
ಬಾರ ಗೆಳತಿ ಬಾರೆ ಗುಣವತಿ ಬಾಳೆಹಳ್ಳಿಗೆ ಹೋಗುವಾ ಗುಟ್ಟಬೆಟ್ಟದ ಗಂಧ ಗಿರಿಗಳ ಸ್ವಾಮಿ ಪಾದವ ಸೇರುವಾ ಎಲ್ಲಿ ಕೋಗಿಲೆ ಶಿವನ ಪೂಜೆಗೆ ಗೀತ ಮಂತ್ರವ ಹಾಡಿವೆ ಎಲ್ಲಿ ಕಾನನ ಹಸಿರು ಮರಗಳು ಹೂವು ಹಣ್ಣನು ನೀಡಿವೆ ಸುತ್ತ ಮುತ್ತಾ ಬೀಸುಗಾಳಿಯು ಮಹಾಮಂತ್ರ...
ಚಿಂತಿ ಯಾತಕ ಸಂತಿ ಯಾತಕ ಚಿತ್ತ ಚಿನುಮಯ ಓಂ ಓಂ ಬಾಳೆಹಳ್ಳಿಯ ಲಿಂಗಬಳ್ಳಿಗೆ ಲಿಂಗಗೊಂಚಲು ಓಂ ಓಂ ಮಾತು ಮುಗಿಯದು ಶಬ್ದ ಸಾಲದು ನೋಡು ಜ್ಞಾನದ ಎತ್ತರಾ ಸತ್ಯ ಶ್ರೇಷ್ಠರು ಸಾರುತಿರುವಾ ಲಿಂಗತತ್ವವೆ ಉತ್ತರಾ ವೇದ ಆಗಮ ಗೀತ ಶಾಸ್ತ್ರದ ಗಂಟು ಗದಡಿಯ ಒ...
ಅರುಹೆ ಗುರುವು ಕುರುಹೆ ಲಿಂಗ ಯಾಕೆ ಅಂತರಾ ಆದಿ ಗುರುವು ನಾದ ಜ೦ಗಮ ಬೇಡ ಬೆಂತರಾ ಕನಸು ನೀನೆ ಮನಸು ನೀನೆ ಚೈತ್ರ ಚಂದ್ರಮಾ ಯೋಗ ಭೋಗ ಜೀವ ರಾಗ ವಿಶ್ವ ಸ೦ಗಮಾ ಸೋಲು ಗೆಲುವು ನೋವು ನಲಿವು ಲಿಂಗ ಲೀಲೆಯು ಜನನ ಮರಣ ಬಾಳ ಪಯಣ ಹರನ ಕರುಣೆಯು ಒಡಲ ಕಡಲ ...
ಸರಸ ಮುಖಿಯರೆ ಬಾರೆ ಸಖಿಯರೆ ಚಂದ ಚಲುವಿನ ತೋಟಕೆ ಕಮಲ ಮಲ್ಲಿಗಿ ಜಾಜಿ ಸಂಪಿಗಿ ಹೂವು ಎತ್ತಿರೆ ಗುರುವಿಗೆ|| ರಾಜ ರಂಭಾಪುರಿಯ ಗುರುಗಳು ಇಕೋ ಗುರುಕೇದಾರರು ಶ್ರೀಶೈಲದ ಉಜ್ಜಯಿನಿಯ ಕಾಶಿ ಕ್ಷೇತ್ರದ ಶ್ರೇಷ್ಠರು ಕಡಲು ಉಡುಗೆಯ ಮಾಡಿ ತೊಟ್ಟರು ಭುವನ ...
ಎಲ್ಲಿ ಮನುಕುಲ ಕೆರಳಿ ನಿಂತಿದೆ ಅಲ್ಲಿ ಗುರುಕುಲ ಅರಳಿದೆ ಎಲ್ಲಿ ಜನಮನ ಜಾರಿ ಬಿದ್ದಿದೆ ಅಲ್ಲಿ ಜಂಗಮ ಬೆಳಗಿದೆ ಐದು ನಡೆಮಡಿ ಎಂಟು ಉಡುಗೊರೆ ಆರು ಅಟ್ಟದ ಗುಡಿಯಿದು ಗುರುವು ಮುಟ್ಟಿದ ಮಂತ್ರ ಪೀಠದ ನೂರ ಒಂದರ ಮಠವಿದು ಯಾಕೆ ತಳಮಳ ಸಾಕು ಕಳವಳ ಕೇಳ...
ದೀಪ ಸಖಿಯರೆ ದೀಪ ಮುಖಿಯರೆ ದೀಪದಾರತಿ ಎತ್ತಿರೆ ಪರಮ ಪ೦ಚಾಕ್ಷರಿಯ ರತಿಯರೆ ಪಂಚ ಪೀಠಕೆ ಬೆಳಗಿರೆ ತನುವೆ ಹಣತೆಯು ಮನವೆ ತೈಲವು ಜ್ಞಾನದಾರತಿ ಎತ್ತಿರೆ ಕಾಯ ಕಾ೦ಚನ ಪ್ರೇಮ ಸಿಂಚನ ಚಂದ್ರ ಮುಖಿಯರು ಬೆಳಗಿರೆ ತಾಯಿ ಗುರುವಿಗೆ ತಂದೆ ಗುರುವಿಗೆ ಪ್ರೇಮ...
ಗುರುವ ಮರೆತರ ನಿನಗ ಚಂದವೇನ ತಂಗಿ ಮರೆಯಬೇಡಾ ತಂಗಿ ಮರುಗಬೇಡಾ ಬಾಳೆಹೊನ್ನೂರಾಗ ಬಂಗಾರ ಯುಗಬ೦ತ ಕಳಶ ಕನ್ನಡಿ ತುಂಬ ತಾರ ತಂಗಿ ಗುರುವೆ ತಾಯಿಯು ಯುಗಳ ಗುರುವೆ ತಂದಿಯು ಜಗಕ ಚಿತ್ತ ಚಿನುಮಯ ಲಿಂಗ ಗುರುವು ತಂಗಿ ಗುರುವು ತೋರಿದ ದಾರಿ ಸತ್ಯವಂತರ ಭೇ...
ಜಗದ ಚಿ೦ತೆಗೆ ಯುಗದ ಸಂತೆಗೆ ದೇವ ಗುರುಗಳೆ ಉತ್ತರಾ ಜನುಮ ಜನುಮದ ಜೀವ ಯಾತ್ರೆಗೆ ತಂದೆ ಶ್ರೀಗುರು ಹತ್ತರಾ ಪ್ರೇಮರಾಜ್ಯದ ಪ್ರಭುವ ಮರೆತರೆ ಬರಿ ಕತ್ತಲೊ ಕತ್ತಲಾ ಗುರುವನರಿತಾ ಭುವನವೆಲ್ಲಾ ಲಿಂಗರಾಜ್ಯದ ಕೊತ್ತಳಾ ಆತ್ಮಜ್ಞಾನವೆ ಅಮರ ಜ್ಞಾನವು ಕಣ್...
ಗುರುಲಿಂಗ ಜಂಗಮದ ತುದಿಹೆಂಗ ಮೊದಲ್ಹೆಂಗ ಹೂವು ಬೇಕಽ ನನಗ ಹೂವು ಬೇಕ ನೀರಿಲ್ಲ ನೆಲವಿಲ್ಲ ಮುಗಿಲಿಲ್ಲ ಮಾಡಿಲ್ಲ ಹಣ್ಣು ಬೇಕಽ ನನಗ ಹಣ್ಣು ಬೇಕ ಆರುತತ್ವದ ಭೂಮಿ ಐದು ತತ್ವದ ಸೀಮಿ ಮಳೆ ಮಾಡ ಬಿಸಿಲೀನ ಕಂಪ ನೋಡ ತಾಯಿಯೆಂದರು ಗುರುವು ತಂದಿಯೆಂದರು ಗ...
ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ ಆಳ ಸಾಗರ ಶಾಂತ ತಳದಲಿ ಲಿಂಗ ಬಾಗಿಲು ತೆರೆದಿದೆ ನಿನ್ನ ಸ್ಪರ್ಶಾ ಹರ್ಷ ಹರ್ಷಾ ನವಿಲು ನಾಟ...














