
ಭಾರತವನುಳಿಯುತ್ತ ನನಗೆ ಜೀವನವೆತ್ತ? ಭಾರತವೆ ನನ್ನುಸಿರು, ನನ್ನೊಗೆದ ಬಸಿರು. ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ, ಭಾರತವೆ ದೇವಾರವೆನ್ನ ಸಂಸಾರ. ಭಾರತದ ನೆಲಹೊಲವು ಸುರಭಿಯಿಳಿಕೆಚ್ಚಲವು, ಭಾರತದ ತಿಳಿಜಳವು ಸೊದೆಯ ಸವಿ ಸೆಳವು, ಭಾರತದ ಶ್ಯಾಮ...
ನುಡಿಯೊಳಗಣಾ ನಿನ್ನ ನುಡಿಯಲಿ ಕನ್ನಡತನವು ನಲಿವಾಗಿರಲಿ ಸದಾ ನಡೆಯೊಳಗಣಾ ನಿನ್ನ ನಡೆಯಲಿ ಕನ್ನಡತನವು ಹಸಿರುಸಿರಾಗಿರಲಿ ಸದಾ ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ ದುರಭಿಮಾನದ ಕೊಳೆಯ ತೊಳೆದೊಗೆದ...
ಮಡಿಕೇರೀಲಿ ರತ್ನ ಕಂಡಾ ವೊಸಾ ಮತ್ನ. ೧ ‘ಮಡಿಕೇರೀಲಿ ಮಡಿಕೆ ಯೆಂಡ ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’ ಅಂದಿ ರತ್ನ ಪಡಕಾನೇಗೆ ವೊಂಟಿ, ಬೆಟ್ಟದ ನೆತ್ತಿ ಮೇಗೆ ವೋಯ್ತಿದ್ದಂಗೆ ನಿಂತ! ಕಲ್ಲಾದಂಗೆ ಕುಂತ! ೨ ಸುತ್ತ ಸಾಯೋ ಬಿಸಿಲಿನ್ ಚಾಪೆ! ಅಲ್ಲಲ್...
ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ದುಃಖ...
ಇಂದಿನ ಸತ್ಯವನು ಮುಂದಿನ ತಲೆಮಾರಿಗೆ ಸಾಗಿಸುವ ವಾಹಕ ಸತ್ಯದ ಪಕ್ಷಪಾತಿ ಗಟ್ಟಿ ಬೆಟ್ಟದಂತೆ ನಿಲ್ಲುವುದು ಎಂದಿಗೂ ನನ್ನ ಲೇಖನಿ ಧರ್‍ಮಕ್ಕೆ ಬದ್ದವಾಗಿ ಅಧರ್‍ಮಕ್ಕೆ ಶತ್ರುವಾಗಿ ಸಾತ್ವಿಕತೆಯ ಪರವಾಗಿ ಎದ್ದು ನಿಲ್ಲುವದು ಎಂದಿಗೂ ನನ್ನ ಲೇಖನಿ! ಸಾತ...
ಒಲ್ಲೆವಿದನಿನ್ನು ಹರಳಡಸಿದೀ ಹಿಡಿತುತ್ತೆ? ಕೊರಳು ಕರುಳಂ ಬಗಿನ ಬುತ್ತಿ ತಾನಲ್ಲ? ಕೊಡಿಗೆ ಎನಲೊಂದೆ-‘ಆಂಗ್ಲರೆ, ನಡಿರಿ ಈವತ್ತೆ! ನೀವಿಲ್ಲಿಹನ್ನೆಗಂ ಬಿಡುಗಡೆಮಗಿಲ್ಲ!’ ಒಂದು ಕೆಯ್ಯಂದೀ ಉದಾರ (!) ಕೊಡಿಗೆಯ ಕೊಟ್ಟು ತಾವಿನ್ನು ತೆರಳಲಿಹೆನೆಂದು ...
ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮಬಾಲೆ ಬಾಳೆ ಹೊಂಬಾಳೆ ಕಾಯೆ ನಮಗೆ ಚೇತನವೇ ಬಾಳಿಂದು ಮುಡಿಪು ದೇವಿಯೆ ಕರುನಾಡು ತಾಯೆ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಾಸಿಗೆಯ ಸುಖ ಹೀರಿ ಹುಳುಹಾಗೆ ಸೊರಗಿದೆ, ಅವನ ಸೊಕ್ಕಿದ ಸರಳು, ಅದರ ದಪ್ಪನೆ ಕುಡಿ ಹುಳು ಹಾಗೆ ತೆವಳಿದೆ, ಆವೇಶ ತೀರಿ ಹುಳು ಹಾಗೆ ಕುರುಡಿದೆ. *****...













