Home / ಸೂಜಿಗಲ್ಲು

Browsing Tag: ಸೂಜಿಗಲ್ಲು

ಪ್ಯಾರೆಲಾಲ್ ಭಾಗಮತಿಯರು ಇಲ್ಲಿ ಬರದೇ ಹೋದರೆ ಅದು ಲಾಲ್‌ಬಾಗ್ ಹೇಗಾದೀತು? ಗಿಡಗಂಟಿ ಪೊಟರೆಗಳ ತುಂಬೆಲ್ಲ ಪ್ಯಾರೆಲಾಲ್‌ನ ಪ್ರೇಮಕಾವ್ಯ- ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ ಭಾಗಮತಿಯ ಕೆನ್ನೆ ಕೆಂಪು ಮೈ ತುಂಬಾ ಚಳಿ ನಾಚಿಕೆ. ಮಾತು ಮಾತಿಗೂ ಕಣ್ಣಲ...

ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು, ಕೊಳ್...

ಬೆಳಗಾಗುವ ಮೊದಲೇ ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ ಹೂವಾಗಿ ಅರಳುವ ಮೊದಲೇ ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ ಬೆಳಗಿನ ಬೆಳಕು ಹೊರಲು ಅನುವಾಗುತಿದೆ ನೋವು ದುಃಖದುಮ್ಮಾನಗಳಬ್ಬರ ಎಲ್ಲರೆದೆಯೊಳಗೆ ಬಗೆ ಬಗೆಯ ಚಿತ್ತಾರ ಎಲ್ಲ ಕಡೆಗೂ ಹ...

ಎಷ್ಟೊಂದು ಹೂವುಗಳು ಈ ಪೇಟೆಯಲಿ ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ ನಾನು ಮರುಳಾಗಿ ಕೊಳ್ಳುವವನೇ ಅಲ್ಲ ಮನೆಯಂಗಳದ ಹೂವು, ಹೂದೋಟದ ಹೂವು ಬೆಟ್ಟದ ಹೂವು, ಕೊಳ್ಳದ ಹೂವು, ಏರ್ ಕಂಡೀಶನ್ ಹೂವು, ಬಣ್ಣವಾಸನೆಗಳ ...

ಸಿಂಗಲ್ ಡಬಲ್ ಬೆಡ್‌ರೂಂಗಳ ಹೌಸಿಂಗ್ ಕಾಂಪ್ಲೆಕ್ಸ್ ಗಗನಚುಂಬಿ ಮನೆಗಳಲಿ ಒಂದೊಂದೇ ಸಂತಾನ ತೊಟ್ಟಿಲು ಅಮ್ಮನ ಎದೆಹಾಲು ಗೊತ್ತಿಲ್ಲ ಬೇಬಿ ಸಿಟ್ಟಿಂಗ್ ನರ್ಸರಿಯ ಸ್ನೇಹಿತರೊಂದಿಗೆ ಮಾತನಾಡಿ ದಿನ ಕಳೆಯುವಾಗ ದುಡಿದ ಮಮ್ಮಿ ಸುಸ್ತಾಗಿ ಮನೆ ಸೇರುತ್ತಾಳ...

ಟಿಪ್ಪುಡ್ರಾಪ್‌ಗೆ ಆತುಕುಳಿತ ಪ್ರೇಮಿಗಳ ನಗು ಅಂಚು ಅಂಚು ಫಳಾರನೆ ಹೊಳೆವ ಅಲಗು ತೂಕ ತಪ್ಪಿದರೆ ನಾಪತ್ತೆಯಾಗುವ ಎಲಬುಗಳು. ಹೆಚ್ಚಾದರೆ ಇಂಚು ಇಂಚಿಗೂ ಬೆಳೆದ ಬೆಟ್ಟದ ದಟ್ಟ ಹೂವುಗಳ ಮಕರಂದ ಪ್ರವಾಸಿ ಕಾಲೇಜು ಹುಡುಗರ ಮೋಜು ನಗು ಫೋಟೊ ಎಷ್ಟೊಂದು ಸ...

ಅಂದುಕೊಂಡಷ್ಟು ಚಳಿ ಏನಲ್ಲ! ಗಾಳಿ ಬಿರುಸು ನೆಪಕ್ಕೆ ಮಧ್ಯಾಹ್ನ ಆದರೆ ಅಡ್ಡಮಳೆ ಬೆಟ್ಟದ ಹಸಿರುವಾಸನೆಯೊಳಗೆ ಪುಕ್ಕಟೆ ಸಿಗುವ ಆಕ್ಸಿಜನ್, ಕುಣಿವ ಸಂಭ್ರಮ ಆ ಬೆಟ್ಟ ಈ ಬೆಟ್ಟ ಮತ್ತೊಂದು ಬೆಟ್ಟ ಅವರ ಬಿಟ್ಟು ಇವರ ಬಿಟ್ಟು ನೀನ್ಯಾರು? ಬೀಡುಬಿಟ್ಟ ಮ...

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ – ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ ದೊರೆ ...

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ, ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ) ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು ನೋವು ರಕ್ತದೊತ್ತಡ...

ಜಿಟಿಜಿಟಿ ಮಳೆಯ ಮುಂಜಾವು ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ! ಮಳೆಯೊಳಗೆ ನೆನೆದ ಪೇಪರ ಹುಡುಗ ಹಾಡುತ್ತ ನಗುತ್ತ ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ ದೇಹಕಂಟಿದ ದುಪಟ್ಟ ಚೂಡಿದಾರ ತೊಯ್ದ ಕೆಲಸದ ಹುಡು...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...