ಅದೋ ನೋಡು ನಿನ್ನ ಜೀವನ
ಘಾಸಿಗೊಂಡಿದೆ ಆಸೆಗಳಿಂದ
ತನ್ನ ತನವ ಕಳೆದುಕೊಂಡಿದೆ
ವಂಚಿತಗೊಂಡಿದೆ ತನ್ನವರಿಂದ
ಬದುಕಿನಲಿ ಸುಖವೆಲ್ಲಿಯದು ಕಂದ
ಅದೆಲ್ಲವೂ ನಿನ್ನ ಮನದ ಭ್ರಮೆ
ಎಲ್ಲಿಂದ ಬಂದೆಯೊ ಮೂಲದಿ
ಅದಕ್ಕಾಗಿ ಮಾಡು ನಿ ವಿಮೆ
ಇದೊಂದು ಬಾಳಿನ ಮಹಾಯಾತ್ರೆ
ನಾವೆಲ್ಲರೂ ಈ ತಾಣದ ಯಾತ್ರಿಕರು
ಈ ಯಾತ್ರೆ ತಂಗುದಾಣ ಶಾಶ್ವತವೆಂದೆ
ದೇವ ಕೃಪೆ ಇಲ್ಲದೆ ನಾವು ನಿರಾಶ್ರಿತರು
ನಾಳಿನ ಪಯಣಕ್ಕೆ ಸಿದ್ಧತೆ ಮಾಡು
ನಾಮ ಸ್ಮರಣಿಯ ಪುಣ್ಯ ಸಂಚಯಿಸು
ಸಾವು ಯಾವ ಕ್ಷಣದಲ್ಲೂ ಬರಲಿದೆ
ಮಣಿಕ್ಯ ವಿಠಲನಿಗೆಲ್ಲ ಅರ್ಪಿಸು
*****
















