Home / Chandrashekara AP

Browsing Tag: Chandrashekara AP

ಮಳೆ ನೀರ ಕೊಯ್ಲೆಂದು ಬರಿ ಹುಯ್ಲಿನಿಂದೇನು ? ಕಾಳು ಬಲಿಯದ ಮೊದಲೇನು ಸವಿಯು? ಹಸುವಿನ ಗೋಳು ಕಳೆಯದೆಲ್ಲಿಯ ಹಾಲು ? ಅನುದಿನವು ಕೊಡು ಕೊಳುವ ಸೇವೆಯಿಲ್ಲದೆತ್ತಣ ಕೃಷಿಯು? ಬೆಳೆವೆಲೆ ಇಲ್ಲದಾ ಬೋಳು ಮರದೊಳೆತ್ತಣ ಕೊಯ್ಲು – ವಿಜ್ಞಾನೇಶ್ವರಾ ...

ಎಮ್ಮ ತನು ಮನಕೊಗ್ಗದುದೇನಾನು ಮೊಂ ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ ಸುಮ್ಮನಳುವಾಗಿ ದೂರ ಸರಿವಂದದಲಿ ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ *****...

ಮಳೆ ನೀರನಿಂಗಿಸುವ ಮಾತುಗಳ ಮಳೆ ಬಂದು ಬೋಳು ನೆಲಮನದ ಮೇಲೆಷ್ಟು ಬಿದ್ದೊಡದೇನು ? ಕಾಳು ಬೆಳೆವೊಡೆ ಹೊಟ್ಟೆ, ತಟ್ಟೆ, ರಟ್ಟೆ, ಬಟ್ಟೆ ಗಳಿಗಿಪ್ಪ ಸಂಬಂಧ ಸಾರದಕ್ಕರೆಯ ಪೋಷಣೆ ಬೇಕು ಹಾಳು ಜಾಹೀರಿಗೆಲ್ಲ ಬೋಳಾಗಿರಲೆತ್ತಣ ಮಳೆಕೊಯ್ಲು – ವಿಜ್ಞ...

ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು ಬಲು ಬಗೆಯೊಳಿರುತಿರಲು ಬಲು ಬಗೆಯೊ ಳಾಲೋಚಿಸಿದೊಡರಿಯುವುದೀ ಮಾಲಿನ್ಯ ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ *****...

ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ...

ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ *****...

ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ ಹೊಸ ಹೊಸತು ಹೊಸಕುತಿರೆ ಹಸುರ ಹಂದರ ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾ...

ದಿನಕೊಂದು ವಿಶ್ವದಿನವೇನ ಮಾಡಿದೊಡೇನು ? ದಿನಪನೊಲವಿನ ದಿನಚರಿಯ ನೇಮವಿಲ್ಲದೆಲೆ ಘನತರದ ದಿನವೆಲ್ಲ ತರತರದ ವಿಶ್ವದಿನಕಾಹುತಿಯು ಧನಕಿಂತಧಿಕ ಧಾನ್ಯವೆಂಬರಿವು ಬಂದಂದು ವನ ವನ್ಯ ಧ್ಯಾನವೊಲಿದಂದು ವಿಶ್ವ ತಾ ಧನ್ಯ – ವಿಜ್ಞಾನೇಶ್ವರಾ *****...

ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು ತರತರದ ವಿಶ್ವದಿನ ದಿನಕೊಂದು ದೋಷ ಸರಿಸಲಿಕೆಂದು ಏನೆ ಮಾಡಿದೊಡದು ಕುಂದು ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ *****...

ಅರರೇ ! ಏನ ಪೇಳಲಿ ಎಮಗಿಂದೊದಗಿರುವ ಪರಿಸರದ ಪಾಠದೊಳಡಗಿರುವ ಹೂಟವನು ? ಪರಿಸರಕೆಂದೊಂದು ದಿನವನು ಮೀಸಲಿಡುತಲಿ ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್ ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ *****...

12345...27

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...