
ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****...
ಕಟ್ಟಿಸಿದ ನಲ್ಲೆಗಾಗಿ ಷಹಜಹಾನ್ ತಾಜ್ಮಹಲ್ಲು ಕಟ್ಟಿಸುವೆ ನಲ್ಲೆ ನಿನಗಾಗಿ ಚಿನ್ನದ ಹಲ್ಲು *****...
ಅದಮ್ಯ ಭಸ್ಮಾಸುರ ಹಸಿವೆಗೆ ಸಿಕ್ಕ ಸಿಕ್ಕ ರೊಟ್ಟಿ ನುಣ್ಣಗೆ ಸಫಾಯಿ. ಇದೋ ಉದರ ತುಂಬಿತೆನ್ನುವ ವೇಳೆಗೆ ಅಗಾಧ ಹಸಿವು ಚಪಲದ ನಾಲಿಗೆಗೆ. *****...
ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು ಇಳೆಯಲ್ಲ’...
ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****...
ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು ಸಮನಾಗಿ ನೀಡುತಲಿ|| ಹಿರಿಯರಿರಲಿ ಕಿರಿಯರಿರಲಿ ಭೇದ ಭಾವವ ತೊರದು| ಹಣವಂತನೆ ಆಗಲಿ ...













