
ನರಮುಪ್ಪು ಯೌವನಕೆ
ಒಲ್ಲದೊಡನಾಟ ;
ಯೌವನವು ಸುಮ್ಮಾನ,
ಮುಪ್ಪು ಮಿಡುಕಾಟ;
ಯೌವನವು ಸಿರಿ ಸುಗ್ಗಿ
ಮುಪ್ಪು ಬರಿ ಮಾಗಿ;
ಯೌವನವು ಶೃಂಗಾರಿ,
ಮುಪ್ಪು ತಲೆದೂಗಿ.
ಯೌವನಕೆ ಚೆಲ್ಲಾಟ,
ಮುಪ್ಪಿಗುಸಿರೆಳೆದಾಟ,
ಹುಲ್ಲೆನಗೆ ಯೌನವು. ಹೆಳವು ಮುಪ್ಪು;
ಯೌನದ ರಕ್ತ ಬಿಸಿ,
ಮುಪ್ಪೆಲ್ಲ ಕುಗ್ಗು ಕುಸಿ,
ಎದೆಗಚ್ಚು ಯೌವನವು, ಪೆಚ್ಚು ಮುಪ್ಪು,
ಎಲೆ ಮುಪ್ಪೆ ಸಾರತ್ತ,
ಯೌವನವೆ ಬಾರಿತ್ತ,
ಬರುವಳದೋ ಚಿಕ್ಕವಳು ನನ್ನ ಚೆಲುವೆ;
ಮುಪ್ಪೆ, ನಡೆ, ನಡೆ, ಒಲ್ಲೆ,
ಮುದಿಕುರುಬ, ನಿಲ್ಲಲ್ಲೆ,
ಬಂದಳದೊ ಚಿಕ್ಕವಳು ನನ್ನ ಚೆಲುವೆ,
*****
SHAKESPEARE : Youth & Age














