ಬದುಕು ಇದು ಹೀಗೆ
ಅದರ ರೀತಿಯೇ ಹಾಗೆ||
ಯಾರ ಮಾತ ಕೇಳದದು
ತನ್ನಂತೆ ತಾನೇ ನಡೆವುದು||

ಏನಿರಲಿ ಇಲ್ಲದಿರಲಿ
ಯಾರಿರಲಿ ಇಲ್ಲದಿರಲಿ
ಸಾಗುತಲಿ ಹೀಗೆ|
ಸುಖ ದುಃಖವನು
ಸಮನಾಗಿ ನೀಡುತಲಿ||

ಹಿರಿಯರಿರಲಿ ಕಿರಿಯರಿರಲಿ
ಭೇದ ಭಾವವ ತೊರದು|
ಹಣವಂತನೆ ಆಗಲಿ
ದೀನ ಬಂಧುವೇ ಆಗಲಿ
ಯಾರ ಗಣನೆಯ ಲೆಕ್ಕಿಸದು||

ಬದುಕಿಗೆ ಯಾವ ದಯೆಯಿಲ್ಲ
ಅದಕೆ ಯಾರ ದಾಕ್ಷಿಣ್ಯವು ಇಲ್ಲ|
ಬದುಕಿಗೆ ಮೇಲು ಕೀಳೆಂಬುದಿಲ್ಲ
ಬದುಕಿಗೆ ಯಾವ ಪಠ್ಯಪುಸ್ತಕವಿಲ್ಲ|
ಅವರವರ ಬದುಕಿಗೆ ಅವರದ್ದೇ ಪಠ್ಯ
ಕಾಲವೇ ಗುರು, ಕರ್ಮವೇ ಗುರಿ ದಾರಿ||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)