದೆ. ಇನ್ನು ಈ ಭರತಖಂಡದಲ್ಲೆಲ್ಲಾ ಉಳಿದಿರು ವುದು ಈ ವಿಜಯನಗರ ರಾಜ್ಯವೊಂದು. ಹಿಂದೂಗಳು ಚೆನ್ನಾಗಿ ಬಾಳಿ ಬದುಕಿದ್ದ ಗುರುತಾಗಿ, ಹೊಯ್ಸಳ ಯಾದವ ಕಾಕತೀಯಾದಿ ನೃಪ ಶ್ರೇಷ್ಠರ ಗುರುತಾಗಿ ಉಳಿದಿರುವ ಈ ರಾಜ್ಯವನ್ನು ರಕ್ಷಿಸಲು ನನ್ನನ್ನು ಬಲಿಕೊಡಲು ಹಿಂದೆಗೆಯಬೇಡ. ಹಿಂದಿನ ಬೇಬಿಲಾನ್‌ ನಗರದಂತೆ, ಇಂದಿನ ಪೀಕಿಂಗ್‌ ನಗರದಂತೆ ಐದು ಯೋಜನ ಉದ್ದ ಮೂರು ಯೋಜನ ಅಗಲ ಇರುವ ಮಹದೈಶ್ವರ್ಯ ಸಂಪನ್ನವಾದ ಈ ನಗರದಲ್ಲಿ ಲೂಟ ಕೊಳ್ಳೆಗಳು ನಡೆಯುವ ವಲ್ಲಾ ! ಅದನ್ನು ತಪ್ಪಿಸಲಾರೆಯಾ ? ನಿನ್ನ ಅಭಿಮಾನಕ್ಕೆ ಪಾತ್ರವಾದುದು ಯಾವ ಯಾವದು ಇರುವುದೊ ಅದೆಲ್ಲವೂ ನಾಶವಾಗಿ ಹೋಗುವುದು. ಕೇಳು, ಶಾಮಣ್ಣ ! ಸೂತ್ರವು ನಿನ್ನ ಕೈಯಲ್ಲಿದೆ. ದೊಡ್ಡ ಮನಸ್ಸುಮಾಡು. ಇನ್ನೂ ಒಂದು ವರ ಕೊಡುವೆನು ತೆಗೆದುಕೊ. ನೀನು ಈ ದಿನ ಇಲ್ಲ ಈ ಕೆಲಸ ಮಾಡಿ, ನಿನ್ನ ಶಿಷ್ಯಳ ಮನೆಗೆ ಹೋಗು. ಅಲ್ಲಿ ನಾನು ಪೂಜಿಸುತ್ತಿದ್ದ ದೇವಿಯು ಆ ನಿನ್ನ ಶಿಷ್ಯಳ ಮೇಲೆ ಬಂದು ನಾನು ಈ ಬಲಿಯಾಗುನ ದೀಕ್ಷೆ ಯನ್ನು ವಹಿಸಿದ ಕಥೆಯನ್ನು ಹೇಳುವಳು. ಏಳು ಹೊತ್ತಾಗುತ್ತ ಬಂತು. ಏಳು. ನಾನು ಸನ್ಯಾಸಿ ನನಗೆ ಹಿಂದಿಲ್ಲ ಮುಂದಿಲ್ಲ. ನಿನಗೆ ಪಾಪ ಬರುವು ದಿಲ್ಲ. ಪುಣ್ಯವು ಅಪಾರವಾಗಿ ಬರುವುದು.”

ಶಾಂಭವಾನಂದರ ಮಾತುಗಳನ್ನು ಕೇಳಿ ಆಚಾರ್ಯರು ಮುಗ್ಧ ರಾಗಿ ಹೋದರು. ಆದರೂ ಇನ್ನೂ ಅವರು ಹಿಂದೆ ಮುಂದೆ ನೋಡುತ್ತಿರಲ್ಕು ಆನಂದರು, “ಶಾಮಣ್ಣ, ನಿನ್ನ ಅದೃಷ್ಟ ಚೆನ್ನಾಗಿದೆ. ನಾನು ಈ ಬಲಿಪೀಠದಲ್ಲಿ ಕುಳಿತಿದ್ದೇನೆ. ಕೋಪಮಾಡಿಕೊಳ್ಳುವಂತಿಲ್ಲ. ಇಲ್ಲದಿದ್ದರೆ ಒಂದೇ ಒಂದು ಹುಂಕಾರ ಮಾತ್ರದಿಂದ ನಿನ್ನನ್ನು ಭಸ್ಮಮಾಡಿಬಿಡುತ್ತಿದ್ದೆ. ಏನು ಮಾಡಲಿ. ಈಗ ಕೋಪ ಮಾಡಿಕೊಳ್ಳುವಂತಿಲ್ಲ. ಅದರಿಂದ ನಿನಗೆ ಅನ್ನ ಕೊಟ್ಟು ನಿನ್ನನ್ನು ಕಾಪಾಡಿರುವ ನಿನ್ನ ಅನ್ನದಾತನ ಮೇಲೆ ಆಣೆ. ಏಳು ಮುಂದಿನ ಕಾರ್ಯವನ್ನು ಮಾಡು” ಎಂದರು.

ಆಚಾರ್ಯರು ಇನ್ನೂ ಮೀನ ಮೇಷ ಎಣಿಸುತ್ತಿರಲು, ಶಾಂಭವಾನಂದರು, “ಗುರುದೇವ, ಕರುಣಿಸು ನಿನ್ನ ಇಚ್ಛೆಯಿದ್ದಂತಾಗಲಿ”ಎಂದು ಇನ್ನೊಂದು ಹಿಡಿ ಭಸ್ಮವನ್ನು ತೆಗೆದುಕೊಂಡು ಆಚಾರ್ಯರ ಮೇಲೆ ತೂರಿದರು. ಅವರಿಗೆ ಮಂಕು ಹಿಡಿದಂತಾಯಿತು. ಎದ್ದರು. ಮಂತ್ರೋದಕದ ಕಲಶವನ್ನು ತೆಗೆದು ಕೊಂಡರು. ಅದೇನಾಯಿತೋ ಏನೋ ಅದು ಅವರ ಕೈಯಿಂದ ಬಿದ್ದು ಹೋಯಿತು. ಮಣ್ಣಿನ ಮಡಿಕೆ. ಒಡೆದು ನೂರು ಚೂರಾಯಿತು. ಆಚಾರ್ಯರು ಧೊಪ್ಪನೆ ಬಿದ್ದುಹೋದರು. ಆನಂದರು ಜುಗುಪ್ಸೆಯಿಂದ “ಹೋಗಲಿ, ಬಿಡು. ಹಾಳು ದದೈವಕ್ಕೆ ಬೇಡವಾದರೆ ನಾನೇಕೆ ಅಳಲಿ ?” ಎಂದು ಆಚಾರ್ಯ ರಿಗೆ ಚಿಕಿತ್ಸೆ ಮಾಡಿ ಕರೆದು ತಂದು ಗಾಡಿಯಲ್ಲಿ ಮಲಗಿಸಿದರು. ಮನೆಗೆ ಬರುವ ವೇಳಗೆ ಆಚಾರ್ಯರಿಗೆ ಪೂರ್ಣವಾಗಿ ಪ್ರಜ್ಞೆ ಬಂದಿತ್ತು.

ಅಂದು ಅವರು ಮನೆಗೆ ಬಂದ ಮೊದಲು ಏನೋ ಒಂದು ವಿಚಿತ್ರ ಅನು ಭವವಾಗುತ್ತಿದೆ. ಯಾರೋ ಒಬ್ಬರು ಜೊತೆಯಲ್ಲಿದ್ದಂತೆ ಇದೆ. ಇನ್ನು ಯಾವುದೋ ಒಂದು ಕರಾಳ ಸ್ವರೂಸ ಕೊಂಚ ದೂರದಲ್ಲಿ ನಿಂತು “ಎಲ್ಲಿ ನನಗೆ ಕೊಡಬೇಕಾದುದನ್ನು ಕೊಡುಮತ್ತೆ. ನನಗೆ ಹಸಿವು ಮೀರುತ್ತಿದೆ.” ಎನ್ನುವಂತಿದೆ. ರೂಪ ಕಣ್ಣಿಗೆ ಕಾಣಿಸುವುದಿಲ್ಲ; ಮಾತು ಕಿವಿಗೆ ಕೇಳುವುದಿಲ್ಲ; ಆದರೂ ಮನಸ್ಸಿಗೆ ರೂಪವೂ ವಚನವೂ ಬೋಧೆಯಾಗುತ್ತಿದೆ. ಇನ್ನೊಂದು ಅತಿ ಮನೋಹರವಾದ, ಅತಿ ಶುಭವಾದ ಮನಸ್ಸಿಗೆ ಹಿತವೂ ಪ್ರಿಯವೂ ಆದ ಒಂದು ಮೂರ್ತಿಯು ಹಿಂದೆ ಹಿಂದೆಯೇ ಅಲೆಯುತ್ತ ರುವಂತೆ ಬೋದೆಯಾಗು ತ್ತಿದೆ. ಆ ರೂಪವು ಸ್ಪಷ್ಟವಾಗಿ ಕಣ್ಣಿಗೆ ಕಾಣಲೊಲ್ಲದು. ಆದರೂ ಓಡಾಡು ತ್ತಿದ್ದರೆ ತಿರುಗಾಡುವಾಗ ಮೈ ತಗುಲುವುದೇನೋ ಎಂದು ಓರೆಯಾಗುವಷ್ಟು ಸ್ಪಷ್ಟವಾಗಿದೆ. ಆಚಾರ್ಯರು ಊಟಮಾಡುತ್ತಿದ್ದರೆ ಕೈಯಲ್ಲಿರುವ ತುತ್ತಿ ಗಿಂತಲೂ ಮಗ್ಗುಲಲ್ಲಿರುವ ಸದ್ಭಾವವು ಸತ್ಯವೆನ್ನಿಸುವಂತಿದೆ. ಎಂದಿನಂತೆ ಅವರು ಊಟವಾದ ಮೇಲೆ ಮುಸುಕೆಳೆದುಕೊಂಡು ವಿಶ್ರಾಂತಿಗಾಗಿ ಮಲಗಿದರು. ಅವರು ಕಣ್ಮುಚ್ಚಿಕೊಂಡಿದ್ದಾರೆ. ಅವರ ಆತ್ಮವು ಆ ದೇಹವನ್ನು ಬಿಟ್ಟು ಮೇಲಕ್ಕೆ ಎದ್ದು ಎಲ್ಲಿಯೋ ಹೊರಟದೆ. ಕಾಲಚಕ್ರವು ಮುಂದಕ್ಕೆ ಹರಿಯುವುದು ತಪ್ಪಿ ಹಿಂದಕ್ಕೆ ಹೊರಳಿದೆ. ತುಂಗ ಭದ್ರೆಯು ಉಕ್ಕೇರಿ ಬಂದು ಆಚಾರ್ಯರನ್ನು ಹೊತ್ತು ಕೊಂಡು ಹೋಗಿ ತನ್ನ ತೀರದಲ್ಲಿರುವ ಒಂದು ಗವಿಯಲ್ಲಿ ಎಸೆಯುತ್ತಾಳೆ: ಅಲ್ಲಿ ಕತ್ತಲು ತುಂಬಿದ್ದು ಇವರ ಕಣ್ಣು ಕತ್ತಲಿಗೆ ಒಗ್ಗುವುದರೊಳಗಾಗಿ ಒಳಗಿನಿಂದ ಯಾರೋ ಒಂದು ದೀಪವನ್ನು ತೆಗೆದುಕೊಂಡು ಈಚೆಗೆ ಬರುತ್ತಾರೆ. ಇವರಿಗೆ ಅವರ ಗುರ್ತುಸಿಕ್ಕು ತ್ತದೆ. ಅವರೇ ವಿದ್ಯಾರಣ್ಯರು. ಇವರು ಅಶ್ವರ್ಯ ಪಡುತ್ತಾರೆ. “ಇದೇನು? ವಿದ್ಯಾ ರಣ್ಯರು ಮುಕ್ತರಾಗಿಲ್ಲವೆ?” ಎಂಬ ಪ್ರಶೆಯು ಏಳುತ್ತದೆ. ಇವರು ಬಾಯಲ್ಲಿ ಆಡದಿದ್ದರೂ ಅವರಿಗೆ ಆದು ತಿಳಿದು * ನಮೋಕ್ಷೋsಸ್ತಿ ನಬಂಥೋsಸ್ತಿ ಜೀವೋಮುಕ್ತಾsಸ್ಸದಾ ಶಿವಃ–ಮೋಕ್ಷವಿಲ್ಲ; ಬಂಧನವಿಲ್ಲ; ಯಾವಾಗಲೂ ಮುಕ್ತನಾಗಿರುವ ಶಿವನೇ ಜೀವನಾಗಿ ಬರುತ್ತಾನೆ” ಎನ್ನುತ್ತಾರೆ. ಹಾಗೆ್ಯೇ ನೋಡುತ್ತಿದ್ದರೆ, ಅವರ ಮೈಯಿಂದ ಎರಡು ಸಣ್ಣ ಕಿಡಿಗಳು ಹಾರಿದಂತಾಗಿ ಈಚೆಗೆ ಬಂದು ಎರಡು ಬೊಂಬೆಗಳಾಗುತ್ತವೆ. ಅವನ್ನು ಅವರು ಮುಟ್ಟುತ್ತಲೂ ಅವು ಸಜೇತನಗಳಾಗಿ ಪ್ರಾಣವಂತಗಳಾಗುತ್ತವೆ. ಎರಡೂ ಕ್ರೀಡಾಪರರಾದ ಇಬ್ಬರು ಸುಂದರ ಬಾಲಕರಾಗಿ ಹಕ್ಕಿಗಳಾಗಿ ಕುಣಿಯುತ್ತಿದ್ದಾರೆ. ಒಬ್ಬನು ಶಂಭು, ಇನ್ನೊಬ್ಬ ಶಾಮಣ್ಣ.

ವಿದ್ಯಾರಣ್ಯರ ಕೈಯಲ್ಲಿ ಹಿಡಿದಿದ್ದ ದೀಪವಾರಿ ಮತ್ತೆ ಹತ್ತುತ್ತದೆ. ಆ ವೇಳೆಗೆ ಶಾಮಣ್ಣನು ಭರತಾಚಾರ್ಯನಾಗಿ ಉತ್ತಮ ವಸ್ತ್ರಭೂಷಣ ಭೂಷಿತ ನಾಗಿ ವಾಹನಾದಿಗಳಲ್ಲಿ ತಿರುಗುತ್ತಿದ್ದಾನೆ. ಅತ್ತ ಇನ್ನೊಬ್ಬನು ಗುಹೆಯೊಂದ ರಲ್ಲಿ ಕೌಪೀನಮಾತ್ರಧಾರಿಯಾಗಿ ಒಂದು ಕಮಂಡಲುವಿಟ್ಟು ಕೊಂಡು ಏನೋ ಪೂಜೆಯಲ್ಲಿ ಕುಳಿತಿದ್ದಾನೆ. ಪೂಜೆಯನ್ನು ಕೈಕೊಳ್ಳುತ್ತಿದ್ದ ದೇವಿಯು ಇಷ್ಟಾರ್ಥಸಿದ್ದಿರಸ್ತು ಎನ್ನುತ್ತಾಳೆ. ಮತ್ತೆ ನೋಡಿದರೆ ಇಬ್ಬರೂ ಸೇರಿದ್ದಾರೆ. ಹಿಂದಿನ ದಿನದ ಸನಿ ನೆನಪುಗಳಲ್ಲಿ ಕಲೆತು ಕಲೆತು ಮಲೆತು ಆನಂದಸಾಗರದಲ್ಲಿ ಮುಳುಗಿ ತೇಲುತ್ತಿದ್ದಾರೆ.

ಮತ್ತೆ ದೀಪವಾರಿ ಹತ್ತಿತು. ಈಗ ವಿದ್ಯಾರಣ್ಯರು ಒಂದು ಬೆಟ್ಟದನ್ನು ಆಗಿದ್ದಾರೆ. ಅವರು ನೀಡಿರುವ ಕೈಯು ಮಳೆಯ ಮೋಡದಂತೆ ವೃಷ್ಟಿಯನ್ನು ಮಾಡುತ್ತಿದೆ. ಆ ವೃಷ್ಟಿಯು ಕರೆದ ಕಡೆಯಲ್ಲೆಲ್ಲಾ ಸಮೃದ್ಧಿಯಾಗಿ ಮಾಂತ್ರಿಕನ ಮಂತ್ರ ಬಲದಿಂದ ಕಣ್ಣೆದುರಿಗೇ ಬೆಳೆಯುವ ಮಾವಿನ ಗಿಡದಂತೆ ಒಂದು ಸುಂದರವಾದ ನಗರವು ಬೆಳೆಯುತ್ತಿದೆ. ಹೌದು. ಅದೇ ಪಂಪಾಪತಿ ವಿರೂಪಾಕ್ಷನ ಮಂದಿರದ ಭವ್ಯ ಗೋಪುರ. ಅಗೋ ಬೆಳ್ಳಿಯ ಪಟ್ಟೆಯಂತೆ ಬೆಳಗುತ್ತಾ ಹರಿಯುತ್ತಿರುವುದೇ ತುಂಗಭದ್ರಾ ನದಿ. ಸುತ್ತಮುತ್ತಲ ಬೆಟ್ಟ ಕಾಡುಗಳೆಲ್ಲ ಪಟ್ಟಣವಾಗಿವೆ. ಅದೋ ಅಲ್ಲಿಯೇ ವಿಜಯವಿಟ್ಠಲನ ಜೀವ ಸ್ಥಾನ ಅಲ್ಲಿಯೇ ಕ್ರೀಡಾಪರ್ವತದಂತೆ ಸುಂದರವಾಗಿ, ಸುಣ್ಣದಿಂದ ಬೆಳ್ಳಗೆ ಬೆಳ್ಳಿಯ ಮುದ್ದೆಯಂತೆ ಕಾಣುತ್ತಾ, ಚಿನ್ನದ ಕಲಶಗಳಿಂದ ಮುದ್ದಾಗಿರುವ ರಾಯರ ಅರಮನೆಯ ಮೇಲೆ ವರಾಹಧ್ವಜವು ಸಂಜೆಯ ಹೂಗಾಳಿಯಲ್ಲಿ ಸಂತೋಷದಿಂದ ನರ್ತಿಸುತ್ತಿದೆ. ಹೌದು. ಇದೇ ವಿಜಯನಗರ.

ಇದ್ದಕ್ಕಿದ್ದಂತೆ ದೀಪವಾರಿ ಹತ್ತಿತು. ಈಗ ವಿದ್ಯಾರಣ್ಯರು ಮತ್ತೆ ಮೂಲರೂಪದಲ್ಲಿ ನಿಂತಿದ್ದಾರೆ. ಯಾರೋ ಕರಾಳ ರೂಪಿನ ರಕ್ಕಸಿಯೊಬ್ಬಳು ಬಂದು ಈ ವಿಜಯನಗರವನ್ನೆಲ್ಲ ತಿನ್ನಲೇ ಎಂದು ಕೇಳುತ್ತಾಳೆ. ವಿದ್ಯಾರಣ್ಯರು ಅಗೋ ಅಲ್ಲಿ ಕುಳಿತಿರುವವರನ್ನು ಕೇಳು ಎಂದು ಕೈತೋರಿಸುತ್ತಾರೆ. ಶಾಮಣ್ಣ ಶಂಭು ಇಬ್ಬರೂ ಅವಳ ಮೇಲೆ ಬೀಳುತ್ತಾರೆ. ಅವಳು ಕಿರಿಚಿಕೊಳ್ಳುತ್ತಾಳೆ. ಆಚಾರ್ಯ ರಗೆ ಆ ಕಿರಿಚಾಟ ಕೇಳಿ ಎಚ್ಚರವಾಗಿಹೋಯಿತು.

ಇದೇನು ಈಕನಸು ಎಂದು ಏನೋ ಕರೆಕರೆ ಪಡುತ್ತಿರುವ ಮನಸ್ಸಿನಲ್ಲಿ ಕೈಕಾಲು ತೊಳೆದುಕೊಂಡು, ಆವೇಳೆಗಾಗಲೇ ಬಂದಿದ್ದ ಗಾಡಿಯಲ್ಲಿ ಶಿಷ್ಯಳ ಮನೆಗೆ ಹೋದರು. ಅಲ್ಲಿ ಚಿನ್ನಳ ಸ್ಥಾನದಲ್ಲಿ ರನ್ನಳು ನಿಂತಿದ್ದಾಳೆ. ಅವಳಿಗೆ ಗಾಬರಿ ತಾನೇ ತಾನಾಗಿದೆ. ಗುರುಗಳು ಬಂದಾರೆ ಎಂದು ಕಾದಿದ್ದಾಳೆ. ಅವರು ಬರುತ್ತಲೂ ಗಾಡಿಯಿಂದ ಇಳಿಸಿಕೊಂಡು, ಏನಿದು ಎಂದು ವಿಚಾರಿಸಿದ ಗುರುಗಳಿಗೆ ಹೇಳಿದಳು “ಅಕ್ಕ ದೇವರಮನೆಯಲ್ಲಿ ಕುಳಿತಿದ್ದಾಳೆ. ಗುರುಗಳು ಬಂದರೆ ಕಳುಹಿಸು ಎಂದು ಹೇಳಿ ಬಾಗಿಲು ಹಾಕಿಕೊಂಡಿದ್ದಾಳೆ. ಏನು ಮಾಡಿದರೂ ಮಾತೇ ಆಡದೆ ಇದ್ದಾಳೆ.”

ಗುರುಗಳೂ ಹೋಗಿ ಕೈಕಾಲು ತೊಳೆದುಕೊಂಡು ದೇವರ ಮನೆಗೆ ಹೋದರು. ಚಿನ್ನಳು “ಬಾ, ಶಾಮಣ್ಣ, ಕಥೆಯನ್ನು ಕೇಳು. ನಿನಗಾಗಿ ಇಲ್ಲಿ ಕಾದಿದ್ದೇನೆ. ನೀನೊಮ್ಮೆ ನನ್ನ ರೂಪವನ್ನು ನೋಡು. ನಿನಗೆ ನಂಬುಗೆ ಯಾಗಲೆಂದು ನಾನು ದರ್ಶನ ಕೊಡುತ್ತೀನೆ. ನಾನು ಭದ್ರಕಾಳಿ. ಒಮ್ಮೆ ಕಣ್ಣುವ ಮುಚ್ಚಿಕೊ” ಎಂದಳು. ಅವರೂ ಕಣ್ಮುಚ್ಚಿಕೊಂಡರು. ಕೈಮುಗಿದು ಕೊಂಡರು.

“ಜಗನ್ಮಾತೇ ರಕ್ಷಿಸು. ಸರ್ವಮಂಗಲ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೇ
ಶರಣ್ಯೇತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ”

ಎಂದು ಮನಸ್ಸಿನಲ್ಲಿ ಪ್ರಣಾಮಾದಿಗಳನ್ನು ಅರ್ಪಿಸಿ ಪಂಚೋಪಚಾರ ಪೂಜೆಮಾಡಿದರು ಅಲ್ಲಿಯೇ ದೇವಿಯು ಅಂತರ್ಧಾನಳಾದಳು.

“ಶಾಮಣ್ಣ, ಈದಿನ ನಿಮ್ಮ ಎದುರು ನಿಂತಿದ್ದ ಮಹಾಮಾರಿಯನ್ನು ಎದುರಿಸಲು ಶಂಭುವಿಗೆ ಶಕ್ತಿ ಬಂದುದು ನನ್ನ ಕೃಪೆಯಿಂದ. ಆ ಕಥೆಯನ್ನು ಕೇಳು. “ಒಂದು ದಿನ ಶಂಭುವು ಭುವನೇಶ್ವರಿಯ ದೇನಸ್ಥಾನದಲ್ಲಿ ಮಲಗಿದ್ದನು. ಆದಿನರಾತ್ರಿ ಎಂದಿನಂತೆ ದೇವಿಯನ್ನು ಸೇವಿಸಲು ಅರ್ಥ ರಾತ್ರಿಯ ಸಮಯದಲ್ಲಿ ಸೇವತಿಗಳು ಬಂದರು. ದೇವತೆಗಳು “ದೇವಿ ಕಲ್ಯಾಣಮಯಿಯಾಗಿ ನೀನು ಇಲ್ಲಿ ಇರಬೇಕಾದ ಕಾಲವು ಮುಗಿಯುತ್ತಾ ಬಂದಿತು. ವಿದ್ಯಾರಣ್ಯ ಮುನೀಂದ್ರರು ನಿಯಮಿಸಿದ್ದ ಕಾಲವು ಮುಗಿದಾಗ ನೀನು ಬಂದುಬಿಡುವೆಯಷ್ಟೆ ?” ಎಂದು ಕೇಳಿದರು. ದೇವಿಯು ಇದೋ ಅಲ್ಲಿ ಮಲಗಿರುವವನನ್ನು ಕೇಳಿ. ಅವನೂ ವಿದ್ಯಾರಣ್ಯರ ಅಂಶದಿಂದ ಹುಟ್ಟಿದ್ದಾನೆ. ಅವನು ಅಡ್ಡ ಬೀಳದಿದ್ದರೆ ತಪ್ಪದೇ ಹೊರಟು ಬರುತ್ತೇನೆ ಎಂದಳು. ದೇವತೆಗಳು ಬಂದು ಶಂಭುನನ್ನು ಕೇಳಿದರು. ಶಂಭುವು ಏನೂ ತಿಳಿಯದವನಂತೆ, ಮೊದಲು ನಿಮ್ಮ ರಹಸ್ಯವನ್ನು ಭೇದಿಸುವ ಶಾಸ್ತ್ರವನ್ನು ಅನುಗ್ರಹಿಸಿ. ಅನಂತರ ನಿಮ್ಮ ಪ್ರಶ್ನೆಗೆ ಉತ್ತರ ಹೇಳುತ್ತೇನೆ ಎಂದನು. ಅವರು ನರ್ಮದಾ ತೀರದಲ್ಲಿ ವಿಂಧ್ಯ ಸರ್ವತದಲ್ಲಿರುವ ಭದ್ರಕಾಳಿಯನ್ನು ಆಶ್ರಯಿಸು. ಆಕೆಯು ನಿನಗೆ ಮಂತ್ರಶಾಸ್ತ್ರವನ್ನು ಅನುಗ್ರ ಹಿಸುವಳು ಎಂದು ಹೇಳಿದರು. ಅದರಂತೆ, ಅವನು ಯಾರಿಗೂ ಹೇಳದೆ ಕೇಳದೆ ಹೊರಟುಹೋದನು.

“ಅಲ್ಲಿ ಭದ್ರಕಾಳಿಯ ದಯೆಯಿಂದ ಆತನಿಗೆ ಮಂತ್ರ ಶಾಸ್ತ್ರವೂ ಸಾಂಗವಾಗಿ ವೇದಾಧ್ಯಯನವೂ ಲಭಿಸಿದುವು. ತನ್ನ ತಪೋಬಲದಿಂದ ವಿಜಯನಗರಕ್ಕೆ ಬಂದಿರುವ ಮೃತ್ಯುವನ್ನು ಏನು ಮಾಡಿದರೆ ಅದು ನಿವಾರಣವಾಗುವುದು ಎಂಬುದನ್ನೂ ಅನನು ತಿಳಿದನು. ‘ ವಿದ್ಯಾನಿನಯ ಸಂಪನ್ನ ನಾಗಿ ತಪಸ್ವಿಯಾಗಿರುವ ಅಸ್ಖಲಿತ ಬ್ರಹ್ಮಚಾರಿಯನ್ನು, ಅವನಮೇಲೆ ಅಕೃತ್ರಿಮವಾದ ವಿಶ್ವಾಸವನ್ನು ಇಟ್ಟು ಕೊಂಡಿರುವ ಇನ್ನೊಬ್ಬನು ಬಲಿಕೊಟ್ಟರೆ ಆ ಮಹಾಮಾರಿಯು ಶಾಂತಳಾಗುವಳು.’ ಎಂಬುದು ಆತನಿಗೆ ತಿಳಿಯಿತು. ತಾನೇ ಬಲಿಯಾಗುವ ಬ್ರಹ್ಮಚಾರಿಯಾದನು. ಬಲಿಯನ್ನು ಒಪ್ಪಿಸುಸುವುದಕ್ಕೆ ನೀನೇ ಸರಿ ಎಂದು ಗೊತ್ತುಮಾಡಿಕೊಂಡು ನಿನ್ನ ಬಳಿಗೆ ಬಂದನು. ಈ ಬೆಳಿಗ್ಗೆ ನಿನ್ನಿಂದ ಆಗಿರುವ ಅನರ್ಥವನ್ನು ಬಲ್ಲೆಯಾ? ಈದಿನ ನೀನು ಶಂಭುವು ಹೇಳಿದಂತೆ ನಡೆದಿದ್ದರೆ. ವಿಜಯನಗರವು ಕಾಶಿಯಂತೆ, ಕಂಚಿಯಂತೆ, ಮಧುರ ಯಂತೆ ಅನಂತಕಾಲ ಬಾಳುತ್ತಿತ್ತು. ನೀನು ವಿದ್ಯಾರಣ್ಯರ ಸಮನಾಗುತ್ತಿದ್ದೆ. ಆದರೆ ದೇವತೆಗಳು ನಿನಗೆ ಮೋಸಮಾಡಿದರು. ಶಂಭುವು ನಲವತ್ತು ವರ್ಷ ಮಾಡಿದ್ದ ಅಖಂಡ ತಪಸ್ಸು ನಿನ್ನ ಒಂದುಗಳಿಗೆಯ ಅನವಧಾನದಿಂದ, ದುರಭಿ ಮಾನದಿಂದ ವ್ಯರ್ಥವಾಗಿ ಹೋಯಿತು.“

“ತಾಯೆ, ಮತ್ತೆ ಈ ಅವಕಾಶವು ಒದಗುವುದಿಲ್ಲವೆ ?”

“ಶಂಭುವು ಇನ್ನೂ ಆರುತಿಂಗಳು ಅಜ್ಞಾತವಾಗಿ ತಪಸ್ಸು ಮಾಡುವನು. ಆಗಲಾದರೂ ಅವನು ಹೇಳಿದಂತೆ ಮಾಡು. ಒಂದಕ್ಕೆರಡು ಕೊಟ್ಟರೆ ಮಹಾ ಮಾರಿಯು ಈ ನಗರಕ್ಕೆ ಇನ್ನು ಹತ್ತುವರ್ಷದ ಆಯಸ್ಸನ್ನು ಕೊಡುವಳು. ಇದೋ, ನಿನಗೆ ನನ್ನ ಶಂಭುವಿನಲ್ಲಿ ನಂಬಿಕೆ ಬರಲೆಂದು ಹೇಳಿದ್ದೇನೆ. ನಿನಗೆ ದರ್ಶನವನ್ನು ಕೊಟ್ಟಿದ್ದೇನೆ. ಇಗೋ, ಸಾಕ್ಷಿಯಾಗಿ ಇನ್ನೂ ಒಂದು ಸುದ್ದಿ ಹೇಳುತ್ತೇನೆ. ನಾಳಿನದಿನ ಸಂಜೆಗೆ ಯಜಮಾನ್‌ ವೀರಪ್ಪ ಸೆಟ್ಟಿಯು ನಿಮ್ಮ ರಾಯರಿಗೆ ಗೋಲ್ಕೊಂಡದವರ ಸಂಧಿಪತ್ರವನ್ನು ತಂದು ಕೊಡುವನು. ಇನ್ನು. ಹತ್ತುವರ್ಷಗಳು ಈ ಎರಡು ರಾಜ್ಯಗಳೂ ಪರಸ್ಪರ ಸ್ನೇಹದಿಂದ ಬಾಳುವುವು. ಅಲ್ಲಿಂದ ಮುಂದೆ ಭುವನೇಶ್ವರಿಯೂ, ವಿಜಯವಿಟ್ಠಲನೂ ಈ ನಗರವನ್ನು ಬಿಡುವರು. ಇದು ವಿಶ್ವೇಶ್ವರನ ಆವಾಸಸ್ಥಾನವಾಗುವುದು ಇಲ್ಲಿ ಒಂದು ಕಂಭ ನಿಂತಿರುವುದಿಲ್ಲ. “ಒಂದು ಕಂಭದ ಮೇಲೊಂದು ಬೋದಿಗೆಯು ನಿಲ್ಲು ವುದಿಲ್ಲ. ಎಲ್ಲವೂ ನೆಲಸಮವಾಗುವುದು.?

ಇಷ್ಟುಮಾತನಾಡಿ ಚಿನ್ನಳ ದೇಹವು ಹಾಗೆಯೇ ನೆಲದಮೇಲೆ ಒರಗಿತು. ಆಚಾರ್ಯರೂ, ರನ್ನಳೂ ದೇವಿಗೆ ಆರತಿಯನ್ನು ಬೆಳಗಿದರು. ಅಷ್ಟು ಹೊತ್ತಾದ, ಮೇಲೆ ಅವಳಿಗೆ ಎಚ್ಚರವಾಯಿತು. ಬಹುನಿಶ್ಶಕ್ತಳಾಗಿದ್ದ ಅವಳನ್ನು ಇಬ್ಬರೂ ಕರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿದರು.

ಚಿನ್ನಳ ಮಂಚದ ತಲೆಯ ಕಡೆಗೆ ಒಂದು ಸುಖಾಸನ. ಆದರಲ್ಲಿ ಆಚಾರ್ಯರು ಬಿದ್ದು ಕೊಂಡಿದ್ದಾರೆ. ಅವರಿಗೆ ಕಣ್ಣೀರು ಕೋಡಿಗಟ್ಟಿಕೊಂಡು ಹರಿಯುತ್ತಿದೆ. ರನ್ನಳು ಎಕೆ ಎಂಬುದನ್ನು ತಾನು ಬಲ್ಲಷ್ಟು ಅಕ್ಕನಿಗೆ ಹೇಳಿದಳು. ಅವಳು ಕೈಯಲ್ಲಾಗದಿದ್ದರೂ ಎದ್ದು ಬಂದು ಬೇಕಾದ ಉಪಚಾರ ಮಾಡಿದಳು. ಕೊನೆಗೆ ಏನೇನೊ ಮಾಡಿ ಬೆಳಗಿನ ಸಮಾಚಾರವನ್ನು ನಿಟ್ಟುಸಿರುಬಿಡುತ್ತ, ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತ ಸಾಧ್ಯವಾದಮಟ್ಟಿಗೂ ಆಚಾರ್ಯರು ಹೇಳಿದರು.

ಎಲ್ಲವನ್ನೂ ಕೇಳಿ ಚಿನ್ನಳು ಅವಾಕ್ಕಾದಳು. ತಂಗಿಯನ್ನು ಕರೆದು ಕೊಂಡು ಗುರುಗಳೂಡನೆ ಶಾಂಭವಾನಂದರನ್ನು ನೋಡಲು ಹೊರಟಳು. ಇವರು ಹೋಗುವವೇಳೆಗೆ ಗುಡಿಸಲು ಹತ್ತಿಕೊಂಡು ಉರಿದುಹೋಗಿ ಭಸ್ಮಾವ ಶೇಷವಾಗಿತ್ತು. ಅಲ್ಲಿ ಶಾಂಭವಾನಂದರ ಸುದ್ದಿಯನ್ನು ಹೇಳುವವರು ಯಾರೂ ಇರಲಿಲ್ಲ.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...